ಗೂಗಲ್ ಗೆ ಲೆಕ್ಕ ಹೇಳಿ ಕೊಟ್ಟ ನಾಗಿಣಿ – ಯಾರದು? ಏನು ಕಾರಣ?

ಬಿಗ್ ಬಾಸ್ ಕನ್ನಡ ಸೀಸನ್ 9ರ ಖ್ಯಾತಿಯ ದೀಪಿಕಾ ದಾಸ್ ತಮ್ಮ ಹುಟ್ಟುಹಬ್ಬದ ಆಚರಣೆಯ ಸಂಭ್ರಮದಲ್ಲೇ, ಗೂಗಲ್ ಗೆ ಲೆಕ್ಕದ ಪಾಠ ಕಲಿಸುವ ಮೂಲಕ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ನಾಗಿಣಿ, ಬಿಗ್ ಬಾಸ್ ಶೋ ಮೂಲಕ ಸಂಚಲನ ಮೂಡಿಸಿದ್ದ ನಟಿ ದೀಪಿಕಾ ದಾಸ್ ಈಗ ಬರ್ತ್ಡೇ ಆಚರಣೆಯ ಖುಷಿಯಲ್ಲಿದ್ದಾರೆ. ಮಾಡ್ರನ್ ಡ್ರೆಸ್ ಧರಿಸಿ ಕೈಯಲ್ಲಿ ಬೊಕ್ಕೆ ಮತ್ತು ಕೇಕ್ ಹಿಡಿದು ಮುದ್ದಿನ ಶ್ವಾನದ ಜೊತೆ ಕ್ಯಾಮೆರಾಗೆ ನಟಿ ಪೋಸ್ ನೀಡಿದ್ದಾರೆ. ಇದೀಗ ದೀಪಿಕಾ ಪೋಸ್ಟ್ನಲ್ಲಿ ಬರೆದಿರುವ ಕ್ಯಾಪ್ಷನ್ ಎಲ್ಲರ ಗಮನ ಸೆಳೆಯುತ್ತಿದೆ.

ತಮ್ಮ ವಯಸ್ಸಿನ ಬಗ್ಗೆ ತಪ್ಪು ಮಾಹಿತಿ ನೀಡಿರುವ ಗೂಗಲ್ ಪ್ರಭುಗೆ ದೀಪಿಕಾ ಪಾಠ ಮಾಡಿದ್ದಾರೆ. ಗೂಗಲ್ ನಲ್ಲಿ ದೀಪಿಕಾ ದಾಸ್ ಬರ್ತಡೇಯನ್ನು ಫೆ.23, 1993 ಎಂದು ಹಾಕಿ 31 ವರ್ಷ ಎಂದು ಬರೆಯಲಾಗಿದೆ. ಅದಕ್ಕೆ ನಟಿ, ನನ್ನ ವಯಸ್ಸು 31 ವರ್ಷ ಅಂತ ಹೇಳೋದನ್ನು ನಿಲ್ಲಿಸು. 28 ವರ್ಷ ವಯಸ್ಸಾಗಿದೆ ಅಷ್ಟೇ. ಆದರೂ 82 ವರ್ಷ ಆಗಿರುವಂತೆ ಫೀಲ್ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ನನ್ನ ಜೀವನದಲ್ಲಿ ಆಗಿರುವ ಎಲ್ಲಾ ವಿಷಯಕ್ಕೂ ಥ್ಯಾಂಕ್ಸ್ ಎಂದು ಹೇಳುತ್ತಾ, ತಮಗೆ ತಾವೇ ಬರ್ತಡೇ ವಿಶ್ ಮಾಡಿಕೊಂಡಿದ್ದಾರೆ. ಹ್ಯಾಪಿ ಬರ್ತಡೇ ಮೈ ಸೆಲ್ಫ್ ಎಂದು ನಟಿ ಬರೆದುಕೊಂಡಿದ್ದಾರೆ.

You might also like
Leave A Reply

Your email address will not be published.