Fact Check – ಮುಸ್ಲಿಂ ಶಿಲ್ಪಿಯಿಂದ ಶ್ರೀರಾಮ ಮೂರ್ತಿ ಕೆತ್ತನೆ – ವಾರ್ತಾ ಭಾರತಿಯಿಂದ ಅಪಪ್ರಚಾರ.

ಶತಮಾನಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿದ್ದು, 2024ರ ಜನವರಿ 22 ರಂದು ಶ್ರೀ ರಾಮನು ತನ್ನ ಪೀಠದಲ್ಲಿ ಅಭಿಷಕ್ತನಾಗಲಿದ್ದಾನೆ. ಈ ಅಪೂರ್ವ ಗಳಿಗೆಗಾಗಿ ಇಡೀ ಭಾರತವೇ ಎದುರು ನೋಡುತ್ತಿದೆ. ಈ ನಡುವೆ, ರಾಮಲಲ್ಲಾ ಮೂರ್ತಿಯನ್ನು ಮುಸ್ಲಿಂ ಶಿಲ್ಪಕಾರ ನಿರ್ಮಿಸಿದ್ದಾನೆ ಎನ್ನುವ ಮೂಲಕ ಜನರಲ್ಲಿ ಗೊಂದಲ ಸೃಷ್ಠಿಸುವ ಕೆಲಸವನ್ನು ಹಲವರು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಈ ಸುದ್ದಿ ನಿಜವಾ? ಎನ್ನುವುದರ ಬಗ್ಗೆ ನಿಮ್ಮ ‘ಇತಿಹಾಸ’ ತಂಡ ಸತ್ಯ ಸಂಶೋಧನೆ ಮಾಡಿದ್ದು, ಆ ವರದಿ ಇಲ್ಲಿದೆ.

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುವ ಶ್ರೀರಾಮಲಲ್ಲಾ ಮೂರ್ತಿಯನ್ನು ಪಶ್ಚಿಮ ಬಂಗಾಳದ ಮುಸ್ಲಿಂ ಶಿಲ್ಪಕಲೆಗಾರ ನಿರ್ಮಿಸಿದ್ದಾನೆ ಎಂಬ ಬಗ್ಗೆ ಮಾಹಿತಿ ಹರಿದಾಡಿದೆ. ಈ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿದಾಗ ಈ ಸುದ್ದಿ ಶುದ್ಧ ಸುಳ್ಳು ಎನ್ನುವುದು ಪತ್ತೆಯಾಗಿದೆ. ಮುಸ್ಲಿಂ ಶಿಲ್ಪಕಲೆಗಾರರು ನಿರ್ಮಿಸುತ್ತಿರುವುದು ಗರ್ಭಗುಡಿಯ ರಾಮಲಲ್ಲಾನ ಮೂರ್ತಿಯನ್ನಲ್ಲ ಎಂಬುದು ತಿಳಿದುಬಂದಿದೆ.

ಅಯೋಧ್ಯೆಯಲ್ಲಿ ನಡೆಯಲಿರುವ ಶ್ರೀ ರಾಮ ಮೂರ್ತಿಯ ಪ್ರತಿಷ್ಠಾಪನೆಯ ಸಮಾರಂಭದ ವೇಳೆ ದೇಶದ ಜನತೆಯನ್ನು ಸ್ವಾಗತಿಸಲು ಹಾಗೂ ದೇವಾಲಯದ ಸಂಕೀರ್ಣದಲ್ಲಿ ಸ್ಥಾಪಿಸಲಾಗುವ ಸೀತೆ, ರಾಮ ಹಾಗೂ ಲಕ್ಷ್ಮಣರ ವಿಗ್ರಹಗಳನ್ನು ಮುಸ್ಲಿಂ ಶಿಲ್ಪಿಗಳು ವಿನ್ಯಾಸಗೊಳಿಸಿದ್ದಾರೆಯೇ ಹೊರತು ಮುಖ್ಯ ರಾಮನ ಮೂರ್ತಿಯನ್ನಲ್ಲ. ರಾಮನ ಮೂರ್ತಿಯನ್ನು ಪಶ್ಚಿಮ ಬಂಗಾಳದ 24 ಪರಗಣ ಜಿಲ್ಲೆಯ ಮುಸ್ಲಿಂ ಶಿಲ್ಪಿಗಳಾದ ಮೊಹಮ್ಮದ್ ಜಮಾಲುದ್ದೀನ್ ಮತ್ತು ಅವರ ಮಗ ಬಿಟ್ಟು ವಿನ್ಯಾಸ ಮಾಡಿದ್ದಾರೆ ಎನ್ನುವ ಮೂಲಕ , ಹಿಂದಿಯ ನ್ಯೂಸ್ 24 ಹಾಗೂ ಕನ್ನಡದ ವಾರ್ತಾ ಭಾರತಿ ದೈನಿಕವು ಈ ಬಗ್ಗೆ ಜನರಲ್ಲಿ ಗೊಂದಲವನ್ನುಂಟುಮಾಡುವ ಹಾಗೂ ಅಸತ್ಯದ ಸುದ್ದಿ ಪ್ರಕಟಿಸಿವೆ.

