ಮತ್ತೆ ವಕ್ಕರಿಸಿದ ಕೊರೋನ – ಅಯ್ಯಪ್ಪ ಮಾಲಧಾರಿಗಳ ಮೇಲೆ ಹದ್ದಿನ ಕಣ್ಣು!

ಅಯ್ಯೋ ದೇವರೇ ಮತ್ತೆ ಶುರುವಾಯ್ತ, ಕೊರೋನಾದ ಕರಿ ಛಾಯೆ? ಮಾಸ್ಕ್, ಲಾಕ್’ಡೌನ್ ನಂತಹ ಪರಿಸ್ಥಿತಿ ಮತ್ತೆ ಎದುರಾಗುತ್ತ? ಕೊರೋನದಿಂದ ರೂಪಾಂತರ ತಳಿ ಈ ಹೊಸ ವರ್ಷಕ್ಕೆ ಬ್ರೇಕ್ ಹಾಕುತ್ತ? ಅದರಲ್ಲೂ ಅಯ್ಯಪ್ಪ ಮಾಲಧಾರಿಗಳೇ ಹುಷಾರ್! ನಿಮ್ಮ ಮೇಲಿದೆ ರಾಜ್ಯ ಆರೋಗ್ಯ ಇಲಾಖೆಯ ಹದ್ದಿನ ಕಣ್ಣು!! ಈ ಕುರಿತು ಆರೋಗ್ಯ ಸಚಿವ ಹೇಳಿದಾದ್ರು ಏನು? ಎಂಬ ಮಾಹಿತಿ ಇಲ್ಲಿದೆ ಮಿಸ್ ಮಾಡ್ದೆ ಓದಿ..

ಹೌದು! ಮಂಡಲಂ-ಮಕರವಿಳಕ್ಕು ಯಾತ್ರೆ ಪ್ರಾರಂಭವಾಗಿ ದಿನಕಳೆಯುತ್ತ ಬಂದರು ಶಬರಿಮಲೆ ಮತ್ತು ಅದರ ಸುತ್ತಮುತ್ತಲೂ ಭಕ್ತರ ನೂಕುನುಗ್ಗಲ ರೀಲ್ಸ್ ಗಳು ಫುಲ್ ಟ್ರೆಂಡ್ ಆಗಿತ್ತು. ಇದರ ಬೆನ್ನಲ್ಲೆ ಕೊರೋನ ಹರಡುವ ಭೀತಿಯು ಶುರುವಾಗಿದೆ. ವರ್ಷಾಂತ್ಯದಲ್ಲಿ ಕೇರಳ ರಾಜ್ಯದಲ್ಲಿ ಕೊರೋನ ವೈರಸ್ ಲಗ್ಗೆ ಇಡುವ ಸೂಚನೆ ಬಂದಿದ್ದು, ಕರುನಾಡಿನಲ್ಲಿ ಹಾಗೂ ಅಯ್ಯಪ್ಪ ಮಾಲಧಾರಿಗಳ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದೆ.

ಕೊರೋನ ಉಪತಳಿ ಕುರಿತು ಎಚ್ಚರಿಕೆ ನೀಡಿದ WHO

ಉಸಿರಾಟಕ್ಕೆ ಸಂಬಂಧಿಸಿದಂತೆ ಕಾಯಿಲೆಗಳು ಹೆಚ್ಚಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ವಿಶ್ವದಲ್ಲೆ ಮೊದಲ ಭಾರಿಗೆ ಅಮೇರಿಕದಲ್ಲಿ ಕೊರೋನ ವೈರಸ್ ನ ಉಪತಳಿ ಜೆ.ಎನ್.1 ಕಾಣಿಸಿಕೊಂಡಿದ್ದು, ಎಲ್ಲಾ ದೇಶಗಳು ಎಚ್ಚರಿಕೆ ವಹಿಸಬೇಕು ಎಂದು WHO ಆದೇಶ ಹೊರಡಿಸಿದೆ.

