ಎಲ್ಲಿಂದಲೋ ಬಂದ ಮೊಘಲರ ವಂಶಾವಳಿಯೇ ನಮಗೆ ಗೊತ್ತು – ಆದರೆ, ಪ್ರಭು ಶ್ರೀರಾಮರ ವಂಶವಳಿ ಬಗ್ಗೆ ನಮಗೆಷ್ಟು ಗೊತ್ತು?

ಮೊಘಲರ ತಲೆಮಾರು ಯಾವುದು ಎಂದು ಕೇಳಿದರೆ, ಇಡೀ ಅವರ ವಂಶವನ್ನೇ ಅರೆದು ಕುಡಿಯೋ ನಾವುಗಳು ರಾಮನ ತಲೆಮಾರನ್ನು ಮರೆತೆಬಿಟ್ಟಿದ್ದೇವೆ. ಇದಕ್ಕೆ ಕಾರಣ ನಾವಲ್ಲ. ಬೆಳೆದುಬಂದ ಹಾದಿ ಹಾಗಿದೆ. ನಮಗೆ ಮೊಘಲರು ಮುಸಲ್ಮಾನರ ವಂಶಾವಳಿಯ ಕುರಿತು ಅರಿವು ಮೂಡಿಸಿದ್ದಷ್ಟು, ರಾಮನ ಪರಂಪರೆಯನ್ನು ತೋರಿಸಲೇ ಇಲ್ಲ.

ಬಾಬರ್, ಅಕ್ಬರ್, ಶಜಹಾನ್, ಟಿಪ್ಪುಸುಲ್ತಾನ್, ಔರಂಗಜೇಬ್, ಹೈದರ್ ಅಲಿ ಸೇರಿದಂತೆ ಹೀಗೆ ಮೊಘಲರು, ಮುಸಲ್ಮಾನರ ಬಗೆಗೆ ಇತಿಹಾಸವನ್ನು ಕಲಿಸಿ ಅದನ್ನೆ ವೈಭವೀಕರಿಸಿ ನಮ್ಮ ತಲೆಗೆ ತುಂಬಿದಷ್ಟು ರಾಮಯಣ ಬಗೆಗೆ ಆಗಲಿ ಅಥವಾ ರಾಮ-ಲಕ್ಷ್ಮಣರ ತಲೆಮಾರಿನ ಕುರಿತಾಗಲಿ ತಿಳಿಸಲೇಯಿಲ್ಲ.

ಮೊಘಲರಿಗೆ ಸಂಬಂಧಿಸಿದಂತೆ ತಂದ ಪಠ್ಯದಷ್ಟು ಹಿಂದು ಪುರಾಣಗಳನ್ನು ತರಲಿಲ್ಲ. ಹಾಗೆ ಪಠ್ಯಗಳು ತಂದರು ಅವುಗಳು ಕಾಲ್ಪನಿಕ, ನಂಬಿಕೆ ಎಂದೇ ಬಿಂಬಿಸಿದರು. ಈ ಕಾರಣದಿಂದಲೇ ಇತಿಹಾಸ ಪುಟಗಳಲ್ಲಿ ರಾಮನ ವಂಶವೃಕ್ಷ ಬರಲೇಯಿಲ್ಲ. ನಿಮ್ಮಲ್ಲಿ ಎಷ್ಟು ಜನಕ್ಕೆ ಶ್ರೀರಾಮನ ತಲೆಬೇರು ಬ್ರಹ್ಮ ಎಂಬುವುದು ಗೊತ್ತು? ಹಿಂದು ಧರ್ಮಕ್ಕೆ ತಂದೆ-ತಾಯಿ ಇಲ್ಲ ಎನ್ನುವವರು ಒಮ್ಮೆ ಇದನ್ನು ಓದಿ.

ರಾಮನ ವಂಶವೃಕ್ಷ:

