ಸುಳ್ಳುಸುದ್ದಿ ಹರಡುವ ಗೌರಿ.ಕಾಮ್ ಇನ್ನು ಮುಂದೆ ಕಾಂಗ್ರೆಸ್ ಸರ್ಕಾರದ ಸುಳ್ಳು ಸುದ್ದಿ ವಿರೋಧಿ ಘಟಕ.

ಕರ್ನಾಟಕದಲ್ಲಿ Anti fake news ಘಟಕ ಸ್ಥಾಪಿಸುವುದಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ‌ ಬಂದ ಕೆಲವೇ ದಿನಗಳಲ್ಲಿ ಘೋಷಿಸಿತ್ತು. ಆದರೆ, ಈ ತನಕ ಅಧಿಕೃತವಾಗಿ ಯಾವುದೇ ತೆರನಾದ ಘಟಕ ಸ್ಥಾಪಿಸಿರಲಿಲ್ಲ. ಇದೀಗ ಬಂದ ಸುದ್ದಿಯ ಪ್ರಕಾರ ಕರ್ನಾಟಕ ಇನ್ಫಾರ್ಮೇಶನ್ ಡಿಸಾರ್ಡರ್ ಟ್ಯಾಕ್ಲಿಂಗ್ ಯುನಿಟ್ (IDTU) ಸ್ಥಾಪಿಸಲಿದ್ದು, ಇದನ್ನು ADGP ರ‍್ಯಾಂಕ್ ಹೊಂದಿದ ಅಧಿಕಾರಿಯು ಮುನ್ನಡೆಸಲಿದ್ದಾರೆ.

ಆಯ್ಕೆಯಾದ ಕಂಪೆನಿಗಳು ಅನಾಲಿಟಿಕ್ಸ್ ಮತ್ತು ಕೆಪಾಸಿಟಿ ಬಿಲ್ಡಿಂಗ್ ಆಗಿ ವಿಂಗಡಿಸಿಕೊಂಡು Fact check ನಡೆಸಲಿದ್ದು, ಅನಾಲಿಟಿಕ್ಸ್ ತಂಡವು ಮುಂದುವರೆದ ತಂತ್ರಜ್ಞಾನ‌ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ (AI) ಬಳಸಿಕೊಂಡು ಕೆಲಸ ಮಾಡಿದರೆ, ಕೆಪಾಸಿಟಿ ಬಿಲ್ಡಿಂಗ್ ತಂಡವು ತಪ್ಪು ‌ಮಾಹಿತಿಗಳು ಮತ್ತು ಅದರ ಪರಿಣಾಮಗಳ ಬಗ್ಗೆ ಪರಿಣಾಮಕಾರಿಯಾಗಿ ಸಾರ್ವಜನಿಕರಲ್ಲಿ ಜನಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಿವೆ ಎನ್ನಲಾಗಿದೆ.

Anti fake news ಘಟಕ ನಡೆಸಲು ಆಯ್ಕೆಯಾದ ಕಂಪೆನಿಗಳು :

1) ಗೌರಿ ಡಾಟ್‌ ಕಾಮ್
2)‌ ಲಾಜಿಕಲಿ ಇನ್ಫೋ ಮೀಡಿಯಾ ಪ್ರೈ.ಲಿ.
3) ಟ್ರೈಲಿಕ ಟೆಕ್ನಾಲಜಿ ಲಿ.
4) ನ್ಯೂಸ್‌ ಪ್ಲಸ್‌ ಕಮ್ಯೂನಿಕೇಷನ್ಸ್
5)‌ OW ಡಾಟಾಲೀಡ್ಸ್‌

ಮುಂದಿನ‌ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಂಡು ಬಿಜೆಪಿಯ ಬೆಂಬಲಿಗರನ್ನು ಹಣೆಯಲು ಈ ತಂತ್ರ ರೂಪಿಸಲಾಗಿದೆ ಎಂಬುದು ಬಿಜೆಪಿಗರ ಆರೋಪವಾಗಿದ್ದು, ಈ Anti fake news ಘಟಕಕ್ಕೆ ADGP ರ‍್ಯಾಂಕ್’ನ ಅಧಿಕಾರಿಯು ನೇಮಕವಾದ ತಕ್ಷಣ ಇದಕ್ಕೆ ಸಂಬಂಧಿಸಿದ ಉಳಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಸಚಿವರಾದ ಪ್ರಿಯಾಂಕ್ ಖರ್ಗೆಯವರು ಈ ಘಟಕವನ್ನು‌ ಮುನ್ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಹಾಗಿದ್ದಾಗ್ಯೂ, Anti Fake News ಘಟಕ ಸ್ಥಾಪನೆಗೆ ಅಧಿಕೃತವಾಗಿ ಇಲ್ಲಿಯತನಕ ಯಾವುದೇ ತೆರನಾದ ಸರ್ಕಾರಿ ಆದೇಶ ಹೊರಡಿಸಿಲ್ಲ ಈ ಘಟಕ ಸ್ಥಾಪನೆ ಆಗುತ್ತದೆಯೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆಯಷ್ಟೇ.

You might also like
Leave A Reply

Your email address will not be published.