ರಾಷ್ಟ್ರಪತಿಗೆ ಅಗೌರವ ತೋರಿದ್ರಾ ಪಿಎಂ ನರೇಂದ್ರ ಮೋದಿ : ಫ್ಯಾಕ್ಟ್‌ ಚೆಕ್‌ ವರದಿ ಇಲ್ಲಿದೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಬಿಜೆಪಿ ಹಿರಿಯ ನಾಯಕ, ಮಾಜಿ ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಪ್ರಶಸ್ತಿಯನ್ನು ಅವರ ನಿವಾಸದಲ್ಲೇ ಪ್ರದಾನ ಮಾಡಿದ್ದ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಕುರಿತು ಅನೇಕ ವಾದ-ವಿವಾದಗಳು ನಡೆಯುತ್ತಿದೆ. ಅಷ್ಟಕ್ಕೂ ಈ ಫೋಟೋ ಹಿಂದೆ ಅಡಗಿದ ಸತ್ಯವೇನು?

ಶನಿವಾರ ರಾಷ್ಟ್ರಪತಿ ಭವನದಲ್ಲಿ ಮಾಜಿ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್, ಪಿ.ವಿ. ನರಸಿಂಹ ರಾವ್, ಕೃಷಿ ವಿಜ್ಞಾನಿ ಎಂ.ಎಸ್. ಸ್ವಾಮಿನಾಥನ್ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗಿತ್ತು. ಅನಾರೋಗ್ಯದ ಕಾರಣ ಶನಿವಾರ ನಡೆದ ಸಮಾರಂಭದಲ್ಲಿ ಭಾರತ ರತ್ನ ಪ್ರಶಸ್ತಿ ಸ್ವೀಕರಿಸಲು ಅಡ್ವಾಣಿ ಆಗಮಿಸಿರಲಿಲ್ಲ.

ಈ ನಿಟ್ಟಿನಲ್ಲಿ ಮಾಜಿ ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಪ್ರಶಸ್ತಿಯನ್ನು ಅವರ ನಿವಾಸದಲ್ಲೇ ಪ್ರದಾನ ಮಾಡಲಾಯಿತು. ಈ ವೇಳೆ ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್, ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಉಪಸ್ಥಿತರಿದ್ದರು.

Bharatna Award To LK Advani

ಫೋಟೋ-ವಿಡಿಯೋ ಕುರಿತು ವೈರಲ್ ಆದ ವಿವಾದಗಳೇನು?

ರಾಷ್ಟ್ರಪತಿ ದ್ರೌಪದಿ ಮರ್ಮು ಎದ್ದುನಿಂತು ಮಾಜಿ ಗೃಹ ಸಚಿವ ಎಲ್.ಕೆ.ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಪ್ರಧಾನಿ ಮೋದಿ ಅವರು ಕೂತು ಚಪ್ಪಾಳೆ ತಟ್ಟುತ್ತಿರುವಂತಹ ಫೋಟೋ, ವಿಡಿಯೋ ವೈರಲ್ ಆಗಿದ್ದು, ಈ ಕುರಿತು ರಾಷ್ಟ್ರಪತಿ ಅವರಿಗೆ ಪ್ರಧಾನಿ ಮೋದಿ ಅವರು ಗೌರವ ಕೊಡದೇ ಕೂತಲ್ಲೇ ಚಪ್ಪಾಳೆ ತಟ್ಟುತ್ತಿದ್ದಾರೆ. ರಾಷ್ಟ್ರಪತಿ ಅವರು ಬುಡಕಟ್ಟು ಜನಾಂಗದಿಂದ ಬಂದದ್ದರಿಂದ ಅವರಿಗೆ ಗೌರವ ನೀಡುತ್ತಿಲ್ಲ. ಅಲ್ಲದೇ ಅಡ್ವಾನಿ ಅವರಿಗೂ ಪ್ರಶಸ್ತಿ ಪ್ರದಾನ ಮಾಡುವಾಗಲೂ ಗೌರವ ಸೂಚಿಸಿಲ್ಲ. ಇದು ಅಸಭ್ಯ ವರ್ತನೆ ಎಂದು ವಿವಾದಗಳು ಬರುತ್ತಿದೆ.

ಫೋಟೋ ಹಿಂದೆ ಅಡಗಿದ ಅಸಲಿ ಸತ್ಯವೇನು?