1. ದಶರಥನ ಮಗ ರಾಮ
2. ಅಜನ ಮಗ ದಶರಥ
3. ನಾಭಾಗನ ಮಗ ಅಜ
4. ಯಯಾತಿಯ ಮಗ ನಾಭಾಗ
5. ನಹುಶನ ಮಗ ಯಯಾತಿ
6. ಅಂಬರೀಶನ ಮಗ ನಹುಶ
7. ಪ್ರಶಿಷ್ಯಕನ ಮಗ ಅಂಬರೀಶ
8. ಮರುವಿನ ಮಗ ಪ್ರಶಿಷ್ಯಕ
9. ಶೀಘ್ರವೇದನ ಮಗ ಮರು
10. ಅಗ್ನಿವರ್ಣನ ಮಗ ಶೀಘ್ರವೇದ
11. ಸುದರ್ಶನನ ಮಗ ಅಗ್ನಿವರ್ಣ
12. ಶಂಖನುವಿನ ಮಗ ಸುದರ್ಶನ
13. ಪ್ರವುರ್ಧನ ಮಗ ಶಂಖನು
14. ರಘುವಿನ ಮಗ ಪ್ರವುರ್ಧ
15. ಕಕುತ್ಸುವಿನ ಮಗ ರಘು
ರಘು ಕಾಲ ಎಂಬುದು ಪ್ರಾರಂಭವಾಗಿದ್ದೆ ಇಲ್ಲಿಂದ. ಇದಕ್ಕೆ ಪುರಾವೆ ಎಂಬಂತೆ,
“ರಘು ಕುಲ್ ರೀತ್
ಸದಾ ಚಲೀ ಆಯಿ
ಪ್ರಾಣ್ ಚಾಯಿ ಪರ್
ವಚನ್ ನ ಜಾಯಿ”
16. ಭಗೀರಥನ ಮಗ ಕಕುತ್ಸು
17. ದಿಲೀಪನ ಮಗ ಭಗೀರಥ
ಭಗೀರಥ ಯಾರು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ. ಗಂಗೆಯನ್ನು ಭೂಮಿಗೆ ಕರೆತಂದಂತಹ ಮಹಾನ್ ಪುರುಷ. ಆದ್ದರಿಂದಲೇ ಗಂಗೆಯನ್ನು ಭಗೀರಥಿ ಎಂದು ಕರೆಯುತ್ತೇವೆ.
18. ಅಂಶುಮಂತನ ಮಗ ದಿಲೀಪ
19. ಅಸಮಂಜಸನ ಮಗ ಅಂಶುಮಂತ
20. ಸಗರನ ಮಗ ಅಸಮಂಜಸ*
21. అಶೀತಿಯ ಮಗ ಸಗರ
22. ಭರತನ ಮಗ ಅಶೀತಿ
23. ಧೃವಸಂಧಿಯ ಮಗ ಭರತ
24. ಸುಸಂಧಿಯ ಮಗ ಧೃವಸಂಧಿ
25. ಮಾಂಧಾತುವಿನ ಮಗ ಸುಸಂಧಿ
26. ದುಂಧುಮಾರುವಿನ ಮಗ ಮಾಂಧಾತ
27. ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
28. ಪೃಥುವಿನ ಮಗ ತ್ರಿಶಂಕು
29. ಅನರಣ್ಯನ ಮಗ ಪೃಥು
30. ಬಾಣನ ಮಗ ಅನರಣ್ಯ
31. ವಿಕುಕ್ಷಿಯ ಮಗ ಬಾಣ
32. ಕುಕ್ಷಿಯ ಮಗ ವಿಕುಕ್ಷಿ
33. ಇಕ್ಷ್ವಾಕುವಿನ ಮಗ ಕುಕ್ಷಿ
34. ಮನುವಿನ ಮಗ ಇಕ್ಷ್ವಾಕು
35. ಸೂರ್ಯನ ಮಗ ಮನು
36. ಕಾಶ್ಯಪರ ಮಗ ಸೂರ್ಯ
37. ಮರೀಚಿಯ ಮಗ ಕಾಶ್ಯಪ
38. ಬ್ರಹ್ಮನ ಮಗ ಮರೀಚಿ
ಈ ವಂಶವೃಕ್ಷದನ್ವಯ ಪ್ರಭು ಶ್ರೀ ರಾಮ ಬ್ರಹ್ಮನ 39ನೇ ಪೀಳಿಗೆ ಅಥವಾ ತಲೆಮಾರಿನವರಾಗಿದ್ದು, ಇವರ ಮಕ್ಕಳು 40ನೇ ತಲೆಮಾರಿನವರಾಗಿದ್ದಾರೆ.

ರಾಮನ ಪೀಳಿಗೆಯನ್ನು ನೋಡುವುದಾದರೆ:

ದಶರಥ – 4 ಜನ ಮಕ್ಕಳು ಮತ್ತು 8 ಜನ ಮೊಮ್ಮಕ್ಕಳು
1. ರಾಮ – ಲವ ಮತ್ತು ಕುಶ
2. ಭರತ – ತಕ್ಷ ಮತ್ತು ಪುಷ್ಕಲ
3. ಲಕ್ಷ್ಮಣ – ಅಂಗದ ಮತ್ತು ಚಂದ್ರಕೇತು
4. ಶತ್ರುಘ್ನ – ಸುಬಾಹು ಮತ್ತು ಶತ್ರುಪಾತಿ

ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ. ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ, ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು.

ಇವರಿಂದ ವಂಶವು ಬೆಳೆಯುತ್ತ ಹೋಗುತ್ತದೆ. ಈ ವಂಶವೃಕ್ಷವನ್ನು ರಾಮನ ತಲೆಮಾರು, ದಶರಥನ ತಲೆಮಾರು, ಇಕ್ಷ್ವಾಕು ವಂಶಸಂಭೂತರು, ಮನುವಿನ ತಲೆಮಾರು, ರಘುವಿನ ವಂಶವೃಕ್ಷ ಹೀಗೆ ನಾನಾ ಹಿರಿಯರ ಹೆಸರಿನಿಂದ ಕರೆಯಲ್ಪಡುತ್ತದೆ.

1. ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ.
2. ಅತಿಥಿಯ ಮಗ ನಿಷಧ
3. ನಿಷಧನ ಮಗ ನಭ
4. ನಭನ ಮಗ ಪುಂಡರೀಕ
5. ಪುಂಡರೀಕನ ಮಗ ಕ್ಷೇಮಧನ್ವಾ
6. ಕ್ಷೇಮಧನ್ವಾ ಮಗ ದೇವಾನೀಕ
7. ದೇವಾನೀಕನ ಮಗ ಅನೀಹ
8. ಅನೀಹನ ಮಗ ಪಾರಿಯಾತ್ರ
9. ಪಾರಿಯಾತ್ರನ ಮಗ ಬಲಸ್ಥಲ
10. ಬಲಸ್ಥಲನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ.
11. ವಜ್ರನಾಭನ ಮಗ ಖಗಣ
12. ಖಗಣ ಮಗ ವಿಧೃತಿ
13. ವಿಧೃತಿ ಮಗ ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡೆದ.
14. ಹಿರಣ್ಯನಾಭನ ಮಗ ಪುಷ್ಯ
15. ಪುಷ್ಯ ಮಗ ಧ್ರುವಸಂಧಿ
16. ಧ್ರುವಸಂಧಿ ಮಗ ಸುದರ್ಶನ
17. ಸುದರ್ಶನ ಮಗ ಅಗ್ನಿವರ್ಣ
18. ಅಗ್ನಿವರ್ಣ ಮಗ ಶೀಘ್ರ
19. ಶೀಘ್ರ ಮಗ ಮರು. ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ. ಈಗಲೂ ಈ ಮರು ಮಹಾರಾಜನು ಕಲಾಪವೆಂಬ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ. ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ.
20. ಮರುವಿನ ಮಗ ಪ್ರಸುಶ್ರುತ
21. ಪ್ರಸುಶ್ರುತ ಮಗ ಸಂಧಿ
22. ಸಂಧಿಯ ಮಗ ಅಮರ್ಷಣ
23. ಅಮರ್ಷಣ ಮಗ ಮಹಸ್ವಂತ
24. ಮಹಸ್ವಂತ ಮಗ ವಿಶ್ವಸಾಹ್ವ
25. ವಿಶ್ವಸಾಹ್ವ ಮಗ ಪ್ರಸೇನಜಿತ್
26. ಪ್ರಸೇನಜಿತ್ ಮಗ ತಕ್ಷಕ
27. ತಕ್ಷಕ ಮಗ ಬೃಹದ್ಬಲ – ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ.
28. ಬೃಹದ್ಬಲನ ಮಗ ಬೃಹದ್ರಣ
29. ಬೃಹದ್ರಣ ಮಗ ಉರುಕ್ರಿ
30. ಉರುಕ್ರಿ ಮಗ ವತ್ಸವೃದ್ಧ
31. ವತ್ಸವೃದ್ಧ ಮಗ ಪ್ರತಿವ್ಯೋಮ
32. ಪ್ರತಿವ್ಯೋಮ ಮಗ ಭಾನು
33. ಭಾನು ಮಗ ದಿವಾಕ
34. ದಿವಾಕ ಮಗ ಸಹದೇವ
35. ಸಹದೇವ ಮಗ ಬೃಹದಶ್ವ
36. ಬೃಹದಶ್ವ ಮಗ ಭಾನುಮಂತ
37. ಭಾನುಮಂತ ಮಗ ಪ್ರತೀಕಾಶ್ವ
38. ಪ್ರತೀಕಾಶ್ವ ಮಗ ಸುಪ್ರತೀಕ
39. ಸುಪ್ರತೀಕ ಮಗ ಮರುದೇವ
40. ಮರುದೇವ ಮಗ ಸುನಕ್ಷತ್ರ
41. ಸುನಕ್ಷತ್ರ ಮಗ ಪುಷ್ಕರ
42. ಪುಷ್ಕರ ಮಗ ಅಂತರಿಕ್ಷ
43. ಅಂತರಿಕ್ಷ ಮಗ ಸುತಪಸ
44. ಸುತಪಸ ಮಗ ಅಮಿತ್ರಜಿತ್
45. ಅಮಿತ್ರಜಿತ್ ಮಗ ಬೃಹದ್ರಾಜ
46. ಬೃಹದ್ರಾಜ ಮಗ ಬರ್ಹಿ
47. ಬರ್ಹಿ ಮಗ ಕೃತಂಜಯ
48. ಕೃತಂಜಯ ಮಗ ರಣಂಜಯ
49. ರಣಂಜಯ ಮಗ ಸಂಜಯ
50. ಸಂಜಯ ಮಗ ಶಾಕ್ಯ
51. ಶಾಕ್ಯ ಮಗ ಶುದ್ಧೋದ
52. ಶುದ್ಧೋದ ಮಗ ಲಾಂಗಲ
53. ಲಾಂಗಲ ಮಗ ಪ್ರಸೇನಜಿತ್
54. ಪ್ರಸೇನಜಿತ್ ಮಗ ಕ್ಷುದ್ರಕ
55. ಕ್ಷುದ್ರಕ ಮಗ ರಣಕ
56. ರಣಕ ಮಗ ಸುರಥ
57. ಸುರಥ ಮಗ ಸುಮಿತ್ರ
ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು.

You might also like
Leave A Reply

Your email address will not be published.