ಅಸತ್ಯದ ಸುದ್ದಿ ಪ್ರಕಟಿಸಿದ ಹಿಂದಿಯ ನ್ಯೂಸ್ 24 ಹಾಗೂ ಕನ್ನಡದ ವಾರ್ತಾಭಾರತಿ
ಅಸತ್ಯದ ಸುದ್ದಿ ಪ್ರಕಟಿಸಿದ ಹಿಂದಿಯ ನ್ಯೂಸ್ 24 ಹಾಗೂ ಕನ್ನಡದ ವಾರ್ತಾಭಾರತಿ

 

ರಮಲಲ್ಲಾ ಮೂರ್ತಿಯ ನಿಜವಾದ ಶಿಲ್ಪಿಗಳು ಯಾರು?

ಕರ್ನಾಟಕದ ಗಣೇಶ ಭಟ್ ಹಾಗೂ ಅರ್ಜುನ್ ಯೋಗಿರಾಜ್ ಮತ್ತು ಜೈಪುರದ ಸತ್ಯೇಂದ್ರ ಪಾಂಡೆಯವರು ಪ್ರತ್ಯೇಕವಾಗಿ 3 ರಮಲಲ್ಲಾನ ಮೂರ್ತಿಗಳ ನಿರ್ಮಾಣ ಮಾಡಲಿದ್ದಾರೆ. ಈ ಮೂರು ಮೂರ್ತಿಗಳಲ್ಲಿ ಉತ್ತಮವಾದುದನ್ನು ಶ್ರೀರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಆಯ್ಕೆ ಮಾಡಲಿದೆ. ಆಯ್ಕೆಯಾದ ಮೂರ್ತಿಯನ್ನು ರಾಮಮಂದಿರದ ಗರ್ಭಗುಡಿಯಲ್ಲೂ ಹಾಗೂ ಉಳಿದ ಎರಡು ಮೂರ್ತಿಗಳನ್ನು ದೇವಾಲಯದ ಸಂಕೀರ್ಣದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಗಣೇಶ್ ಭಟ್  ಹಾಗೂ ಅರುಣ್ ಯೋಗಿರಾಜ್
ಗಣೇಶ್ ಭಟ್ ಹಾಗೂ ಅರುಣ್ ಯೋಗಿರಾಜ್

 

ಕರ್ನಾಟಕ ಗಣೇಶ್ ಭಟ್ ಅವರು ನೆಲ್ಲಿಕಾರು (ಕೃಷ್ಣ ಶಿಲೆ) ಕಲ್ಲಿನಿಂದ ಹಾಗೂ ಅರುಣ್ ಯೋಗಿರಾಜ್ ಅವರು ಕರ್ನಾಟಕದ್ದೇ ಆದ ಮತ್ತೊಂದು ಕಲ್ಲಿನಿಂದ ಮತ್ತು ಸತ್ಯನಾರಾಯಣ ಪಾಂಡೆಯವರು ಮಕ್ರನಾ ಮಾರ್ಬಲ್ ಕಲ್ಲಿನಿಂದ ಮೂರ್ತಿ ನಿರ್ಮಾಣ ಮಾಡುತ್ತಿದ್ದಾರೆ. ಈ ಮೂರು ಜನರೂ ಮುಂಬೈನ ವಸುದೇವ್ ಕಾಮತ್ ಅವರು ಬಿಡಿಸಿದ್ದ ರೇಖಾಚಿತ್ರದ ಆಧಾರದ ಮೇಲೆ 51 ಇಂಚು ಎತ್ತರದ ರಾಮಲಲ್ಲಾ ಮೂರ್ತಿಯ ವಿನ್ಯಾಸ ಕಾರ್ಯ ನಡೆಸುತ್ತಿದ್ದಾರೆ.

ನೆಲ್ಲಿಕಾರು (ಕೃಷ್ಣ ಶಿಲೆ)
ನೆಲ್ಲಿಕಾರು (ಕೃಷ್ಣ ಶಿಲೆ)

 

You might also like
Leave A Reply

Your email address will not be published.