BBK Season 10 : ಮುಗಿಯದ ಸಂಕಷ್ಟಗಳ ಸರಮಾಲೆ – ಪ್ರತಾಪ್ ವಿರುದ್ಧ 2.5 ಕೋಟಿ ಮಾನನಷ್ಟ ಮೊಕದ್ದಮೆ

ಕನ್ನಡದ ಬಿಗ್‌ ಬಾಸ್ ಸೀಸನ್‌ 10ರ (BBK Season 10) ಸ್ಪರ್ಧಿ ಡ್ರೋನ್‌ ಪ್ರತಾಪ್‌ (Drone Pratap) ಸದಾ ಒಂದಿಲ್ಲೊಂದು ಸಂಕಷ್ಟಗಳ ಸರಮಾಲೆಯಲ್ಲಿಯೇ ಮುಳುಗೇಳುತ್ತಿದ್ದಾರೆ. ಬಿಗ್‌ ಬಾಸ್‌ ವೇದಿಕೆಯ ಮೆಟ್ಟಿಲು ಹತ್ತಿದ ದಿನದಿಂದಲೇ ಅವಮಾನ, ಅಸಡ್ಡೆ, ಪ್ರತಿಸ್ಪರ್ಧಿಗಳ ಅನಾವಶ್ಯಕ ಕೋಪಕ್ಕೆ ತುತ್ತಾಗಿದ್ದರು.

ಇದೀಗ ಡ್ರೋನ್‌ ಪ್ರತಾಪ್‌ ಬಿಗ್‌ ಬಾಸ್‌ ಮನೆಯೊಳಗಿನ ಪ್ರತಿಸ್ಪರ್ಧಿಗಳಿಂದ ಬದಲಾಗಿ ಬಿಬಿಎಂಪಿ ಅಧಿಕಾರಿಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿ (Colours Kannada TV) ಪ್ರಸಾರ ಮಾಡುವ ಬಿಗ್‌ ಬಾಸ್‌ʼನಲ್ಲಿ ಸ್ಪರ್ಧಿ ಡ್ರೋನ್ ಪ್ರತಾಪ್‌ (Drone Pratap) ಸಹ ಸ್ಪರ್ಧಿಗಳೊಂದಿಗೆ ಮಾತನಾಡುತ್ತಾ, ಕೊರೋನಾ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು ತನ್ನನ್ನು ಕೆಟ್ಟದ್ದಾಗಿ ನಡೆಸಿಕೊಂಡಿದ್ದಾರೆ ಎಂದು ನೀಡಿದ್ದ ಹೇಳಿಕೆ ಇದೀಗ ಅವರಿಗೇ ಉರುಳಾಗಿದೆ.

ಡ್ರೋನ್‌ ಪ್ರತಾಪ್‌ ತಮ್ಮ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡಿದ್ದಾರೆ. ಕೊರೋನಾ ನಿಯಮಾವಳಿ ಪ್ರಕಾರವೇ ಅವರನ್ನು ನಡೆಸಿಕೊಳ್ಳಲಾಗಿದೇ. ಅವರಿಗೆ ಅಗೌರವ ಬರುವಂತೆ ಯಾವುದೇ ರೀತಿಯಿಂದಲೂ ನಡೆದುಕೊಂಡಿಲ್ಲ ಎಂದು ಬಿಬಿಎಂಪಿ ಅಧಿಕಾರಿ ಪ್ರಯಾಗ್‌ ಈ ಮಾನನಷ್ಟ ಮೊಕದ್ದಮೆ ಹೂಡಿ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಪ್ರಯಾಗ್ ರಾಜ್ ಬಿಗ್ ಬಾಸ್ 10ರ (BBK Season 10) ಸ್ಪರ್ಧಿ ಡ್ರೋನ್ ಪ್ರತಾಪ್ (Drone Pratap) ವಿರುದ್ಧ 50 ಲಕ್ಷ ರೂ. ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮತ್ತೊಬ್ಬ ಅಧಿಕಾರಿ 2 ಕೋಟಿ ರೂ.ಗೆ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಚಾರಕ್ಕೆ ವಾದ – ಪ್ರತಿವಾದ ನಡೆದಿದ್ದು ಇಂದು ಗುರುವಾರ ಕೋರ್ಟ್‌ನಿಂದ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

Drone prathap

ಘಟನೆ ಏನು?

