ವಿದ್ಯುತ್ ಸುರಕ್ಷತೆಯ ಬಗ್ಗೆ ಎಚ್ಚರವಹಿಸಿ- ವಿದ್ಯುತ್ ಅವಫಡಗಳು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ!

ವಿದ್ಯುತ್ ಅವಘಡಗಳು ದಿನೇ ದಿನೇ ಹೆಚ್ಚುತ್ತಿದ್ದು, ಪ್ರತಿದಿನ ಪತ್ರಿಕೆ, ಮಾಧ್ಯಮಗಳಲ್ಲಿ ವಿದ್ಯುತ್ ಅವಘಡಗಳ ಸುದ್ದಿಗಳನ್ನು ನಾವು ನೋಡುತ್ತಿದ್ದೇವೆ. ಚಾ.ವಿ.ಸ.ನಿ.ನಿ ಯು ತನ್ನ ಅಧಿಕೃತ ಜಾಲತಾಣಗಳಲ್ಲಿ ವಿದ್ಯುತ್ ಅವಘಡಗಳ ಕುರಿತು ಜಾಗೃತಿಯನ್ನು ಮೂಡಿಸುತ್ತಿದೆ. ವಿದ್ಯುತ್ ಕುರಿತಾದ ನಿರ್ಲಕ್ಷ್ಯ ಹಾಗೂ ಅವಸರದ ವಿದ್ಯುತ್ ಬಳಕೆಯ ನಡೆಗಳು ವಿದ್ಯುತ್ ಅವಘಡಗಳಿಗೆ ಕಾರಣವಾಗುತ್ತಿವೆ. ಜನ ಸಾಮಾನ್ಯರು ವಿದ್ಯುತ್ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ವಿದ್ಯುತ್ ಅವಘಡಗಳಿಂದ ತಮ್ಮ ಜೀವವನ್ನು ರಕ್ಷಿಸಿಕೊಳ್ಳಬಹುದಾಗಿದೆ.

ಯಾವುದೇ ವಿದ್ಯುತ್ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತಹ ರೀತಿಯಲ್ಲಿ ವಿದ್ಯುತ್ ಜಾಲಗಳನ್ನು, ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಮತ್ತು ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಲಾಗುತ್ತಿದೆ. ಅದಾಗ್ಯೂ, ವಿದ್ಯುತ್ ಅವಘಡಗಳು ಸಂಭವಿಸುತ್ತಿರುವುದರಿಂದ ಸಾರ್ವಜನಿಕರು ಕೆಲವು ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ.

ಹೀಗೆ ಮಾಡಿ:

  • ಇಲೆಕ್ಟ್ರಿಷಿಯನ್ ಸಹಾಯದಿಂದ ವಿದ್ಯುತ್ ಉಪಕರಣಗಳ ದುರಸ್ತಿ ಮತ್ತು ಪರೀಕ್ಷೆ ಮಾಡಿರಿ.
  • ವಿದ್ಯುತ್ ಮಾರ್ಗ ಹಾಗೂ ಕಟ್ಟಡಗಳ ನಡುವೆ ಅಂತರ ಕಾಯ್ದುಕೊಳ್ಳಿ.
  • ವಿದ್ಯುತ್ ಅವಘಡ ತಡೆಯಲು ಅರ್ಥ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್ ಅಳವಡಿಸಿ.
  • ಯಾವಾಗಲೂ ಐ.ಎಸ್.ಐ ಅಂಗೀಕೃತ ಗುಣಮಟ್ಟದ ವಿದ್ಯುತ್ ಉಪಕರಣಗಳನ್ನು ಬಳಸಿ.
  • ಮನೆಯಲ್ಲಿ BEE-5 ಸ್ಟಾರ್ ಹೊಂದಿರುವ ಉತ್ತಮ ಗುಣಮಟ್ಟದ ವಿದ್ಯುತ್ ಪರಿಕರಗಳನ್ನು ಅಳವಡಿಸಿ‌.

ಹೀಗೆ ಮಾಡದಿರಿ :

  •  ಜಾನುವಾರುಗಳನ್ನು ವಿದ್ಯುತ್ ಕಂಬಗಳಿಗೆ ದಯವಿಟ್ಟು ಕಟ್ಟದಿರಿ.
  • ಒದ್ದೆ ಕೈಗಳಿಂದ ವಿದ್ಯುತ್ ಸ್ವಿಚ್’ಗಳನ್ನು ಸ್ಪರ್ಶಿಸದಿರಿ.
  • ವಿದ್ಯುತ್ ತಂತಿಗಳು ಹಾಯ್ದು ಹೋಗಿರುವ ಸ್ಥಳಗಳಲ್ಲಿ ಮಕ್ಕಳು ಗಾಳಿಪಟ ಹಾರಿಸದಿರುವಂತೆ ನೋಡಿಕೊಳ್ಳಿ.
  • ವಿದ್ಯುತ್ ಕಂಬಗಳ ಸಮೀಪ ಆಶ್ರಯ ಪಡೆಯದಿರಿ.

ಯಾವುದೇ ರೀತಿಯ ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ಚಾ.ವಿ.ಸ.ನಿ.ನಿ ಯ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ.

You might also like
Leave A Reply

Your email address will not be published.