ಹಾಗೂ ಕಾಯಿಲೆಗಳು ಉಲ್ಬಣಗೊಳ್ಳುತ್ತಿರುವ ಹಿಂದೆ ಅಡಗಿರುವ ಕಾರಣಗಳು ಮತ್ತು ಮುನ್ನೆಚ್ಚರಿಕೆ ಕ್ರಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್ ನಿರ್ವಹಣಾ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮಾರಿಯಾ ವ್ಯಾನ್ ಕೆರ್ಖೋವ್ ಅವರು ಮಾತನಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ದೇಶದಲ್ಲಿ ಮೊದಲ ಭಾರಿ ಕೇರಳ ರಾಜ್ಯದಲ್ಲಿ ವಕ್ಕರಿಸಿದ ಕೊರೋನ ವೈರಸ್:

ಕೇರಳದ 79 ವರ್ಷದ ಮಹಿಳೆಯೊಬ್ಬರಲ್ಲಿ ಕೊರೋನ ವೈರಸ್ ಉಪತಳಿ ಜೆ.ಎನ್.1 (JN1) ಪತ್ತೆಯಾಗಿದೆ. ನವೆಂಬರ್ 18 ರಂದು ಅವರ ಗಂಟಲು ಮಾದರಿಯನ್ನು ಆರ್.ಟಿ-ಪಿಸಿಆರ್ (RT-CPR) ಪರೀಕ್ಷೆಗೆ ಒಳಪಡಿಸಲಾಗಿದ್ದು, ಸೋಂಕು ಇರುವುದು ದೃಢಪಟ್ಟಿದೆ. ಅವರಲ್ಲಿ Influenza like illness ಕಾಯಿಲೆಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದಿದ್ದು, ಇದರಿಂದ ಅವರು ಗುಣಮುಖವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕರುನಾಡಿನ ಆರೋಗ್ಯ ಸಚಿವರು ಹೇಳಿದ್ದೇನು?

ರಾಜ್ಯದಲ್ಲಿ ಕೊರೋನ ವೈರಸ್ ಎಫೆಕ್ಟ್ ಶುರುವಾಗಿಲ್ಲ. ಹಾಗೆಂದ ಮಾತ್ರಕ್ಕೆ ವೈರಸ್ ಕುರಿತು ನಿರ್ಲಕ್ಷಿಸಲಾಗದು. ಈ ನಿಟ್ಟಿನಲ್ಲಿ ಉಸಿರಾಟ ಸಮಸ್ಯೆ ಇರುವವರು, 60 ವರ್ಷದ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಕೋವಿಡ್ ಲಕ್ಷಣ ಕಂಡುಬಂದಲ್ಲಿ ಪ್ರಥಮ ಹಂತದಲ್ಲೆ ಚಿಕಿತ್ಸೆ ಪಡೆಯಲು ಹಿಂಜರಿಯಬೇಡಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಹಾಗೂ ತಜ್ಞರೊಂದಿಗೆ ಈಗಾಗಲೇ ಚರ್ಚಿಸಲಾಗಿದ್ದು, ಕೇರಳದ ಗಡಿ ಜಿಲ್ಲೆಯಲ್ಲಿ ಹೆಚ್ಚು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ಅಗತ್ಯವಿರುವ ಪಿಪಿಐ ಕಿಟ್, ಬೆಡ್, ಆಕ್ಸಿಜನ್ ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪೂರ್ವಭಾವಿ ಸಿದ್ದತೆಗಳ ಕಡೆ ಗಮನ ಹರಿಸಲಾಗಿದೆ. ಜನರು ಕೋವಿಡ್ ವೈರಸ್ ಕುರಿತು ಹೆಚ್ಚು ಆತಂಕ ಪಡಬೇಕಿಲ್ಲ. ಶೀತ, ಜ್ವರ, ಕೆಮ್ಮಿನಂತಹ ಲಕ್ಷಣ ಕಂಡುಬಂದಲ್ಲಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದು ತಿಳಿಸಿದ್ದಾರೆ.

ಲಾಕ್’ಡೌನ್ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿಲ್ಲ. ಈ ಹೊಸ ತಳಿಯಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚಾದರೆ ಮಾತ್ರ ರಾಜ್ಯದಲ್ಲಿ ನಿರ್ಬಂಧ ಹೇರಲಾಗುವುದು. ಅಂತಹ ಪರಿಸ್ಥಿತಿಗಳು ನಿರ್ಮಾಣವಾಗದ ನಿಟ್ಟಿನಲ್ಲಿ ಸಾರ್ವಜನಿಕರು ಆತಂಕ ಪಡುವುದು ಬೇಡ. ಆದರೆ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸಿ ಎಂದು ವಿವರಿಸಿದ್ದಾರೆ.

You might also like
Leave A Reply

Your email address will not be published.