ಬೆಳಗುವ ಮೈಸೂರು – ಸಾಂಸ್ಕೃತಿಕ ನಗರಿಯನ್ನು ಬೆಳಗಿಸುವ ಚಾ.ವಿ.ಸ.ನಿ.ನಿ !

ಚಾ.ವಿ.ಸ.ನಿ.ನಿ ಯು ಸಾಂಸ್ಕೃತಿಕ ನಗರಿಯನ್ನು ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಸಂದರ್ಭದಲ್ಲಿ ವಿದ್ಯುದ್ದೀಪಗಳಿಂದ ಝಗಮಗಿಸುವಂತೆ, ಬಹಳ ವೈಭವದಿಂದ ಕಂಗೊಳಿಸುವಂತೆ ಅಲಂಕಾರವನ್ನು ಮಾಡಿತ್ತು. ದಸರಾ ಆರಂಭದ ದಿನದಿಂದಲೂ, ಮೈಸೂರು ಅರಮನೆ ಸೇರಿದಂತೆ ನಗರದಾದ್ಯಂತ ಸಾರ್ವಜನಿಕರಿಗಾಗಿ, ಅತ್ಯಂತ ಕಾಳಜಿವಹಿಸಿ ವಿನೂತನ ವಿನ್ಯಾಸದಿಂದ ವಿದ್ಯುತ್ ದೀಪಾಲಂಕಾರದ ವ್ಯವಸ್ಥೆಯನ್ನು ಚಾ.ವಿ.ಸ.ನಿ.ನಿ ನಿರ್ವಹಿಸಿತ್ತು.

ವಿಶೇಷ ದಿನಗಳಂದು ಮಾತ್ರವಲ್ಲದೇ, ಪ್ರತಿದಿನವೂ ಸಹ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆಗಳ ಗೃಹಬಳಕೆ ಮತ್ತು ಪಂಪ್’ಸೆಟ್’ಗಳಿಗೆ ನಿರಂತರ ಉತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಚಾ.ವಿ.ಸ.ನಿ.ನಿ ನೀಡುತ್ತಿದೆ. ಅಂತೆಯೇ ಹಲವಾರು ಯೋಜನೆಗಳು ಮತ್ತು ಸೇವೆಗಳನ್ನು ತನ್ನ ಗ್ರಾಹಕರಿಗೆ ನೀಡಿದೆ.

Illuminated Mysore - Cultural City Illuminated Cesc

ಚಾ.ವಿ.ಸ.ನಿ.ನಿ ಯು ತನ್ನ ಗ್ರಾಹಕರಿಗೆ ನೀಡುತ್ತಿರುವ ಸೇವೆಗಳು ಮತ್ತು ಯೋಜನೆಗಳು ಈ ಕೆಳಗಿನಂತಿವೆ:

– ಕ್ಯೂ ಆರ್ ಕೋಡ್ ಹಾಗೂ ವೆಬ್’ಸೈಟ್ ಮೂಲಕ ವಿದ್ಯುತ್ ಬಿಲ್ ಪಾವತಿ ಸೌಲಭ್ಯ.
– ಸೌರ ಗೃಹ ಯೋಜನೆಯ ಮೂಲಕ ಆಕರ್ಷಕ ಮೊತ್ತದ ಎಂ.ಎನ್.ಆರ್.ಇ ಸಬ್ಸಿಡಿ ಸೌಲಭ್ಯ.
– ಗೃಹಜ್ಯೋತಿ ಯೋಜನೆ.
– ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ.
– ತ್ವರಿತ ಸೇವೆಗಾಗಿ ಸೌಜನ್ಯ ಕೇಂದ್ರಗಳು.
– 24×7 ಸಹಾಯವಾಣಿ 1912 ಸೌಲಭ್ಯ.
– ವಾಟ್ಸಾಪ್ ಸಹಾಯವಾಣಿ ಸೌಲಭ್ಯ.
– ಪ್ರಾಮಾಣಿಕ ವಿದ್ಯುತ್ ಬಿಲ್ ಪಾವತಿಗೆ 0.25% ರಿಯಾಯಿತಿ.
– ವಿಶೇಷ ಚೇತನರಿಗೆ ಶೇ.20 ರಷ್ಟು ವಿಶೇಷ ರಿಯಾಯಿತಿ.
– ಪಿ.ಎಂ ಕುಸುಮ್ ಯೋಜನೆ.
– ರೈತರಿಗೆ 7 ಗಂಟೆ 3 ಫೇಸ್ ವಿದ್ಯುತ್ ಪೂರೈಕೆ.
– ಇವಿ ಚಾರ್ಜಿಂಗ್ ಸೌಲಭ್ಯ, ಇತ್ಯಾದಿ.

ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಸಾಮಾಜಿಕ ಜಾಲತಾಣಕ್ಕೆ ಭೇಟಿ ನೀಡಿ:

ಫೇಸ್’ಬುಕ್ ಖಾತೆ – @cescltd.mysore
ಎಕ್ಸ್ ಖಾತೆ- @cesc_mysore
ಇನ್ಸ್ಟಾಗ್ರಾಮ್ – @cescltd.mysore

ಸಾಮಾಜಿಕ ಜಾಲತಾಣಗಳ ಮೂಲಕ ವಿದ್ಯುತ್ ಸುರಕ್ಷತೆ, ವಿದ್ಯುತ್ ಸಂಬಂಧಿತ ಯೋಜನೆ, ಮತ್ತು ಇತ್ಯಾದಿ ಮಾಹಿತಿಗಳ ಬಗ್ಗೆ ಅರಿವು ಮೂಡಿಸುತ್ತಿದ್ದು, ಸಾರ್ವಜನಿಕರು ಅಧಿಕೃತ ಜಾಲತಾಣಗಳಿಗೆ ಭೇಟಿ ನೀಡಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ.

You might also like
Leave A Reply

Your email address will not be published.