ನಿಮ್ಮ ವಿದ್ಯುತ್ ಸಮಸ್ಯೆಗಳ ದೂರುಗಳನ್ನು ನಮ್ಮ ವಿವಿಧ ವಿಧಾನಗಳ ಮೂಲಕ ದಾಖಲಿಸಬಹುದು!

ಚಾ.ವಿ.ಸ.ನಿ.ನಿ ಯು ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ವಿದ್ಯುತ್ ಗ್ರಾಹಕರಿಗೆ ಅತ್ಯುತ್ತಮ ಗ್ರಾಹಕಸ್ನೇಹಿ ಸೇವೆ ನೀಡುವುದರ ಜೊತೆಗೆ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.

ಚಾ.ವಿ.ಸ.ನಿ.ನಿ ಯ ಗ್ರಾಹಕರು ತಮ್ಮ ವಿದ್ಯುತ್ ಸಮಸ್ಯೆಗಳನ್ನು ವಿವಿಧ ವಿಧಾನಗಳ ಮೂಲಕ ದಾಖಲಿಸಬಹುದು:

ಚಾ.ವಿ.ಸ.ನಿ.ನಿ ಯ 24×7 ಸಹಾಯವಾಣಿ 1912

ಚಾ.ವಿ.ಸ.ನಿ.ನಿ ವ್ಯಾಪ್ತಿಯ ಗ್ರಾಹಕರ ವಿದ್ಯುತ್ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಚಾ.ವಿ.ಸ.ನಿ.ನಿ ಯು 24×7 ಸಹಾಯವಾಣಿಯನ್ನು ಹೊಂದಿದ್ದು, ಗ್ರಾಹಕರು ವಿದ್ಯುತ್ ವ್ಯತ್ಯಯ, ವಿದ್ಯುತ್ ಅವಘಡಗಳು, ಯೋಜನೆಗಳು ಹಾಗೂ ಇನ್ನಿತರ ಯಾವುದೇ ವಿದ್ಯುತ್ ಸಮಸ್ಯೆಗಳಿದ್ದಲ್ಲಿ ಸಹಾಯವಾಣಿಗೆ ಕರೆಮಾಡಿ, ತ್ವರಿತ ಪರಿಹಾರವನ್ನು ಪಡೆಯಬಹುದಾಗಿದೆ.

ಚಾ.ವಿ.ಸ.ನಿ.ನಿ ಇ-ಮೇಲ್ ಸೇವೆ

ಗ್ರಾಹಕರು ತಮ್ಮ ವಿದ್ಯುತ್ ಸಮಸ್ಯೆಗಳನ್ನು ಚಾ.ವಿ.ಸ.ನಿ.ನಿ ಯ ಇ-ಮೇಲ್ ವಿಳಾಸ [email protected] ಗೆ ಕಳುಹಿಸಬಹುದಾಗಿದ್ದು, ಸಮಸ್ಯೆಗಳಿಗೆ ಅತ್ಯಂತ ತ್ವರಿತ ಪರಿಹಾರವನ್ನು ಚಾ.ವಿ.ಸ.‌ನಿ.ನಿ ಯು ಕಲ್ಪಿಸುತ್ತಿದೆ.

ಚಾ.ವಿ.ಸ.ನಿ.ನಿ ವಾಟ್ಸಾಪ್ ಸಹಾಯವಾಣಿ ಸಂಖ್ಯೆ – 9448991912

ವಾಟ್ಸಾಪ್ ಸಹಾಯವಾಣಿ ಸಂಖ್ಯೆಯನ್ನು ಚಾ.ವಿ.ಸ.ನಿ.ನಿ ಹೊಂದಿದ್ದು, ಗ್ರಾಹಕರು ತಮ್ಮ ವಿದ್ಯುತ್ ಸಮಸ್ಯೆಗಳ ಕುರಿತಾದ ಫೋಟೋ, ವೀಡಿಯೋ ಅಥವಾ ಸಂದೇಶವನ್ನು ವಾಟ್ಸಾಪ್ ಸಹಾಯವಾಣಿ ಸಂಖ್ಯೆ 9448991912 ಕ್ಕೆ ಕಳುಹಿಸಬಹುದಾಗಿದೆ.

ಚಾ.ವಿ.ಸ.ನಿ.ನಿ ಸಂದೇಶ ಸಹಾಯವಾಣಿ ಸಂಖ್ಯೆ – 9220592205

ಕೀಪ್ಯಾಡ್ ಮೊಬೈಲ್ ಬಳಕೆದಾರರು ತಮ್ಮ ವಿದ್ಯುತ್ ಸಮಸ್ಯೆಗಳನ್ನು ಚಾ.ವಿ.ಸ.ನಿ.ನಿ ಯ ಸಂದೇಶ ಸಹಾಯವಾಣಿ ಸಂಖ್ಯೆ 9220592205 ಕ್ಕೆ ಸಂದೇಶ ಕಳುಹಿಸಿ, ವಿದ್ಯುತ್ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬಹುದು.

ಇವುಗಳಲ್ಲದೆ, ನಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯುತ್ ಸಂಬಂಧಿತ ದೂರುಗಳನ್ನು ದಾಖಲಿಸಬಹುದು:

ಎಕ್ಸ್ ಖಾತೆ : @cesc_mysore

ಫೇಸ್ಬುಕ್ ಖಾತೆ:
Chamundeshwari Electricity Supply Corporation limited – CESC

ಇನ್ಸ್ಟಾಗ್ರಾಮ್ ಖಾತೆ: cescltd.mysore

You might also like
Leave A Reply

Your email address will not be published.