ಒಟಿಟಿಗೆ ಕಾಲಿಟ್ಟ ಹನುಮಾನ್‌ – ಇಲ್ಲೂ ದಾಖಲೆ ಸೃಷ್ಠಿಸುತ್ತಾ?

ಭಾರೀ ಸದ್ದು ಮಾಡಿರುವ ಹನುಮಾನ್ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ (OTT) ಸ್ಟ್ರೀಮಿಂಗ್ ಆಗುವ ಕುರಿತಂತೆ ಹರಡಿದ ಸುದ್ದಿ ಜನರ ನಿರೀಕ್ಷೆಯನ್ನು ಹುಸಿಯಾಗಿಸಿತ್ತು. ಆದರೆ, ಇದೀಗ ಒಟಿಟಿಯಲ್ಲಿ ಸಿನಿಮಾ ತೆರೆಕಂಡಿದ್ದು, ಇದರಲ್ಲೂ ಕೆಲ ವಿಭಜನೆ ಹಾಕಲಾಗಿದೆಯಂತೆ. ಏನದು?

ಹೌದು! ಒಪ್ಪಂದ ಪ್ರಕಾರ ಸಿನಿಮಾ ರಿಲೀಸ್ ಆಗಿ ಮೂರೇ ಮೂರು ವಾರದಲ್ಲಿ ಹನುಮಾನ್ ಚಿತ್ರ ಒಟಿಟಿಯಲ್ಲಿ ಬರಬೇಕಿತ್ತು. ಸಿನಿಮಾ ಇನ್ನೂ ಥಿಯೇಟರ್ ನಲ್ಲಿ ಇರುವ ಕಾರಣದಿಂದಾಗಿ 55 ದಿನಗಳ ನಂತರ ಚಿತ್ರವನ್ನು ಒಟಿಟಿಯಲ್ಲಿ ತರಲು ನಿರ್ಧರಿಸಲಾಗಿತ್ತು. ಅಂದುಕೊಂಡಂತೆ ಆಗಿದ್ದರೆ ಮಾರ್ಚ್ 2 ರಿಂದ ಝೀ 5 ನಲ್ಲಿ ಚಿತ್ರ ಬರಬೇಕಿತ್ತು. ದುರದೃಷ್ಟವಷಾತ್ ಮಾರ್ಚ್ 2ನೇ ತಾರೀಖು ಒಟಿಟಿಯಲ್ಲಿ ಹನುಮಾನ್ ಸಿಗಲಿಲ್ಲ.

ಈ ನಿಟ್ಟಿನಲ್ಲಿ ಮತ್ತೊಂದು ದಿನಾಂಕವನ್ನು ಘೋಷಣೆ ಮಾಡಲಾಯಿತು. ಅದರಂತೆ ಮಾರ್ಚ್ 16ಕ್ಕೆ ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಒಟಿಟಿಗೆ ಹನುಮಾನ್ ಬರಬೇಕಿತ್ತು. ತಾಂತ್ರಿಕ ಕಾರಣದಿಂದಾಗಿ ಕೇವಲ ಒಂದೇ ಒಂದು ಭಾಷೆಯಲ್ಲಿ ಸ್ಟ್ರೀಮಿಂಗ್ ಆಗುತ್ತಿದ್ದು, ಸದ್ಯಕ್ಕೆ ತೆಲುಗಿನಲ್ಲಿ ಮಾತ್ರ ಈ ಸಿನಿಮಾವನ್ನು ನೋಡಬಹುದಾಗಿದೆ.

Hanuman who stepped in OTT - creating a record here too?

ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಮೂಡಿ ಬಂದಿರುವ ಹನುಮಾನ್ ಚಿತ್ರ ಜಾಗತಿಕ ಮಟ್ಟದಲ್ಲಿ ಸಖತ್ ಸದ್ದು ಮಾಡುತ್ತಿದೆ. ರಿಲೀಸ್ ಆದ 14 ದಿನಕ್ಕೆ 250 ಕೋಟಿ ರೂಪಾಯಿ ಗಳಿಕೆಯು ಮಾಡಿತ್ತು. ತೇಜ ಸಜ್ಜ ನಟಿಸಿರುವ ‘ಹನುಮಾನ್’ ಸಿನಿಮಾ ಈಗಾಗಲೇ ಸೂಪರ್ ಡೂಪರ್ ಹಿಟ್ ಆಗಿದೆ. ಈ ಚಿತ್ರವನ್ನು ಪಾರ್ಟ್ 2 ಮಾಡಲು ತೆರೆಮರೆಯಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ಹೀಗಿರುವಾಗ ಪ್ರದೀಪ್ ವರ್ಮಾ ಅವರ ನಿರ್ದೇಶನದಲ್ಲಿ ‘ಹನುಮಾನ್ ಪಾರ್ಟ್ 2’ ಸಿದ್ಧತೆ ಆರಂಭಿಸಿದೆ.

You might also like
Leave A Reply

Your email address will not be published.