ಬಿಗ್‌ ಬಾಸ್‌ (BBK Season 10) ಮನೆಯಲ್ಲಿ ಡ್ರೋನ್‌ ಪ್ರತಾಪ್‌ ತಮ್ಮ ಕ್ವಾರಂಟೈನ್‌ ಅವಧಿಯ ಬಗ್ಗೆ ಮಾತನಾಡಿದ್ದರು. ಅದು ಕಲರ್ಸ್‌ ಕನ್ನಡ ವಾಹಿನಿಯಲ್ಲಿ (Colours Kannada TV) ಪ್ರಸಾರವಾಗಿತ್ತು. ಈ ಮಾತುಕತೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಪ್ರತಾಪ್‌ ಗಂಭೀರವಾದ ಆರೋಪ ಮಾಡಿದ್ದರು.

ಕ್ವಾರಂಟೈನ್ ಸಮಯದಲ್ಲಿ ಅಧಿಕಾರಿಯೊಬ್ಬರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡಿದ್ದರು. ಮೆಂಟಲಿ ಅನ್‍ಸ್ಟೇಬಲ್ ಅಂತಾ ಸಹಿ ಮಾಡುವಂತೆ ತಲೆತಲೆಗೆ ಹೊಡೆದು ಕಿರುಕುಳ ಕೊಟ್ಟಿದ್ದರು. ಹೋಟೆಲ್‍ನಿಂದ ಕೆಳಗೆ ಬಂದ್ಮೇಲೆ ನನಗೆ ಏನೇನು ಮಾಡಿದ್ರೋ, ಅದನ್ನ ಸ್ವಲ್ಪ ಹೇಳಿದೆ. ಇವ್ನು ಹೇಗಿದ್ರೂ ಸುಳ್ಳು ಹೇಳ್ತಾನೆ. ಇವ್ನು ಹೇಳೋದೇ ಸುಳ್ಳು. ನಂಬಬೇಡಿ ಎಂದು ಮಾಧ್ಯಮಗಳಿಗೆ ಹೇಳಿ ಕಳುಹಿಸಿದರು ಎಂದು ಡ್ರೋನ್ ಪ್ರತಾಪ್ ಆರೋಪ ಮಾಡಿದ್ದರು.

BBMP

ಅಧಿಕಾರಿಯ ಪ್ರತಿಕ್ರಿಯೆ :

ವಾಹಿನಿಯಲ್ಲಿ ಈ ಮಾತುಕತೆ ಪ್ರಸಾರವಾದ ಬೆನ್ನಲ್ಲೇ ಈ ಬಗ್ಗೆ ಪ್ರತಿಕಾ ಹೇಳಿಕೆ ನೀಡಿದ್ದ ಬಿಬಿಎಂಪಿಯ ನೋಡಲ್‌ ಅಧಿಕಾರಿ, ಪ್ರತಾಪ್‌ (Drone Pratap) ಕ್ವಾರಂಟೈನ್‌ ನಿಯಮ ಉಲ್ಲಂಘನೆ ವಿರುದ್ಧ ನಾನೇ ಪ್ರಕರಣ ದಾಖಲಿಸಿದ್ದೆ. ಕಾನೂನು ಪ್ರಕಾರವೇ ನಾನು ನಡೆದುಕೊಂಡಿದ್ದೇನೆ. ಪ್ರತಾಪ್‌ ಮಾತಲ್ಲಿ ಯಾವುದೇ ಹುರುಳಿಲ್ಲ. ಈತ ಮಹಾನ್‌ ಸುಳ್ಳುಗಾರ ಎಂದು ಕಿಡಿಕಾರಿದ್ದರು.

You might also like
Leave A Reply

Your email address will not be published.