ಕರ್ನಾಟಕದ ಕ್ರಶ್ ಶ್ರೇಯಾಂಕ ಪಾಟೀಲ್ʼಗೆ ಇದೆ ʼಈ ವಿಚಿತ್ರ ಹವ್ಯಾಸʼ – ವಿಡಿಯೋ ವೈರಲ್‌

ಕ್ರಿಕೆಟ್ ಲೀಗ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌’ಸಿಬಿ) ಮಹಿಳಾ ತಂಡ ಐಪಿಎಲ್-2024ರ ಟ್ರೋಫಿ ಗೆಲುವಿನ ರೂವಾರಿ ಹಾಗೂ ಕರ್ನಾಟಕದ ಕ್ರಶ್ ಶ್ರೇಯಾಂಕ ಪಾಟೀಲ್‌’ಗೆ ವಿಚಿತ್ರ ಹವ್ಯಾಸವೊಂದಿದೆಯಂತೆ. ಈ ಕುರಿತು ಸ್ವತಃ ಅವರೇ ಹೇಳಿಕೆ ನೀಡಿದ್ದು, ಸದ್ಯ ಸಾಮಾಜಿಕ‌ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಹೌದು, ಜಗತ್ತಿನಲ್ಲಿ ಒಂದು ಲೀಗ್‌ ತಂಡವು ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿದ ದಾಖಲೆ ನಮ್ಮ ಕರ್ನಾಟಕದ ಆರ್‌’ಸಿಬಿ ತಂಡ ಹೊಂದಿದೆ. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ ಆರ್‌’ಸಿಬಿ ತಂಡವು ಕಳೆದ 16 ವರ್ಷಗಳಿಂದ ಒಂದು ಇಂಡಿಯನ್‌ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನೂ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ. ಇನ್ನು ಪುರುಷರ ಆರ್‌’ಸಿಬಿ ತಂಡ ಈವರೆಗೆ 3 ಬಾರಿ ಫೈನಲ್‌’ಗೆ ಬಂದಿದ್ದರೂ ಟ್ರೋಫಿ ಎತ್ತಿ ಹಿಡಿಯುವಲ್ಲಿ ವಿಫಲವಾಗಿದೆ.

ಆದರೆ, ಆರ್‌’ಸಿಬಿ ಮಹಿಳಾ ತಂಡವು ಕಳೆದ 2 ವರ್ಷಗಳಿಂದ ಐಪಿಎಲ್‌ ಆಡಲು ಆರಂಭಿಸಿದ್ದು, ಈ 2 ವರ್ಷದಲ್ಲಿಯೇ ಐಪಿಎಲ್‌ ಟ್ರೋಫಿಯನ್ನು ಎತ್ತಿ ಹಿಡಿದು ಸಾಧನೆ ಮಾಡಿರುವುದು ಶ್ಲಾಘನೀಯ.

ಶ್ರೇಯಾಂಕಾ ಪಾಟೀಲ್ ಆರ್‌’ಸಿಬಿ ತಂಡದಲ್ಲಿ ಮಾಡಿದ ಬೌಲಿಂಗ್‌ ಕಮಾಲ್‌’ನಿಂದಾಗಿ ಕೋಟ್ಯಾಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಶ್ರೇಯಾಂಕ ಅವರಿಗೆ ಸಂಬಂಧಪಟ್ಟ ಸಾವಿರಾರು ವಿಡಿಯೋ ಹಾಗೂ ಫೋಟೋಗಳು ಹರಿದಾಡುತ್ತಿವೆ. ಇದನ್ನು ನೋಡಿ ಕೋಟ್ಯಂತರ ಜನರು ಹೆಮ್ಮೆ ಪಡುತ್ತಿದ್ದಾರೆ.

ಇನ್ನು ಶ್ರೇಯಾಂಕ ಪಾಟೀಲ್‌ ಅವರ ಇನ್ನೊಂದು ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ತನಗೆ ಪ್ರೀತಿಯ ಕ್ಷಣಗಳು ಬಂದಾಗ ಹಾಗೂ ದುಃಖದ ಕ್ಷಣಗಳು ಬಂದಾಗ ಪಕ್ಕದಲ್ಲಿರುವವರ (ಪರಿಚಿತರು) ಕೈ, ಭುಜಕ್ಕೆ ಕಚ್ಚುತ್ತೇನೆ ಎಂದು ಸ್ವತಃ ಅವರೇ ಹೇಳಿಕೊಂಡಿರುವ ವಿಡಿಯೋ ವೈರಲ್ ಆಗುತ್ತಿದೆ.

You might also like
Leave A Reply

Your email address will not be published.