ನಟಿ ತ್ರಿಷಾ ಪರವಾಗಿ ಮದ್ರಾಸ್ ಕೋರ್ಟ್ ತೀರ್ಪು – ನಟ ಮನ್ಸೂರ್ ಗೆ ವಿಧಿಸಿದ ದಂಡವೆಷ್ಟು? ಏನಿದು ಪ್ರಕರಣ?

ನಟಿ ತ್ರಿಷಾ, ನಟ ಚಿರಂಜೀವಿ ಮತ್ತು ನಟಿ ಖುಷ್ಬು ವಿರುದ್ಧ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಗೆ ಮದ್ರಾಸ್ ಹೈಕೋರ್ಟ್ ತೀರ್ಪು ಸಲ್ಲಿಸಿದ್ದು, ನಟ ಮನ್ಸೂರ್ ಅಲಿ ಖಾನ್ ಗೆ ತೀವ್ರ ಹಿನ್ನಡೆ ಆಗಿದೆ.

ಮನ್ಸೂರ್ ಅಲಿ ಖಾನ್ ಸಲ್ಲಿಸಿದ ಅರ್ಜಿಯ ಕುರಿತು ಮದ್ರಾಸ್ ಹೈಕೋರ್ಟ್ ಅರ್ಜಿ ವಿಚಾರಣೆ ನಡೆಸಿದ್ದು, ಮನ್ಸೂರ್ ಅಲಿ ಖಾನ್ ಸಲ್ಲಿಸಿರುವ ಈ ಅರ್ಜಿಯು ಪಬ್ಲಿಸಿಟಿ ಸ್ಟಂಟ್ ಹಾಗೇ ಕಾಣಿಸುತ್ತಿದೆ ಎಂದು ಅವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ. ಈ ತೀರ್ಪಿಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಏನಿದು ಪ್ರಕರಣ?
ತ್ರಿಷಾ, ಚಿರಂಜೀವಿ ಹಾಗೂ ಖುಷ್ಬೂ ಅವರು ಸೋಶಿಯಲ್ ಮೀಡಿಯಾಗಳಲ್ಲಿ ರೇಪ್ ಕಮೆಂಟ್ ಮಾಡುವ ಮೂಲಕ ನನ್ನ ಮಾನಹರಣ ಮಾಡಿದ್ದು, ಅವರ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಲು ಒಪ್ಪಿಗೆ ನೀಡಬೇಕು ಎಂದು ಮನ್ಸೂರ್ ಅಲಿ ಖಾನ್ ಮನವಿ ಮಾಡಿದ್ದರು.

ಈ ಕುರಿತು ಡಿಸೆಂಬರ್ 11ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸತೀಶ್ ಕುಮಾರ್ ಅವರು, ಮನ್ಸೂರ್ ಅಲಿ ಖಾನ್ ನಟಿಯ ವಿರುದ್ಧ ಕೆಟ್ಟ ಪದ ಬಳಕೆ ಮಾಡಿದ್ದಾರೆ. ಇಲ್ಲಿ ನಟಿ ತ್ರಿಷಾ ಅವರು ನ್ಯಾಯಾಲಯದ ಮೆಟ್ಟಿಲೇರಬೇಕಿತ್ತು. ಆದರೆ, ಮನ್ಸೂರ್ ಅಲಿ ಖಾನ್ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಇದೀಗ ಕೋರ್ಟ್ ಮನ್ಸೂರ್ ಅಲಿ ಖಾನ್ಗೆ 1 ಲಕ್ಷ ರೂ. ದಂಡ ವಿಧಿಸಿದ್ದು, ಚೆನ್ನೈನ ಕ್ಯಾನ್ಸರ್ ಸಂಸ್ಥೆಗೆ ಈ ಹಣವನ್ನು ಡಿಪೋಸಿಟ್ ಮಾಡುವಂತೆ ಸೂಚನೆ ನೀಡಿದೆ ಎಂದು ತಿಳಿಸಿದರು.

ತ್ರಿಷಾ ಅವರನ್ನು ಬೆಂಬಲಿಸಿರುವ ಕೋರ್ಟ್, ‘ಈ ಹೇಳಿಕೆಗೆ ಎಲ್ಲರೂ ಹೇಗೆ ಪ್ರತಿಕ್ರಿಯಿಸುತ್ತಿದ್ದರೋ ತ್ರಿಷಾ ಕೂಡ ಹಾಗೆಯೇ ಪ್ರತಿಕ್ರಿಯಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದೆ.

ಮನ್ಸೂರ್ ತ್ರಿಷಾ ಕುರಿತು ಹೇಳಿದೇನು?


ಮನ್ಸೂರ್ ಅಲಿ ಖಾನ್ ಹಾಗೂ ತ್ರಿಷಾ ‘ಲಿಯೋ’ ಸಿನಿಮಾದಲ್ಲಿ ನಟಿಸಿದ್ದು, ಇವರಿಬ್ಬರಿಗೂ ಒಟ್ಟಿಗೆ ತೆರೆ ಹಂಚಿಕೊಳ್ಳುವ ಅವಕಾಶ ಎಲ್ಲಿಯೂ ಸಿಕ್ಕಿರಲಿಲ್ಲ.

ಈ ವಿಚಾರದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಮನ್ಸೂರ್, ‘ನಾನು ಈ ಮೊದಲು ಸಾಕಷ್ಟು ರೇಪ್ ದೃಶ್ಯಗಳಲ್ಲಿ ನಟಿಸಿದ್ದೇನೆ. ತ್ರಿಷಾ ಕೂಡ ಲಿಯೋ ಚಿತ್ರದಲ್ಲಿ ಇರುತ್ತಾರೆ ಎಂದಾಗ ಮೊದಮೊದಲು ಖುಷಿ ಆಯಿತು. ಅವರ ಜೊತೆ ಬೆಡ್ರೂಂ ದೃಶ್ಯವೂ ಇರುತ್ತದೆಂದು ಭಾವಿಸಿದ್ದೆ. ಆದರೆ, ಅವರನ್ನು ನೋಡುವ ಅವಕಾಶವೂ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದು, ಹಲವರ ವಿರೋದ್ಧಕ್ಕೆ ಕಾರಣವಾಗಿತ್ತು.

You might also like
Leave A Reply

Your email address will not be published.