Adiyogi Ideol : ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿಯ ಜೊತೆ ನಂದಿ, ಮಹಾಶೂಲದ ಪ್ರತಿಷ್ಠಾಪನೆ

ಚಿಕ್ಕಬಳ್ಳಾಪುರದಲ್ಲಿನ ಸದ್ಗುರು ಸನ್ನಿಧಿಯಲ್ಲಿ 112 ಅಡಿ ಆದಿಯೋಗಿ ಪ್ರತಿಮೆಯ (Adiyogi Ideol) ಮುಂದೆ ನಂದಿ ಹಾಗೂ ಮಹಾಶೂಲದ ಪ್ರತಿಷ್ಠಾಪನೆಯನ್ನು ಮಾಡಲಾಗಿದೆ.

ಸಂಕ್ರಾಂತಿ ಹಬ್ಬ ಸೋಮವಾರದ ಶುಭ ಮುಹೂರ್ತದಲ್ಲಿ ಸದ್ಗುರುಗಳು ನೆರೆದಿದ್ದ ಸಾವಿರಾರು ಭಕ್ತರ ನಡುವೆ ನಂದಿ ಹಾಗೂ ಮಹಾಶೂಲದ ಪ್ರತಿಷ್ಠಾಪನಾ ಕಾರ್ಯ ನೆರವೇರಿಸಿದ್ದಾರೆ. ನಂದಿಯು 21 ಅಡಿಗಳಷ್ಟು ಹಾಗೂ ಮಹಾಶೂಲವು 54 ಅಡಿಗಳಷ್ಟು ಎತ್ತರವಿದೆ.

112 ಅಡಿ ಎತ್ತರದ ಆದಿಯೋಗಿ ಪ್ರತಿಮೆಯ (Adiyogi Ideol) ಮುಂದೆ ನಂದಿ ಹಾಗೂ ಮಹಾಶೂಲದ ಸ್ಥಾಪನೆಯಿಂದಾಗಿ ಸದ್ಗುರು ಸನ್ನಿಧಿ ಕ್ಷೇತ್ರದ ಭವ್ಯತೆ ಹಾಗೂ ಧರ್ಮಶ್ರದ್ಧೆ ಮತ್ತಷ್ಟು ಇಮ್ಮಡಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದ ಧಾರ್ಮಿಕ ಪ್ರವಾಸೋದ್ಯಮ ಕ್ಷೇತ್ರವಾಗಿ ರೂಪುಗೊಂಡಿದ್ದು, ಬೆಂಗಳೂರಿಗರನ್ನು ತನ್ನತ್ತ ಆಕರ್ಷಿಸುತ್ತಿದೆ. ಇದೀಗ, ನಂದಿ ಮೂರ್ತಿ, ತ್ರಿಶೂಲ ಸ್ಥಾಪನೆಯಿಂದಾಗಿ ಮತ್ತಷ್ಟು ಆಕರ್ಷಣೆಯನ್ನು ಪಡೆದುಕೊಂಡಿದೆ.

ಬೆಂಗಳೂರಿನಿಂದ ಸದ್ಗುರು ಸನ್ನಿಧಿಯು 65 ಕಿ.ಮೀ ಅಂತರದಲ್ಲಿದ್ದು, 80 ನಿಮಿಷಗಳ ಪ್ರಯಾಣದ ಮೂಲಕ ಈ ಸ್ಥಳವನ್ನು ತಲುಪಬಹುದು. ಸದ್ಗುರು ಸನ್ನಿಧಿಯನ್ನು ಅಕ್ಟೋಬರ್ 2022 ರಲ್ಲಿ ನಾಗ ಪ್ರತಿಷ್ಠಾಪನೆಯೊಂದಿಗೆ ಸಾರ್ವಜನಿಕರಿಗೆ ತೆರೆಯಲಾಗಿದೆ.

You might also like
Leave A Reply

Your email address will not be published.