ಬಿಡುಗಡೆಗೂ ಮುನ್ನ ಪ್ರಭಾಸ್ ನಟನೆಯ ಕಲ್ಕಿ ಸಿನಿಮಾ ನೂರು ಕೋಟಿ ಕ್ಲಬ್ ಸೇರಿತಾ?

ಹಿಂದಿ ಭಾಷೆಯಲ್ಲೇ ಕಲ್ಕಿ ಸಿನಿಮಾ 175 ಕೋಟಿ ರೂಪಾಯಿಗೆ ಒಟಿಟಿಗೆ ಸೇಲ್ ಆಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ದಕ್ಷಿಣದ ಭಾಷೆಗಳಿಗೂ ನೂರಾರು ಕೋಟಿ ಕೊಟ್ಟು ಖರೀದಿಸಲಾಗಿದೆ ಎಂದು ಹೇಳಲಾಗುತ್ತಿದೆ. ಏನಿದು ಸುದ್ದಿ?

ಹೌದು ಎನ್ನುತ್ತಿದೆ ಬಿಟೌನ್. ಸಿನಿಮಾ ರಿಲಿಸ್ ಗೂ ಮುನ್ನ ದಾಖಲೆಯ ಮೊತ್ತ ಎನ್ನುವುದು ಸಿನಿ ಪಂಡಿತರ ಲೆಕ್ಕಾಚಾರ. ಅಂದುಕೊಂಡಂತೆ ಆಗಿದ್ದರೆ, ಕಲ್ಕಿ ಸಿನಿಮಾ ಮೇ 9ಕ್ಕೆ ಬಿಡುಗಡೆ ಆಗಬೇಕಿತ್ತು. ಈ ಮಾಹಿತಿಯನ್ನು ಸ್ವತಃ ಬಿಗ್ ಬಿ ಅಮಿತಾಭ್ ಅವರೇ ಹೇಳಿಕೊಂಡಿದ್ದರು.

ಆದರೆ, ಅಂದು ಸಿನಿಮಾ ರಿಲೀಸ್ ಆಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಲೋಕಸಭೆ ಚುನಾವಣೆ ಕಾರಣದಿಂದಾಗಿ ಬಿಡುಗಡೆಯನ್ನು ಚುನಾವಣೆ ನಂತರ ಮಾಡಲು ನಿರ್ಧರಿಸಿದ್ದಾರಂತೆ.

ಕಲ್ಕಿ ಸಿನಿಮಾ ರಿಲೀಸ್ ಡೇಟ್ ಅನ್ನು ಸ್ವತಃ ಅಮಿತಾಭ್ ಅವರೇ ಮಾಡಿದ್ದರೂ, ಮುಂದೂಡಿರುವ ವಿಚಾರವನ್ನು ಚಿತ್ರತಂಡ ಇನ್ನೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಮುಂದೂಡುವುದು ಪಕ್ಕಾ ಎಂದೇ ಹೇಳಲಾಗುತ್ತಿದೆ. ಮೊನ್ನೆಯಷ್ಟೇ ಅಮಿತಾಭ್ ಬಚ್ಚನ್ ಸಿನಿಮಾ ಶೂಟಿಂಗ್ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

“ನಿನ್ನೆ ರಾತ್ರಿ ಶೂಟಿಂಗ್ ಮುಗಿಸಿ ಬಂದೆ. ಚಿತ್ರದ ಚಿತ್ರೀಕರಣ ಮುಗಿದಿದೆ. ಅಂದುಕೊಂಡಂತೆ ಮೇ 9ಕ್ಕೆ ಚಿತ್ರ ರಿಲೀಸ್ ಆಗಲಿದೆ” ಎಂದು ಅವರು ಮಾಹಿತಿಯನ್ನು ಹಂಚಿಕೊಂಡಿದ್ದರು.

ಇತ್ತೀಚೆಗಷ್ಟೇ ನಟ ಅಮಿತಾಭ್ ಬಚ್ಚನ್ ಅವರ ಹುಟ್ಟು ಹಬ್ಬದ ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್ ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.

ಈ ಸಿನಿಮಾ ನಾನಾ ಕಾರಣಗಳಿಂದಾಗಿ ಕುತೂಹಲ ಮೂಡಿಸಿದೆ. ಪ್ರಭಾಸ್ ನಟನೆಯ ಈ ಸಿನಿಮಾದ ಮತ್ತೊಂದು ಪೋಸ್ಟರ್ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಭೈರವ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಜುಟ್ಟು ಬಿಟ್ಟುಕೊಂಡು ಸ್ಟೈಲಿಶ್ ಆಗಿ ಕಂಡಿದ್ದಾರೆ ಪ್ರಭಾಸ್. ಈ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

You might also like
Leave A Reply

Your email address will not be published.