ಹುಟ್ಟುಹಬ್ಬ ಆಚರಿಸ್ತಿರೋರಿಗೆ ಇಲ್ಲಿ ಫ್ರೀ ಗಿಫ್ಟ್ ಸಿಗುತ್ತಂತೆ! – ಯಾವುದಪ್ಪ ಅದು? ತಿಳ್ಕೊಳೋಣ ಬನ್ನಿ!!

ಹುಟ್ಟುಹಬ್ಬ (Birthday) ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ! ಪ್ರತಿಯೊಬ್ಬರಿಗೂ ಅವರ ಹುಟ್ಟುಹಬ್ಬ ಅಂದ್ರೇನೆ ಒಂದು ಸ್ಪೆಷಲ್. ಅದ್ರಲ್ಲೂ ತಮ್ಮ ಪ್ರೀತಿಪಾತ್ರರ ಜನ್ಮದಿನಕ್ಕಂತೂ ಸ್ವಲ್ಪ ಹೆಚ್ಚಾಗೆ ಕಾತುರರಾಗಿರುತ್ತಾರೆ. ಹಾಗೆ ಅವರನ್ನು ಖುಷಿಪಡಿಸೋದಕ್ಕೆ ಏನೆಲ್ಲಾ ಸರ್ಕಸ್ ಮಾಡ್ತಾರೆ.

ಗಂಡ-ಹೆಂಡತಿ, ಪೋಷಕರು-ಮಕ್ಕಳು, ಪ್ರೇಮಿಗಳು, ಸ್ನೇಹಿತರು, ಸಂಬಂಧಿಕರು ಹೀಗೆ ಪ್ರತಿಯೊಬ್ಬರು ಅವರ ಪ್ರೀತಿಪಾತ್ರರ ಹುಟ್ಟುಹಬ್ಬವನ್ನು ಹೇಗೆಲ್ಲ ಆಚರಿಸಬೇಕು, ಯಾವ ಗಿಫ್ಟ್ ಕೊಡ್ಬೇಕು, ಹೇಗೆ ಸರ್ಪ್ರೈಸ್ ಕೊಡ್ಬೇಕು ಹೀಗೆ ನಾನಾ ರೀತಿಯಲ್ಲಿ ಆಲೋಚಿಸಿ ಮುಂಚಿತವಾಗೆ ತಯಾರಾಗಿ ಬಿಡುತ್ತಾರೆ.

ಮತ್ತೊಂದೆಡೆ ಬರ್ತ್ ಡೇ ಆಚರಿಸಿಕೊಳ್ಳುವ ವ್ಯಕ್ತಿಯು ಕೂಡ ಅಯ್ಯೋ ನನ್ ಬರ್ತ್ ಡೆ ಬಂದೆ ಬಿಡ್ತು. ಎಲ್ಲಾ ಸ್ನೇಹಿತರು, ಕುಟುಂಬದವರು ಪಾರ್ಟಿ ಕೇಳ್ತಾರೆ. ಅವರಿಗೆ ಏನ್ ಕೊಡಿಸೋದು. ಅವರ ಉತ್ಸಾಹಕ್ಕೆ ಪ್ರತಿರೂಪವಾಗಿ ಏನ್ ಮಾಡೋದು ಎಂಬಿತ್ಯಾದಿ ಆಲೋಚನೆಗಳಲ್ಲಿ ಮುಳುಗಿರುತ್ತಾರೆ.

ಆದರೆ, ಒಂದಷ್ಟು ಅಪ್ಲಿಕೇಷನ್’ಗಳು ಕೂಡ ಹುಟ್ಟುಹಬ್ಬ ಆಚರಿಸಿಕೊಳ್ಳೋರಿಗೆ ಸ್ಪೆಷಲ್ ಆಫರ್, ಫ್ರೀ ಗಿಫ್ಟ್ಸ್ ಗಳನ್ನು ಕೊಡ್ತಾರೆ ಅನ್ನೋದು ಯಾರಿಗಾದ್ರು ಗೊತ್ತಿದೆಯಾ? ಆ ಅಪ್ಲಿಕೇಷನ್’ಗಳು ಯಾವ್ಯಾವು? ಅದಕ್ಕೆ ನಾವೇನ್ ಮಾಡ್ಬೇಕು? ಎಂಬುದರ ಕುರಿತು ಇಲ್ಲಿ ತಿಳಿಸ್ತಿವಿ. ಓದಿದೋರು ಹಾಗೆ ಈ ವೆಬ್ಸೈಟ್ ಲಿಂಕ್ ನ ನಿಮ್ಮವರಿಗೂ ಕಳಿಸೋದ್ದನ್ನ ಮಾತ್ರ ಮರಿಬೇಡಿ!!

