ಸೌರಶಕ್ತಿಯ ಬಳಕೆಗೆ ಹೊಸ ಆಯಾಮ – ಸುಸ್ಥಿರ ಭವಿಷ್ಯಕ್ಕೆ ಚಾ.ವಿ.ಸ.ನಿ.ನಿ ಯ ಕೊಡುಗೆಗಳೇನು? ತಿಳಿಯಿರಿ.

ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ವಿದ್ಯುತ್ ಬಳಕೆಯ ಪ್ರಮಾಣ ಮತ್ತು ವಿದ್ಯುತ್ ಉತ್ಪಾದನೆಗೆ ಎದುರಾಗುತ್ತಿರುವ ಸವಾಲುಗಳನ್ನು ಗಮನಿಸಿದಂತೆ, ವಿದ್ಯುತ್ ಉತ್ಪಾದನೆಗೆ ಶಾಶ್ವತ ಪರ್ಯಾಯ ವ್ಯವಸ್ಥೆಯ ಅಗತ್ಯತೆ ಬಹಳವಾಗಿದೆ. ಈ ನಿಟ್ಟಿನಲ್ಲಿ ನವೀಕರಿಸಬಹುದಾದ ಶಕ್ತಿಯ ಮೂಲಗಳತ್ತ ಗಮನ ಹರಿಸಬೇಕಾಗಿದೆ.

ಪ್ರಸ್ತುತ ದಿನಗಳಲ್ಲಿ ಜಾಗತಿಕವಾಗಿ ವಿದ್ಯುತ್ ಉತ್ಪಾದನೆಯಲ್ಲಿ ಸೌರವಿದ್ಯುತ್ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಕೇವಲ ಸೌರವಿದ್ಯುತ್ ಉತ್ಪಾದನಾ ಘಟಕಗಳಷ್ಟೇ ಅಲ್ಲದೇ, ವಸತಿ ಸಂಕೀರ್ಣಗಳು, ಮನೆಗಳ ಮೇಲ್ಛಾವಣಿಯಲ್ಲಿ ಸೌರಘಟಕಗಳನ್ನು ಸ್ಥಾಪಿಸಿ, ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಉಪಕ್ರಮಗಳು ಜಾರಿಯಲ್ಲಿವೆ.

ರಾಜ್ಯದ ಎಸ್ಕಾಂಗಳ ವ್ಯಾಪ್ತಿಯಲ್ಲಿ ಸೌರವಿದ್ಯುತ್ ಬಳಕೆಗೆ ವಿಶೇಷ ಉತ್ತೇಜನ ನೀಡುವ ಸಲುವಾಗಿ ಎಲ್ಲಾ ಎಸ್ಕಾಂಗಳು, ಗ್ರಾಹಕರ ಮನೆಯ ಮೇಲ್ಛಾವಣಿಯಲ್ಲಿ ಸೌರಘಟಕಗಳ ಸ್ಥಾಪನೆಗೆ ಸೌರಗೃಹ ಯೋಜನೆಯೊಂದಿಗೆ ಆಕರ್ಷಕ ಮೊತ್ತದ ಎಂ.ಎನ್.ಆರ್.ಇ ಸಬ್ಸಿಡಿ ಹಾಗೂ CAPEX ಮತ್ತು RESCO ಮಾದರಿಯಲ್ಲಿ ಸೌರ ಮೇಲ್ಛಾವಣಿ ಘಟಕಗಳ ಸ್ಥಾಪನೆಗೆ ಉಪಕ್ರಮಗಳನ್ನು ರೂಪಿಸಿವೆ.