ಸಾಮಾನ್ಯವಾಗಿ ರಾಷ್ಟ್ರಪತಿ ಭಾರತ ರತ್ನ ಪ್ರಶಸ್ತಿ ಅಲ್ಲದೇ ಯಾವುದೇ ಗೌರವಾನ್ವಿತ ಪ್ರಶಸ್ತಿಯನ್ನು ಪ್ರದಾನ ಮಾಡುವಾಗ ಗೌರವಯುತವಾಗಿ ಆಯಾ ವಿಜೇತರಿಗೆ ಅರ್ಪಿಸುತ್ತಾರೆ. ಆದರೆ, ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಹೊರತುಪಡಿಸಿ ಯಾವುದೇ ಉನ್ನತ ಮಟ್ಟದ ಅಧಿಕಾರಿಗಳು ಆ ಸಂದರ್ಭದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟುವಂತಿಲ್ಲ. ಆದ್ದರಿಂದ ಪ್ರಧಾನಿ ನರೇಂದ್ರ ಮೋದಿ ಅವರು ಎದ್ದು ನಿಂತಿಲ್ಲ.

ವೈರಲ್ ಆಯ್ತು ಎರಡು ಫೋಟೋ, ಯಾವುದದು?

ಒಟ್ಟಾರೆಯಾಗಿ ಎರಡು ಫೋಟೋ ವೈರಲ್ ಆಗಿದೆ. ಅದರ ಪೈಕಿ ಒಂದರಲ್ಲಿ ರಾಷ್ಟ್ರಪತಿ ಅವರು ಅಡ್ವಾನಿ ಅವರಿಗೆ ಎದ್ದು ನಿಂತು ಪ್ರಶಸ್ತಿ ಪ್ರದಾನ ಮಾಡುತ್ತಿದ್ದು, ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂತು ಚಪ್ಪಾಳೆ ತಟ್ಟುತ್ತಿದ್ದಾರೆ. ಅಲ್ಲದೇ ಈ ಫೋಟೋದಲ್ಲಿ ದ್ರೌಪದಿ ಅವರಿಗೆ ಕುಳಿತುಕೊಳ್ಳಲು ಆಸನ ಕೂಡ ಕಾಣದ ಕಾರಣ ಮತ್ತಷ್ಟು ವಿವಾದಗಳಿಗೆ ಎಡೆ ಮಾಡಿಕೊಟ್ಟಿದೆ.

ಮತ್ತೊಂದು ಫೋಟೋದಲ್ಲಿ ರಾಷ್ಟ್ರಪತಿ ದ್ರೌಪದಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತ ರತ್ನ ಪ್ರಶಸ್ತಿ ವಿಜೇತ ಎಲ್.ಕೆ.ಅಡ್ವಾಣಿ ಅವರು ಕುಳಿತುಕೊಂಡು ಮಾತನಾಡುತ್ತಿರುವುದು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ರಾಷ್ಟ್ರಪತಿ ಅವರಿಗೆ ಸಲ್ಲಬೇಕಾದ ಗೌರವ ಸಮರ್ಪಕವಾಗಿ ಸಲ್ಲುತ್ತಿದೆ. ಪ್ರಧಾನಿ ಮತ್ತು ಮಾಜಿ ಸಚಿವ ಅಕ್ಕಪಕ್ಕದಲ್ಲೇ ಕುಳಿತಿದ್ದು, ರಾಷ್ಟ್ರಪತಿ ಅವರು ಮಾತ್ರ ಬೇರೆ ಕಡೆ ಕುಳಿತ್ತಿದ್ದಾರೆ. ಎರಡು ಭಿನ್ನ ಹ್ಯಾಂಗಲ್ ಅಲ್ಲಿ ಫೋಟೋ ತೆಗೆದ ಕಾರಣ ಒಂದೊಂದು ಫೋಟೋ ಒಂದೊಂದು ವಿಚಾರವನ್ನು ತಿಳಿಸಿದೆ.

Bharatna Award To LK Advani

ಯಾವುದೇ ವಿಚಾರಗಳನ್ನು ಕುರಿತು ಚರ್ಚಿಸುವ ಮೊದಲು ಅದರ ಹಿಂದಿರುವ ಸತ್ಯಾಸತ್ಯಾತೆಗಳನ್ನು ತಿಳಿದು ಚರ್ಚಿಸುವುದು ಉತ್ತಮ.

You might also like
Leave A Reply

Your email address will not be published.