‘ಛತ್ರಪತಿ ಸಂಭಾಜಿ‌’ ಸಿನೆಮಾಗೆ ಬಿಡುಗಡೆಯ ಭಾಗ್ಯ ದೊರೆಯಬಹುದೆ?

ಮೊಘಲರ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಮೊದಲ ಮಗನಾಗಿ ಜನಿಸಿದ ಛತ್ರಪತಿ ಸಂಭಾಜಿ ರಾಜೆಯ ಪರಕ್ರಾಮವೇನು ಕಡಿಮೆಯಿರಲಿಲ್ಲ. ಶಿವಾಜಿ ಮಹರಾಜರೇ ಇರಲಿ ಸಂಭಾಜಿ ರಾಜೇಯೇ ಇರಲಿ ಅವರ ತನುಮನವೆಲ್ಲಾ ಹಿಂದುತ್ವಕ್ಕೇ, ಹಿಂದವೀ ಸ್ವಾರಜ್ಯಕ್ಕೇ ಮುಡಿಪಾಗಿಟ್ಟಿದ್ದರು. ಒಂಭತ್ತು ವರ್ಷಗಳ ಕಡಿಮೆ ಅವಧಿಯಲ್ಲೇ ಸಂಭಾಜಿ ಮಹಾರಾಜರು ತನ್ನ ಅಪ್ರತಿಮ ದೇಶಭಕ್ತಿಯನ್ನು ತೋರಿ ಕೆಚ್ಚೆದೆಯಿಂದ ಮೊಘಲರನ್ನ ಎದುರಿಸುತ್ತಲೇ ತಾಯ್ನಾಡಿಗಾಗಿ ತನ್ನ ಜೀವ ಅರ್ಪಿಸಿದರು.‌ ಇಂತಹ ನಾಯಕನ ಸಿನೆಮಾ ಒಂದು ತೆರೆಗೆ ಬರಲು ಪಡಬಾರದ ಕಷ್ಟ ಎದುರಿಸುತ್ತಿದೆ ಎಂದರೆ ನಂಬಲು ಸಾಧ್ಯವೇ ಇಲ್ಲ.

ಹೌದು, ಸಂಭಾಜಿ ಮಹಾರಾಜರ ಹೆಸರಿನಲ್ಲೇ ತೆರೆಗೆ ಬರಬೇಕಾದ ಸಿನೆಮಾ ‘ಛತ್ರಪತಿ ಸಂಭಾಜಿ’ ಒಂದಿಲ್ಲೊಂದು ಸಂಕಷ್ಟ ಎದುರಿಸುತ್ತಲಿದೆ. ನಿಗದಿಪಡಿಸಿದ ದಿನಾಂಕದಂತೆ ಜನವರಿ 26 ರಂದು ಈ ಚಿತ್ರ ಬಿಡುಗಡೆಯಾಗಬೇಕಿತ್ತು. ಆದರೆ ಸಮಯಕ್ಕೆ ಸರಿಯಾಗಿ ಸೆನ್ಸಾರ್ ಬೋರ್ಡಿನಿಂದ ಸರ್ಟಿಫಿಕೇಟ್ ಸಿಗದ ಕಾರಣ ಮತ್ತೆ ಬಿಡುಗಡೆಯ ದಿನಾಂಕ ಮುಂದೂಡಬೇಕಾಗಿದೆ‌. ಜನವರಿ 27ಕ್ಕೇ ಪತ್ರಿಕಾಗೋಷ್ಠಿ ಕರೆದ ಚಿತ್ರದ ನಿರ್ದೇಶಕ ರಾಕೇಶ್ ದುಲ್ಗಜ್, ಹಲವು ಬಾರಿ ಪ್ರಯತ್ನಿಸಿದರೂ ಸೆನ್ಸಾರ್ ಬೋರ್ಡ್‌ನಿಂದ ಸರ್ಟಿಫಿಕೇಟ್ ಸಿಗುತ್ತಿಲ್ಲ ಮುಂಬೈ ಪ್ರಾದೇಶಿಕ ಭಾಗದ CBFC ಅಧಿಕಾರಿಯಾದ ಸೈಯದ್ ರಬೀಹಾಶ್ಮಿ ಔರಂಗಜೇಬ್‌ನ ಬಗ್ಗೆ ಸಿನೆಮಾದಲ್ಲಿ ತೋರಿಸಿರುವ ಭಾಗದ ಬಗೆಗೆ, ತಪ್ಪು ಇತಿಹಾಸ ತೋರಿಸಿದ್ದೀರಿ ಎಂದು ಹೇಳಿ ಔರಂಗಜೇಬನ ವಿರುದ್ಧ ಲಿಖಿತ ದಾಖಲೆಗಳನ್ನು ಒದಗಿಸುವಂತೆ ಕೋರುತ್ತಿದ್ದಾರೆ, ಹಾಗೂ ಇತಿಹಾಸದಲ್ಲಿ ಔರಂಗಜೇಬನ ಬಗೆಗೆ ಇತಿಹಾಸಕಾರರು ದಾಖಲಿಸಿರುವ ಎಲ್ಲಾ ದಾಖಲೆಗಳನ್ನು ಈಗಾಗಲೇ ಒದಗಿಸಿದರೂ ಕೂಡಾ ಸರ್ಟಿಫಿಕೇಟ್ ಸಿಗದೇ ಇರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

ಒಂಭತ್ತು ವರ್ಷಗಳ ಹಿಂದೆ ಅಂದರೆ 2014ರಲ್ಲೇ ಈ ಚಿತ್ರವನ್ನು ಘೋಷಿಸಿದ್ದು ಅಂದಿನಿಂದಲೂ ಇಲ್ಲಿಯ ತನಕ ಹಲವು ಅಡೆತಡೆಗಳನ್ನು ಎದುರಿಸುತ್ತಲೇ ಬಂದಿದೆ. ಸಿನೆಮಾದಲ್ಲಿ, ಔರಂಗಜೇಬನು ಸಂಭಾಜಿ ಮಹಾರಾಜರಿಗೆ ಇಸ್ಲಾಂಗೆ ಪರಿವರ್ತನೆ ಹೊಂದಲು ನಾನಾತರದ ಹಿಂಸೆ ನೀಡಿರುವುದನ್ನು ತೋರಿಸಲಾಗಿದೆ ಹಾಗೂ ಇದರ ಕುರಿತಾಗಿಯೇ CBFC ಅಧಿಕಾರು ಸಯ್ಯದ್ ದಾಖಲೆ ಕೇಳಿದ್ದಾರೆ. ಚಿತ್ರತಂಡವೂ ಕೂಡಾ ಲಭ್ಯವಿರುವ ಎಲ್ಲಾ ದಾಖಲೆಗಳನ್ನು ಒದಗಿಸಿದರೂ ಜನವರಿ 26ರ ಮೊದಲೇ ಸರ್ಟಿಫಿಕೇಟ್ ಪಡೆಯುವಲ್ಲಿ ವಿಫಲವಾಗಿತ್ತು ಈಗ ಹೊಸ ದಿನಾಂಕ ಅಂದರೆ ಫೆಬ್ರವರಿ 2ರಂದು ತೆರೆಗೆ ಬರಲು ಸಜ್ಜಾಗಿದೆ ಅಂದುಕೊಂಡಂತೆ ಸರ್ಟಿಫಿಕೇಟ್ ಸಿಕ್ಕಿದರೆ ಮಾತ್ರವೇ ಇದು ಸಾಧ್ಯ

You might also like
Leave A Reply

Your email address will not be published.