A New Dimension for Solar Energy Use - What are the contributions of Cesc mysore to a sustainable future? know

ಚಾ.ವಿ.ಸ.ನಿ.ನಿ ವ್ಯಾಪ್ತಿಯಲ್ಲಿ ಸೌರವಿದ್ಯುತ್ ಬಳಕೆಗೆ ಉತ್ತೇಜನ ನೀಡಲು, ಸೌರಗೃಹ ಯೋಜನೆಯ ಅನುಷ್ಠಾನದ ಜೊತೆಜೊತೆಗೆ, ಕೃಷಿ ಪಂಪ್’ಸೆಟ್’ಗಳಿಗೆ ನಿರಂತರ ವಿದ್ಯುತ್ ಪೂರೈಕೆಯನ್ನು ಸಾಧಿಸಲು ಪಿಎಂ ಕುಸುಮ್ (ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಏವಂ ಉತ್ಥಾನ ಮಹಾಭಿಯಾನ್) ಮೂಲಕ ಕೃಷಿ ಫೀಡರ್’ಗಳ ಸೌರೀಕರಣಕ್ಕೆ ಹೆಜ್ಜೆಯಿಡಲಾಗಿದೆ.

ಪಿಎಂ ಕುಸುಮ್-ಬಿ ಮತ್ತು ಪಿಎಂ ಕುಸುಮ್-ಸಿ ಅಡಿಯಲ್ಲಿ, ಕೃಷಿ ಪಂಪ್’ಸೆಟ್’ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳಲು, ಸೌರಫಲಕಗಳನ್ನು ಸ್ಥಾಪಿಸಿ ಅವುಗಳ ಮೂಲಕ ವಿದ್ಯುತ್ ಪೂರೈಕೆಯನ್ನು ನೀಡಲಾಗುತ್ತಿದೆ. ಕೃಷಿ ಪಂಪ್’ಸೆಟ್’ಗಳು ಅಧಿಕವಾಗಿರುವ ಪ್ರದೇಶಗಳಲ್ಲಿ ಪ್ರತ್ಯೇಕ ಸೌರಫಲಕಗಳನ್ನು ಸ್ಥಾಪಿಸಿ, ಕೃಷಿ ನೀರಾವರಿಗೆ ಸಹಕರಿಸಲಾಗುತ್ತಿದೆ.

ಅದಲ್ಲದೇ, ಪಿಎಂ ಕುಸುಮ್ ಕಾಂಪೋನೆಂಟ್-ಸಿ ಅಡಿಯಲ್ಲಿ, ವಿದ್ಯುತ್ ಉಪಕೇಂದ್ರಗಳ ಸಮೀಪ ಸೌರವಿದ್ಯುತ್ ಫಲಕಗಳನ್ನು ಸ್ಥಾಪಿಸಿ, ಅವುಗಳಲ್ಲಿ ಉತ್ಪಾದನೆಯಾದ ವಿದ್ಯುತ್ ಅನ್ನು ವಿದ್ಯುತ್ ಗ್ರಿಡ್’ಗೆ ರವಾನಿಸಿ, ಸ್ಥಳೀಯ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಯೋಜನೆಗೆ ರೂಪುರೇಷೆಗಳನ್ನು ರಚಿಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಯಾವುದೇ ವಿದ್ಯುತ್ ಕೊರತೆಯಾಗದಂತೆ ಹಾಗೂ 2070 ರ ಅವಧಿಗೆ ಸಂಪೂರ್ಣ ನವೀಕರಿಸಬಹುದಾದ ವಿದ್ಯುತ್ ಮೂಲಗಳಿಂದಲೇ ವಿದ್ಯುತ್ ಉತ್ಪಾದನೆಯ ಗುರಿಗೆ ಅನುಗುಣವಾಗುವಂತೆ, ಚಾ.ವಿ.ಸ.ನಿ.ನಿ ವ್ಯಾಪ್ತಿಯಲ್ಲಿ ಸೌರವಿದ್ಯುತ್ ಬಳಕೆಗೆ ವಿಶೇಷ ಪ್ರೋತ್ಸಾಹ ನೀಡಿ ಸಹಕರಿಸಲಾಗುತ್ತಿದೆ.

You might also like
Leave A Reply

Your email address will not be published.