BigBoss Season 10 : ಬಿಗ್ ಬಾಸ್ ಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಕಲರ್ಸ್‌ ಕನ್ನಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada 10) ರಿಯಾಲಿಟಿ ಶೋಗೆ ಕನ್ನಡಿಗರಿಂದ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ. ಸ್ಪರ್ಧಾರ್ಥಿಗಳ ಮಧ್ಯಮ ಕ್ರಮಾಂಕದ ಆಟದ ನಡುವೆಯೂ ನಟ, ನಿರೂಪಕ ಕಿಚ್ಚನ (Actor Kiccha) ದರ್ಬಾರ್ʼನಿಂದಲೇ ಈ ಸೀಸನ್ ತನ್ನ ಪ್ರಸಿದ್ಧತೆ ಪಡೆದುಕೊಂಡಿದೆ. ಈ ನಡುವೆ, ಬಿಗ್ ಬಾಸ್ ಪ್ರಿಯರಿಗಾಗಿ ಕಲರ್ಸ್ ಕನ್ನಡ ವಾಹಿನಿ ಶುಭ ಸುದ್ದಿ ನೀಡಿದೆ.

ಕಳೆದ ಸೀಸನ್ʼಗಳಿಗಿಂತಲೂ ಈ ಸೀಸನ್ʼನ (Bigg Boss Kannada 10) ಟಿಆರ್ʼಪಿ ಉತ್ತಮ ಮಟ್ಟದಲ್ಲಿರುವುದರಿಂದ ಈ ಸೀಸನ್ʼನ 100 ದಿನಗಳ ಆಟವನ್ನು ಮತ್ತೆ ಎರಡು ಅಥವಾ ಮೂರು ವಾರಗಳಿಗೆ ಮುಂದೂಡುವ ಸೂಚನೆಯನ್ನು ವಾಹಿನಿ ನೀಡಿದೆ.

ವಿವಿಧ ಭಾಷೆಗಳಲ್ಲಿ ಬಿಗ್‌ ಬಾಸ್‌ ಶೋ 100 ದಿನಗಳ ಕಾಲ ಪ್ರಸಾರವಾಗುತ್ತದೆ. ಬಿಗ್‌ ಬಾಸ್‌ ಎಂದರೆ 100 ದಿನಗಳ ಆಟ ಎಂದೇ ಪ್ರಸಿದ್ಧಿಯನ್ನು ಪಡೆದಿದೆ. ಕನ್ನಡದಲ್ಲಿ ಈ 100 ದಿನಗಳ ಬಿಗ್‌ ಬಾಸ್‌ ಆಟವು ಕೆಲವು ಬಾರಿ 98 ದಿನಕ್ಕೆ, ಮತ್ತೆ ಕೆಲವು ಸಲ 112 ಹಾಗೂ 117 ದಿನಗಳ ವರೆಗೆ ನಡೆದ ಇತಿಹಾಸವೂ ಇದೆ. ಟಿಆರ್‌ʼಪಿ ಉತ್ತಮ ಮಟ್ಟದಲ್ಲಿರುವುದರಿಂದ ಬಿಗ್‌ ಬಾಸ್‌ ಸೀಸನ್‌ 10 (Bigg Boss Kannada 10) ಅನ್ನು 2 ವಾರಗಳ ಕಾಲ ಮುಂದೂಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಆ ಮೂಲಕ ಈ ವರ್ಷದ ಬಿಗ್‌ ಬಾಸ್‌ 114 ಅಥವಾ 121 ದಿನಗಳ ವರೆಗೆ ನಡೆಯುವ ಸಾಧ್ಯತೆಯಿದೆ.

ಕನ್ನಡ ಬಿಗ್‌ ಬಾಸ್‌ ಸೀಸನ್‌ 10 (Bigg Boss Kannada 10) ಆರಂಭವಾದಂದಿನಿಂದ ಗಲಾಟೆ, ಜಗಳಗಳ ವಿಷಯದಿಂದಾಗಿಯೇ ಸುದ್ದಿಯಲ್ಲಿದೆ. ಅದರಲ್ಲೂ ವಿಶೇಷವಾಗಿ ವರ್ತೂರು ಅವರ ಹುಲಿ ಉಗುರು ಧರಿಸಿ ಬಂಧನವಾದ ವಿಷಯ ಮತ್ತು ಅವರ ಪತ್ನಿಯ ವಿಷಯ, ಸಂಗೀತಾ ಹಾಗೂ ಪ್ರತಾಪ್‌ ಅವರ ಕಣ್ಣಿಗೆ ಪೆಟ್ಟಾದ ವಿಷಯ. ಇವುಗಳಲ್ಲದೇ, ಕಿಚ್ಚ ಸುದೀಪ್‌ (Actor Kiccha) ಅವರ ಅದ್ಭುತ ನಿರೂಪಣೆ, ಸ್ಪರ್ಧಾಳುಗಳಿಗೆ ಅವರು ಮಾಡುವ ಪಾಠಗಳಿಂದಾಗಿಯೇ ಈ ಸೀಸನ್‌ ಹೆಚ್ಚು ಸುದ್ದಿಯಲ್ಲಿದ್ದು, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

You might also like
Leave A Reply

Your email address will not be published.