ಗೃಹ ಜ್ಯೋತಿ – ರಾಜ್ಯದ ಜನತೆಯ ಮನೆ ಬೆಳಗಿದ ಯೋಜನೆ.

ಗೃಹ ಬಳಕೆಯ ಗ್ರಾಹಕರಿಗೆ ಮಾಸಿಕ 200 ಯೂನಿಟ್’ಗಳವರೆಗೆ ಉಚಿತ ವಿದ್ಯುತ್ ನೀಡುವ ಮಹತ್ವಾಕಾಂಕ್ಷಿ ಯೋಜನೆಯು ಇದಾಗಿದೆ. ಈ ಯೋಜನೆಗೆ ಪ್ರಾರಂಭದಿಂದಲೂ ಒಳ್ಳೆಯ ಪ್ರತಿಕ್ರಿಯೆ ಲಭ್ಯವಾಗಿದೆ. ಜೂನ್ 18 ರಂದು ರಾಜ್ಯಾದ್ಯಂತ ಯಶಸ್ವಿಯಾಗಿ ನೋಂದಣಿ ಆರಂಭವಾಗಿದ್ದು, ಪ್ರಸ್ತುತ ಒಟ್ಟು 1.61 ಕೋಟಿ ಜನತೆಯ ನೋಂದಣಿಯೊಂದಿಗೆ ದಾಖಲೆಯ ಶೇ. 82.49 ನೋಂದಣಿಯು ಸಾಧ್ಯವಾಗಿದೆ.

ಗ್ರಾಹಕರು ಈ ಯೋಜನೆಯಡಿ ಯಾವುದೇ ಸಮಯದಲ್ಲಿ ನೋಂದಣಿಯಾಗಬಹುದಾಗಿದ್ದು, ನೋಂದಣಿಗೆ ಯಾವುದೇ ರೀತಿಯ ಕೊನೆಯ ದಿನಾಂಕವಿಲ್ಲ. ರಾಜ್ಯಾದ್ಯಂತ ಅಂದಾಜು 2 ಕೋಟಿಯವರೆಗೆ ಗೃಹಬಳಕೆಯ ವಿದ್ಯುತ್ ಬಳಕೆದಾರರಿದ್ದಾರೆ. ಜುಲೈ 27ರ ಒಳಗಾಗಿ 1.42 ಕೋಟಿ ಜನ ಯಶಸ್ವಿಯಾಗಿ ನೋಂದಣಿ ಮಾಡಿಕೊಂಡಿದ್ದು, ಅರ್ಹರಿಗೆ ಆಗಸ್ಟ್ ತಿಂಗಳ ಬಿಲ್ ಶೂನ್ಯವಾಗಿ ಗೃಹ ಬಳಕೆದಾರರಿಗೆ ಲಭಿಸಿದೆ.

ಇದುವರೆಗೂ ನೋಂದಣಿ ಮಾಡಿಕೊಳ್ಳದ ಅರ್ಹರು ಶೀಘ್ರವೇ ತಮ್ಮ ಹತ್ತಿರುವ ಬೆಂಗಳೂರು ಒನ್, ಅಟಲ್ ಜೀ ಜನಸ್ನೇಹಿ ಕೇಂದ್ರ, ಬಾಪೂಜಿ ಸೇವಾ ಕೇಂದ್ರ, ಗ್ರಾಮ ಒನ್, ಹತ್ತಿರದ ವಿದ್ಯುತ್ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬಹುದು ಅಥವಾ ಈ ಯೋಜನೆಯನ್ನು ಪಡೆಯಲು ಕರ್ನಾಟಕ ಸರ್ಕಾರದ ಸೇವಾ ಸಿಂಧು ಪೋರ್ಟಲ್ ನಲ್ಲಿ https://sevasindhugs.karnataka.gov.in/ ಆಧಾರ್ ಸಂಖ್ಯೆ, ಬಿಲ್ ನಲ್ಲಿ ನಮೂದಿಸಲಾಗಿರುವ ಗ್ರಾಹಕರ ಖಾತೆ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಬಹುದಾಗಿದೆ.

ಈಗಾಗಲೇ ಭಾಗ್ಯಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆಯಡಿಯಲ್ಲಿ ಸೌಲಭ್ಯವನ್ನು ಪಡೆಯುತ್ತಿದ್ದರೂ ಸಹ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ.

You might also like
Leave A Reply

Your email address will not be published.