ರಾಜ್ಯಸಭೆಯಲ್ಲಿ “ನಮಾಜ್ ವಿರಾಮ” ರದ್ದು ಮಾಡಿದ ಉಪರಾಷ್ಟ್ರಪತಿಗಳು – ಏನಿದು ನಮಾಜ್ ವಿರಾಮ? ಓದಿ ನೋಡಿ.

ರಾಜ್ಯಸಬೆಯ ಸಭಾಪತಿಗಳು ಹಾಗೂ ಉಪರಾಷ್ಟ್ರಪತಿಗಳಾದ ಮಾನ್ಯ ಶ್ರೀ ಜಗದೀಪ್ ಧನ್ ಕರ್ ಅವರು ಇದುವರೆಗೂ ರಾಜ್ಯಸಭೆಯಲ್ಲಿ ನಡೆದುಕೊಂಡು ಬಂದಿದ್ದ ನಮಾಜ್ʼಗೆ ವಿರಾಮ ನೀಡುವ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಿದ್ದು, ರಾಜ್ಯಸಭೆಯಲ್ಲಿ ಸರ್ವಧರ್ಮಗಳಿಗೂ ಸಮನಾದ ಗೌರವ, ಅವಕಾಶ ನೀಡಿದ್ದಾರೆ.

ರಾಜ್ಯಸಭೆಯಲ್ಲಿ ನಮಾಜ್ ವಿರಾಮ :

ಅಧಿವೇಶನ ನಡೆಯುವ ಸಮಯದಲ್ಲಿ ಪ್ರತಿ ಶುಕ್ರವಾರ ಮುಸ್ಲಿಂ ಸದಸ್ಯರಿಗಾಗಿ ಅರ್ಧ ತಾಸಿನ ಹೆಚ್ಚುವರಿ ವಿರಾಮ ನೀಡಿ, ನಮಾಜ್ ಮಾಡಲು ಅವಕಾಶ ಕಲ್ಪಿಸಿಕೊಡುವ ಔಪಚಾರಿಕ ಸಂಪ್ರದಾಯ ಬೆಳೆದು ಬಂದಿತ್ತು. ಆದರೆ, ಲೋಕಸಭೆಯಲ್ಲಿ ಈ ನಿಯಮಾವಳಿ, ಸಂಪ್ರದಾಯ ಇಲ್ಲ. ಲೋಕಸಭೆಯ ಮಧ್ಯಾಹ್ನದ ವಿರಾಮ 1 ಗಂಟೆಯಿಂದ 2 ಗಂಟೆ. ಆದರೆ, ರಾಜ್ಯಸಭೆಯಲ್ಲಿ ಶುಕ್ರವಾರದ ವಿರಾಮ ಮಧ್ಯಾಹ್ನ 1 ಗಂಟೆಯಿಂದ 2.30 ಗಂಟೆ. ಇದನ್ನು ರದ್ದು ಮಾಡಿರುವ ಸಭಾಪತಿಗಳು ಲೋಕಸಭೆಯಂತೆಯೇ ಮಧ್ಯಾಹ್ನ 2 ಗಂಟೆಯಿಂದ ರಾಜ್ಯಸಭೆಯ ಕಾರ್ಯ-ಕಲಾಪಗಳನ್ನು ಆರಂಭಿಸಲು ಸೂಚಿಸಿದ್ದರು.

ರಾಜ್ಯಸಭೆಯ ಸಭಾಪತಿಗಳಾದ ಜಗದೀಪ್ ಧನ್ ಕರ್
ರಾಜ್ಯಸಭೆಯ ಸಭಾಪತಿಗಳಾದ ಜಗದೀಪ್ ಧನ್ ಕರ್

 

ನಮಾಜ್ ಅವಧಿ ರದ್ದು ಮಾಡಿದ್ದು ಯಾಕೆ?

ರಾಜ್ಯಸಭೆಯಲ್ಲಿ ಡಿಸೆಂಬರ್ 08 ರಂದು ನಡೆದ ಅಧಿವೇಶನದಲ್ಲಿ ಡಿಎಂಕೆ ಪಕ್ಷದ ಸಂಸದ ತಿರುಚಿ ಎನ್ ಶಿವ ಅವರು ಈ ಬಗ್ಗೆ ಪ್ರಶ್ನಿಸಿದ್ದರು. ಇದಕ್ಕೆ ಉತ್ತರಿಸಿದ ಉಪರಾಷ್ಟ್ರಪತಿಗಳಾದ ಜಗದೀಪ್ ಧನ್ ಕರ್ ಅವರು, ರಾಜ್ಯಸಭೆಯ ಶುಕ್ರವಾರದ ಸಮಯವನ್ನು ಲೋಕಸಭೆಯ ಸಮಯದೊಂದಿಗೆ ಕಳೆದ ಅಧಿವೇಶನದಲ್ಲಿಯೇ ಮರು ಹೊಂದಿಸಲಾಗಿದೆ. ಪ್ರಜ್ಞಾಪೂರ್ವಕವಾಗಿ, ಸೂಕ್ತ ಚರ್ಚೆಯ ನಂತರ ಸದನದ ಗಮನಕ್ಕೆ ತಂದು ಜಾರಿಗೆ ತರಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಎಲ್ಲಾ ಸಮುದಾಯಗಳ ಸದಸ್ಯರಿದ್ದಾರೆ ಮತ್ತು ಮುಸ್ಲಿಂ ಸಂಸದರಿಗೆ ಮಾತ್ರ ನಿರ್ದಿಷ್ಟ ವಿನಾಯಿತಿ ಇರಬಾರದು. ಲೋಕಸಭೆಯಲ್ಲಿ ಈ ರೀತಿಯ ಯಾವುದೇ ಸಂಪ್ರದಾಯವಿಲ್ಲ ಎಂದು ತಿಳಿಸಿದ್ದಾರೆ.

ರಾಜ್ಯಸಭೆಯ ಸಭಾಪತಿಗಳಾದ ಜಗದೀಪ್ ಧನ್ ಕರ್ ಅವರ ಈ ನಡೆಗೆ ಸಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಅಭಿಪ್ರಾಯಗಳು ಬರುತ್ತಿವೆ. ಕೇವಲ, ಒಂದು ಸಮುದಾಯಕ್ಕೆ ಮಾತ್ರ ಓಲೈಕೆ ಮಾಡುವುದು ಸರಿಯಲ್ಲ. ಈ ಹಿಂದಿನ ಸರ್ಕಾರಗಳು ಮಾಡಿದ್ದ ತಪ್ಪನ್ನು ಸರಿಪಡಿಸಿ, ಸರ್ವರೂ ಸಮಾನರು ಎಂಬುದನ್ನು ಸಾರಿದ ಉಪರಾಷ್ಟ್ರಪತಿಗಳಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

You might also like
Leave A Reply

Your email address will not be published.