1) ಸ್ಟಾರ್ ಬಕ್ಸ್ (Starbucks):

ಭಾರತದ ಪ್ರಜೆಗಳಲ್ಲಿ ಯಾರಾದ್ರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ತಿದ್ರೆ ಸ್ಟಾರ್ ಬಕ್ಸ್ ಅಲ್ಲಿ 600 ರೂ. ಗಿಂತ ಹೆಚ್ಚಾಗಿ ಆರ್ಡರ್ ಮಾಡಿದ್ರೆ ಒಂದು ಕಾಫಿಯನ್ನು ಉಚಿತವಾಗಿ ನೀಡ್ತಾರೆ.

2) ಬಾಸ್ಕಿನ್ ರಾಬಿನ್ಸ್ (Baskin Robbins):

ಈ ಅಪ್ಲಿಕೇಷನ್ ಅಲ್ಲಿ ಅಕೌಂಟ್ ಓಪನ್ ಮಾಡಿದ ಗ್ರಾಹಕರ ಪೈಕಿ ಹುಟ್ಟುಹಬ್ಬದ ಆಚರಣೆ ಮಾಡ್ತಿದ್ರೆ ಅವರಿಗೆ ಉಚಿತವಾಗಿ ಐಸ್ ಕ್ರೀಂ ಅನ್ನು ನೀಡುತ್ತಾರೆ.

3) ಬಾರ್’ಬಿಕ್ಯೂ ನೇಷನ್ (Barbeque Nation):

ಈ ಶಾಪ್’ಗೆ ಹೋಗಿ ಜಸ್ಟ್ ತಮ್ಮ ಬರ್ತ್ ಡೆ ಅಂದ್ರೆ ಸಾಕು ಉಚಿತವಾಗಿ ಕೇಕ್ ಕಟ್ ಮಾಡಿಸಿ, ಡ್ಯಾನ್ಸ್ ಮಾಡುವ ಮೂಲಕ, ಹಾಡು ಹೇಳುವ ಮೂಲಕ ಸಖತ್ ಮನರಂಜನೆ ನೀಡ್ತಾರೆ.

4) ವೆಸ್ಟ್ ಸೈಡ್ (Westside):

ಈ ಆನ್ಲೈನ್ ಶಾಪಿಂಗ್ ಅಲ್ಲಿ ಎಷ್ಟಾದ್ರು ಶಾಪಿಂಗ್ ಮಾಡಿ ಬರ್ತ್ ಡೆ ಆಚರಿಸಿಕೊಳ್ಳುವವರಿಗೆ 20 ರಷ್ಟು Discount ನೀಡ್ತಾರೆ.

5) ವಂಡರ್ ಲಾ (Wonderla):

ವಂಡರ್ ಲಾ ಅಂದ್ರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ. ಬರ್ತ್ ಡೆ ಇರೋರು ಮಾತ್ರ ವಂಡರ್ ಲಾ ಹೋಗೋದ್ದನ್ನ ಮಿಸ್ ಮಾಡ್ಲೆ ಬೇಡಿ. ಯಾಕಂದ್ರೆ ಬರ್ತ್ ಡೆ ಸೆಲೆಬ್ರೆಷನ್ ಮಾಡ್ಕೊಳೊರಿಗೆ ಫ್ರೀ ಎಂಟ್ರಿ ಇದೆ. ಆದ್ರೆ ಮುಂಚಿತವಾಗೆ ಬುಕ್ ಮಾಡಿರಬೇಕಷ್ಟೆ.

ನೋಡಿದ್ರಲ್ಲ ಫ್ರೆಂಡ್ಸ್, ಇನ್ಯಾಕೆ ತಡ. ನಾಳೆ ನಿಮ್ ಬರ್ತ್ ಡೆಯಂದು ಈ ಮೇಲಿನ ಆಫರ್ ಗಳನ್ನು ಮಿಸ್ ಮಾಡ್ಲೆಬೇಡಿ. ಹಾಗೆ ನಿಮ್ ಸ್ನೇಹಿತರಿಗೂ ಈ ವೆಬ್ಸೈಟ್ ಲಿಂಕ್ ಕಳಿಸೋದನ್ನ ಮರಿಬೇಡಿ. ಈ ಲೇಖನ ಓದ್ತಿರೋರ ಪೈಕಿ ಇಂದು ಯಾರೆಲ್ಲ ಬರ್ತ್ ಡೆ ಆಚರಿಸಿಕೊಳ್ತಿದ್ದಾರೋ, ಅವರಿಗೆಲ್ಲ ನಮ್ಮ ಇತಿಹಾಸ ವೆಬ್ಸೈಟ್ ಕಡೆಯಿಂದ “ಹುಟ್ಟು ಹಬ್ಬದ ಹಾರ್ದೀಕ ಶುಭಾಶಯಗಳು”.

You might also like
Leave A Reply

Your email address will not be published.