ರಾಮಮಂದಿರದ ಪವಿತ್ರ ಮಂತ್ರಾಕ್ಷತೆ ನಿಮಗೆ ತಲುಪಿದೆಯೇ? – ಅದರ ಫಲ ಪ್ರಾಪ್ತಿಗಾಗಿ ನೀವೇನು ಮಾಡಬೇಕು?

ಅಯೋಧ್ಯೆಯ ರಾಮಮಂದಿರದ ಮಂತ್ರಾಕ್ಷತೆ ದೇಶದ ಪ್ರತಿಯೊಂದು ಮನೆಗೂ ತಲುಪಿದೆ. ನಿಮ್ಮನೆಗೆ ಇನ್ನೂ ತಲುಪಿಲ್ಲ ಅಂದ್ರೆ ಡೋಂಟ್ ವರಿ, ರಾಮನ ಮೇಲೆ ವಿಶ್ವಾಸವಿಡಿ, ಶೀಘ್ರದಲ್ಲೇ ನಿಮ್ಮನೆಗೂ ತಲುಪುತ್ತೆ. ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ಏನು ಮಾಡಬೇಕು? ಅದನ್ನು ಹೇಗೆ ಆರೈಕೆ ಮಾಡಬೇಕು? ಹೇಗೆ ಪೂಜೆ ಮಾಡಬೇಕು? ಎಂಬಿತ್ಯಾದಿ ಮಾಹಿತಿಗಳು ಇಲ್ಲಿದೆ.

ದೇಶದ ಪ್ರತಿ ಹಿಂದೂವಿನ ಮನೆಮನೆಗೂ ಮಂತ್ರಾಕ್ಷತೆ ತಲುಪುತ್ತಿದೆ. ಮಂತ್ರಾಕ್ಷತೆ ಪಡೆದುಕೊಂಡವರು ಅದನ್ನು ಈಗಲೇ ಉಪಯೋಗ ಮಾಡುವಂತಿಲ್ಲ. ಜನವರಿ 22 ರವರೆಗೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಭದ್ರವಾಗಿ ಎತ್ತಿಡಿ. ದಿನನಿತ್ಯ ದೇವರಿಗೆ ಪೂಜೆ ಮಾಡುವಾಗ ಆ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸಿ.

ಮಂತ್ರಾಕ್ಷತೆ ಯಾವಾಗ ಪ್ರಾಪ್ತವಾಗುತ್ತದೆ?

ನಮ್ಮೆಲ್ಲರ ಕಾತುರದ, ಕನಸಿನ ದಿನವಾದ ಜನವರಿ 22, ಸೋಮವಾರ ಮಧ್ಯಾಹ್ನ 12 ಗಂಟೆ 29 ನಿಮಿಷ 08 ಸೆಕೆಂಡು ಮೇಘಲಗ್ನದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ನಮ್ಮೆಲ್ಲರ ಆರಾಧ್ಯ ಶ್ರೀ ರಾಮಚಂದ್ರನ ಭವ್ಯ ಮೂರ್ತಿಯ ಪ್ರಾಣಪ್ರತಿಷ್ಠೆ ನಡೆಯುತ್ತದೆ. ಆ ಬಳಿಕ ಮಂತ್ರಾಕ್ಷತೆಗೆ ದಿವ್ಯ ಶಕ್ತಿ ಪ್ರಾಪ್ತವಾಗಲಿದೆ.

ಮಂತ್ರಾಕ್ಷತೆಯನ್ನು ಏನು ಮಾಡಬೇಕು?

1. ಬೇಯುತ್ತಿರುವ ಅಕ್ಕಿಯೊಡನೆ ಈ ಮಂತ್ರಾಕ್ಷತೆಯನ್ನು ಹಾಕಿ ಅದನ್ನು ಅನ್ನವಾಗಿ ಪರಿವರ್ತಿಸಿ ಸೇವಿಸಬಹುದು.
2. ಮಂತ್ರಾಕ್ಷತೆಯನ್ನು ಮನೆಯವರೆಲ್ಲಾ ಹಂಚಿಕೊಂಡು ಶ್ರದ್ಧೆಯಿಂದ ತಲೆಗೆ ಹಾಕಿಕೊಳ್ಳಬಹುದು.
3. ಪಾಯಸ ಮಾಡಿ ಸೇವಿಸಬಹುದು.
4. ನಮ್ಮ ಹಣ, ಚಿನ್ನ ಇಡುವ ಜಾಗದಲ್ಲಿ ಅಥವಾ ಕಪಾಟಿನಲ್ಲಿ ಭದ್ರವಾಗಿ ಇಡಬಹುದು.
5. ಮನೆಯ ಎದುರಿನ ಬಾಗಿಲಿನ ಮೇಲೆ ಬಟ್ಟೆಯಲ್ಲಿ ಸುತ್ತಿ ಭದ್ರವಾಗಿ ಕಟ್ಟಿ ಇಡಬಹುದು.
6. ದೇವರ ಕೋಣೆಯಲ್ಲಿ ಕೂಡ ಭದ್ರವಾಗಿ ಶ್ರದ್ದೆಯಿಂದ ಇಡಬಹುದು.

ನಿಮ್ಮೆಲ್ಲರಿಗೂ ಪ್ರಭು ಶ್ರೀರಾಮ ಸನ್ಮಂಗಳವನ್ನುಂಟು ಮಾಡಲಿ.

You might also like
Leave A Reply

Your email address will not be published.