ಅಯೋಧ್ಯೆ ಎಂದರೇನು?

ರಾಮಲಲ್ಲಾ ಪ್ರತಿಷ್ಠಾಪನೆಯ ದಿನ ಸಮೀಪಿಸುತ್ತಿದ್ದಂತೆ, ಅಯೋಧ್ಯೆಗೆ ಮತ್ತಷ್ಟು ಬಲ ಬಂದಿದೆ. ರಾಮನ ಸ್ವಾಗತಕ್ಕೆ ಎಂದಿಲ್ಲದ ಹಾಗೆ ಇತ್ತೀಚೆಗೆ ಜಟಾಯು ಪಕ್ಷಿಗಳು ಬಂದು ಕೂರುತ್ತಿದೆ. ದೇಶ-ವಿದೇಶಗಳಿಂದ ಜನ ಸಾಗರ ಹರಿದುಬರುತ್ತಿದೆ. ಎಲ್ಲೆಲ್ಲೂ ರಾಮನದೇ ಸಡಗರ.

ನಮ್ಮ ಪುರಾಣಗಳಲ್ಲಿ ಯಾವುದಾದರು ಒಂದು ಕಟ್ಟಡಕ್ಕೊ, ದೇವಾಲಯಕ್ಕೊ ಒಂದು ಹೆಸರು ನಾಮಕಾರಣ ಮಾಡುತ್ತಾರೆಂದರೆ ಅದರ ಹಿಂದೆ ಒಂದು ಬಲವಾದ ಅರ್ಥ ಅಡಗಿರುತ್ತದೆ ಎಂದೇ ಅರ್ಥ. ಹಾಗಾದ್ರೆ, ಅಯೋಧ್ಯೆ ಎಂಬ ಪದದ ಅರ್ಥ ಏನಿರಬಹುದು? ಎಂಬ ಮಾಹಿತಿ ಇಲ್ಲಿದೆ.

ಅಯೋಧ್ಯೆ ಎಂಬ ಹೆಸರು ಕೇಳಿದ ಕೂಡಲೇ, ಒಂದು ಕ್ಷಣ ಪುರಾಣ, ರಾಮಾಯಣ, ಭಾರತದ ಇತಿಹಾಸ, ಸಂಸ್ಕೃತಿ ನಮ್ಮ ಕಣ್ಣಮುಂದೆ ಹಾದು ಹೋಗುತ್ತದೆ. ಆ ಪದದಲ್ಲೇ ಅಂತಹದೊಂದು ಧಾರ್ಮಿಕತೆ ಅಡಗಿದೆ. ಅಯೋಧ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ವಿಭಿನ್ನವಾಗಿ ವರ್ಣಿಸಲಾಗುತ್ತದೆ.

1. ಸಂಸ್ಕೃತದಲ್ಲಿ ಯುದ್ಧ್ ಎಂಬ ಪದದಿಂದ ಅಯೋಧ್ಯೆ ಎಂಬ ಹೆಸರು ಬಂದಿದೆ. ಅಂದರೆ, ಯುದ್ಧ, ವಾರ್, ಯೋಧ್ಯೆ, ಹೋರಾಡಬೇಕು ಎಂಬಿತ್ಯಾದಿ ಅರ್ಥವನ್ನು ಕೊಡುತ್ತದೆ. ಇನ್ನೂ ಅಯೋಧ್ಯೆ ಎಂದರೆ, ಅಜೇಯ ಅರ್ಥಾತ್ ಅಂದರೆ ಯಾರೂ ಗೆಲ್ಲಲಾಗದ ನಗರ.

2. ಅಥರ್ವವೇದದ ಪ್ರಕಾರ, ಅಯೋಧ್ಯೆ ಎಂಬ ಸ್ಥಳವನ್ನು ಸ್ವತಃ ದೇವತೆಗಳೇ ನಿರ್ಮಿಸಿದಂತಹ ನಗರವಾಗಿದ್ದು, ಇದನ್ನು ಯುದ್ಧದಿಂದ ಯಾರಿಗೂ ಗೆಲ್ಲುವುದ್ದಕ್ಕೆ ಸಾಧ್ಯವಿಲ್ಲ ಅರ್ಥತ್ ‘ಜಯಿಸಲಾಗದ ದೇವತೆಗಳ ನಗರ’ ಎಂಬ ಉಲ್ಲೇಖವಿದೆ.

3. ಸ್ಕಂದ ಪುರಾಣಗಳ ಪ್ರಕಾರ, ಅಯೋಧ್ಯೆಯು ಬ್ರಹ್ಮ, ವಿಷ್ಣು ಮತ್ತು ರುದ್ರ ಹೀಗೆ ಮೂವರು ಸಾಕಾರಗೊಂಡಿರುವ ಪ್ರದೇಶವಾಗಿದೆ ಎಂದು ಅಗಸ್ತ್ಯ ಮಹರ್ಷಿಗಳು ವ್ಯಾಸ ಮಹರ್ಷಿಗಳಿಗೆ ಹೇಳಿದರು ಎಂಬ ಉಲ್ಲೇಖವಿದೆ.

ಅಕಾರೋ ಬ್ರಹ್ಮ ಚ ಪ್ರೋಕ್ತಂ
ಯ ಕಾರೋ ವಿಷ್ಣುರುಚ್ಚತೆ|
ಧ ಕಾರೋ ರುದ್ರರೂಪಶ್ಚ
ಅಯೋಧ್ಯ ನಾಮ ರಾಜತೇ||

ಅರ್ಥ: ಅಯೋಧ್ಯೆ ಪದದಲ್ಲಿನ ‘ಅ’ ಕಾರವು ಬ್ರಹ್ಮನನ್ನು ಸೂಚಿಸುತ್ತದೆ. ‘ಯ’ ಕಾರವು ವಿಷ್ಣುವನ್ನು ಸೂಚಿಸಿದರೆ, ‘ಧ’ ಅಕ್ಷರವು ರುದ್ರನನ್ನು ಸೂಚಿಸುತ್ತದೆ.

You might also like
Leave A Reply

Your email address will not be published.