ಆಸ್ಕರ್ ಪ್ರಶಸ್ತಿ ಪ್ರಕಟ: ನಾಮಿನೇಷನ್ ಪಟ್ಟಿಯಿಂದ ನಿರಾಸೆ ಇದ್ದರೂ ತುಸು ನೆಮ್ಮದಿ

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಗಾಗಿ ನಾಮ ನಿರ್ದೇಶನ ಪಟ್ಟಿ ಪ್ರಕಟವಾಗಿದ್ದರ ಬೆನ್ನಲ್ಲೇ ಸಿನಿ ಪ್ರಿಯರಿಗೆ ನಿರಾಸೆ ಮನೆಮಾಡಿದೆ. ಹಾಗಾದರೆ ಈ ಭಾರಿ ಭಾರತದಿಂದ ಯಾವ ಸಿನಿಮಾಗಳು ಆಸ್ಕರ್ ಪ್ರಶಸ್ತಿಗೆ ಆಯ್ಕೆ ಆಗಿಲ್ವಾ? ನಾಮ ಪಟ್ಟಿಯಲ್ಲೂ ಸಿನಿಮಾಗಳ ಹೆಸರಿಲ್ವಾ? ಹೀಗೆ ನಾನಾ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮನೆಮಾಡಿದೆ. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವ ಪ್ರಯತ್ನ ಈ ವರದಿಯಲ್ಲಿದೆ.

ಕಳೆದ ಬಾರಿ ಭಾರತಕ್ಕೆ ಎರಡು ಆಸ್ಕರ್ ಪ್ರಶಸ್ತಿಗಳು ಬಂದಿದ್ದು, ಸಿನಿಪ್ರಿಯಾರಿಗೆ ಹಬ್ಬವಾಗಿತ್ತು. ಆದರೆ, ಈ ಬಾರಿ ಆಸ್ಕರ್ ನಾಮಿನೇಟ್ ಪಟ್ಟಿಯಲ್ಲಿ ಭಾರತದ ಯಾವುದೇ ಸಿನಿಮಾಗಳು ಇರದೇ ಇರುವುದು ಸಹಜವಾಗಿಯೇ ನಿರಾಸೆ ತಂದಿದೆ. ಹಾಗೆಂದ ಮಾತ್ರಕ್ಕೆ ತೀರಾ ನಿರಾಸೆ ಪಡುವಂತಹ ವಿಚಾರವು ಇಲ್ಲ.

ಹೌದು! ಈ ಭಾರಿ ಭಾರತೀಯ ಮಹಿಳೆ ನಿರ್ದೇಶನ ಮಾಡಿರುವ ಅದು ಭಾರತದಲ್ಲೇ ನಿರ್ಮಾಣವಾದ, ವಿದೇಶಿ ಸಂಸ್ಥೆ ತಯಾರಿಸಿದ ಡಾಕ್ಯುಮೆಂಟರಿ ನಾಮ ನಿರ್ದೇಶನ ಪಟ್ಟಿಯಲ್ಲಿ ಆಯ್ಕೆಯಾಗಿರುವುದು ಸಂತಸ ತಂದಿದೆ.

ಅತ್ಯುತ್ತಮ ಸಿನಿಮಾ ಪಟ್ಟಿ:
• ದಿ ಜೋನ್ ಆಫ್ ಇಂಟರೆಸ್ಟ್
• ಬಾರ್ಬಿ
• ಮಾಸ್ಟ್ರೊ
• ಓಪನ್ ಹೈಮರ್
• ಅನಾಟಮಿ ಆಫ್ ಎ ಫಾಲ್ ಸೇರಿದಂತೆ ಹಲವು ಚಿತ್ರಗಳು ಕಾಣಿಸಿಕೊಂಡಿದೆ.

ಅತ್ಯುತ್ತಮ ನಟ ವಿಭಾಗ
• ಜೆಫ್ರಿ ರೈಟ್
• ಬ್ರ್ಯಾಡ್ಲಿ ಕೂಪರ್
• ಪಾಲ್ ಗಿಯಾಮಟ್ಟಿ
• ಕೋಲ್ಮನ್ ಡೆಮಿನಿಗೋ ಸೇರಿದಂತೆ ಹಲವು ಕಲಾವಿದರು ಇದ್ದಾರೆ.

ನಿರ್ದೇಶನದ ವಿಭಾಗ
• ಕ್ರಿಸ್ಟೊಫರ್ ನೋಲನ್
• ಜಸ್ಟಿನ್ ಟ್ರೈಟ್
• ಜೊನಥನ್ ಗ್ಲೆಜರ್
• ಯೊಗೊರ್ಸ್ ಲ್ಯಾಂತಿಮೋಸ್ ಕಾಣಿಸಿಕೊಂಡಿದ್ದಾರೆ.

ಅತ್ಯುತ್ತಮ ನಟಿ ವಿಭಾಗ
• ಕ್ಯಾರಿ ಮುಲ್ಲಿಗನ್
• ಆನೆಟ್ ಬೆನಿಂಗ್
• ಎಮ್ಮ ಸ್ಟೊನ್
• ಸಾಂಡ್ರಾ ಹುಲ್ಲರ್ ಮೊದಲಾದವರು ಇದ್ದಾರೆ.

You might also like
Leave A Reply

Your email address will not be published.