ಅಯ್ಯೋ ತಗಡೆ….. ಏನಿದು ನಟ ದರ್ಶನ್ ನಿರ್ಮಾಪಕ ಉಮಾಪತಿ ವಿವಾದ?

ನಟ ದರ್ಶನ್ ಹಾಗೂ ನಿರ್ಮಾಪಕ ಉಮಾಪತಿ ನಡುವೆ ವಾದ ವಿವಾದಗಳು ಬೆಳೆಯುತ್ತಲೇ ಇವೆ. ಸದ್ಯಕ್ಕೆ ಇದು ಮುಗಿಯುವ ಲಕ್ಷಣಗಳಂತು ಕಾಣುತ್ತಿಲ್ಲ. ಈ ಒಂದು ಹೇಳಿಕೆ ಮತ್ಯಾವ ಬೆಳವಣಿಗೆಗೆ ನಾಂದಿ ಹಾಡಿದೆ ಎಂಬುದರ ಕುರಿತು ಈ ಸ್ಟೋರಿ ಓದಿ..

ಏನದು ಘಟನೆ..?

ಕಳೆದ ವರ್ಷಾಂತ್ಯದಲ್ಲಿ ಬಿಡುಗಡೆಯಾಗಿ 50 ದಿನ ಥಿಯೇಟರ್ ನಲ್ಲಿ ಪ್ರದರ್ಶನ ಕಂಡು ಯಶಸ್ಸು ಗಳಿಸಿರುವ ‘ಕಾಟೇರ’ ಸಿನಿಮಾದ ಕತೆ ಮತ್ತು ಟೈಟಲ್ ತಾವು ಮಾಡಿಸಿದ್ದು ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹೇಳಿಕೆಗೆ ನಟ ದರ್ಶನ್ ನೀಡಿದ್ದ ‘ಅಯ್ಯೋ ತಗಡೇ..’ ತಿರುಗೇಟಿನಿಂದ ಹುಟ್ಟಿಕೊಂಡಿರೋ ವಿವಾದ ಇಲ್ಲಿಗೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಹೋದಲ್ಲಿ ಬಂದಲ್ಲಿ ಇಬ್ಬರೂ ತಿರುಗೇಟು ನೀಡುತ್ತಲೇ ಇದ್ದಾರೆ.

Actor Darshan And Umapati Gowda

ಉಮಾಪತಿ ಅವರು ಡಿಕೆಶಿ ಭೇಟಿ ಆಗಿದ್ದು ಯಾಕೆ?

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ್ದ ವೇಳೆ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಉಮಾಪತಿ, ಕ್ಷೇತ್ರದ ವಿಚಾರವಾಗಿ ಚರ್ಚಿಸಲು ಡಿಸಿಎಂ ಭೇಟಿಗೆ ಆಗಮಿಸಿದ್ದೇನೆ. ಕ್ಷೇತ್ರದಲ್ಲಿ ನೀರಿನ ಸಮಸ್ಯೆ, ರಸ್ತೆ ಬಗ್ಗೆ ಚರ್ಚೆಗಾಗಿ ಆಗಮಿಸಿದ್ದೆ ಎಂದಿದ್ದಾರೆ. ಇದೇ ವೇಳೆ ‘ರಾಜಕೀಯ ಚರ್ಚೆಗೆ ಬಂದಿದ್ದೀರಾ?’ ಎಂಬ ಪ್ರಶ್ನೆಗೆ ‘ತಮಗೆಲ್ಲ ಗೊತ್ತಿದೆ ಸಾಹೇಬರು ಬುದ್ಧಿ ಹೇಳೋದಾದರೆ ಹೇಳ್ತಾರೆ ಅಷ್ಟೇ ಎಂದರು.

ದರ್ಶನ್ ಟಾಂಗ್ ಗೆ ಉಮಾಪತಿ ನೀಡಿದ ಪ್ರತಿಕ್ರಿಯೆ ಏನು?

ನಟ ದರ್ಶನ್ ಆ ರೀತಿ ಪದಬಳಕೆ ಮಾಡಿದ್ದು ಸರಿನಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉಮಾಪತಿ, ಅವರೆಲ್ಲ ಹೊಟ್ಟೆ ತುಂಬಿದವರು, ನಾವು ಹಸಿದವರು. ಸಮಸ್ಯೆಗಳು ಎಲ್ಲ ಕಡೆ ಇರುತ್ತವೆ. ಆದರೆ ಅದನ್ನ ಹ್ಯಾಂಡಲ್ ಮಾಡುವ ರೀತಿ ನಮಗೆ ಗೊತ್ತಿರಬೇಕು. ಸಮಾಜದಲ್ಲಿ ತೂಕವಿರುವ ವ್ಯಕ್ತಿ ಘನತೆಯಿಂದ ನಡೆದುಕೊಳ್ಳಬೇಕು. ನಾನು ಹಿಂದೆನೇ ಹೇಳಿದ್ದೇನೆ, ದೇಹ ತೂಕವಿದ್ದರೆ ಸಾಲದು, ಮಾತಿನಲ್ಲಿ ತೂಕವಿರಬೇಕು. ನಾ ತಪ್ಪು ಮಾಡಿದ್ರು ತಪ್ಪೇ, ಯಾರೇ ತಪ್ಪು ಮಾಡಿದ್ರು ಅದು ತಪ್ಪೇ. ನಾವೆಲ್ಲ ಸಿನಿಮಾ ಮುಖಾಂತರ ಸಂದೇಶ ನೀಡಬೇಕು. ಇಂತಹ ವಿವಾದಗಳಿಂದ ಸಂದೇಶ  ಕೊಡುವಂತದ್ದೇನೂ ಇಲ್ಲ ಎಂದರು.

You might also like
Leave A Reply

Your email address will not be published.