ಇದು ಕ್ರಶ್ ಅಡ್ಡ ಗುರು! ನಿಮಗ್ಯಾರ ಮೇಲೆ ಕ್ರಶ್ ಇದೆ?

ಕ್ರಶ್ ಯಾರಿಗೆ ಇರಲ್ಲ ಹೇಳಿ. ಲವರ್ ಇಲ್ಲ ಅಂದ್ರು ಒಪ್ಪಬಹುದೆನೋ, ಆದ್ರೆ ಈ ಕ್ರಶ್ ಇಲ್ಲ ಅಂದ್ರೆ ಒಪ್ಪೋದು ಬಿಡಿ ನಂಬಕ್ಕೆ ಕಷ್ಟ ಆಗುತ್ತೆ. ಪಕ್ಕದ ಮನೆ ಮೇಲೆ ಬಾಡಿಗೆಗೆ ಬಂದ ಹುಡುಗನ ಮೇಲೋ, ಪಕ್ಕದ ಕ್ಲಾಸ್ ಅಲ್ಲಿ ಓದ್ತಿದ್ದ ಹುಡುಗಿನೋ ಅಥವಾ ಬಸ್ ಅಲ್ಲಿ ದಿನ ಮೀಟ್ ಆಗ್ತಿದ್ದ ಕಂಡಕ್ಟರೋ, ಟ್ರಾಫಿಕ್ ಪೊಲೀಸೋ, ನರ್ಸೋ ಹೀಗೆ ಯಾರಾದ್ರು ಮೇಲೆ ನಮ್ಗೆ ಕ್ರಶ್ ಹಾಗೆ ಇರುತ್ತೆ ಅಲ್ವೇ?

ಹಾಗೆ ಬಹುತೇಕರಿಗೆ ಈ ಸೆಲೆಬ್ರೆಟಿಗಳ ಮೇಲೂ ಕ್ರಶ್ ಇರುತ್ತೆ. ಇನ್ನೂ ಸೆಲೆಬ್ರೆಟಿಗಳಲ್ಲೂ ಅವರವರ ಮೇಲೆ ಕ್ರಶ್ ಆಗಿರುತ್ತೆ. ಈ ಪೈಕಿ ಯಾವ ಯಾವ ಸೆಲೆಬ್ರೆಟಿಗಳಿಗೆ ಯಾವ ಯಾವ ಸೆಲೆಬ್ರೆಟಿಗಳ ಮೇಲೆ ಕ್ರಶ್ ಆಗಿದೆ ಅನ್ನೋದನ್ನ ಈ ಲೇಖನದಲ್ಲಿ ತಿಳಿಸ್ತ ಹೋಗ್ತಿವಿ! ಓದಿದ್ಮೇಲೆ ನಿಮ್ಗೆ ಯಾರ ಮೇಲೆ ಕ್ರಶ್ ಇದೆ ಅಂತ ನಮಗೂ ಕಮೆಂಟ್ ಮಾಡಿ..

1. ರಶ್ಮಿಕಾ ಮಂದಣ್ಣ:


ನ್ಯಾಷನಲ್ ಕ್ರಶ್ ಎಂದೇ ಖ್ಯಾತಿ ಪಡೆದ ರಶ್ಮಿಕಾ ಮಂದಣ್ಣ ಅವರಿಗೂ ಓರ್ವ ಕ್ರಶ್ ಇದಾರೆ ಅಂದ್ರೆ ನಂಬ್ತಿರ? ಹೌದು, ತಮಿಳು ನಟ ದಳಪತಿ ವಿಜಯ್ ಮೇಲೆ ಅವರ ಬಾಲ್ಯದಿಂದಲೇ ಕ್ರಶ್ ಆಗಿದೆ ಎಂದು ‘ವಾರಿಸು’ ಸಿನಿಮಾಗೆ ಆಯ್ಕೆ ಆಗುವುದಕ್ಕೂ ಮೊದಲೇ ಈ ವಿಚಾರವನ್ನು ರಶ್ಮಿಕಾ ಅವರೇ ಖುದ್ದಾಗಿ ಹೇಳಿದ್ದರು. ಇದೀಗ ರಶ್ಮೀಕಾ ‘ಪುಷ್ಪ 2’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ.

2. ವಿಜಯ್ ದೇವರಕೊಂಡ:


‘ಕಾಫಿ ವಿತ್ ಕರಣ್’ ಶೋಗೆ ಆಗಮಿಸಿದ್ದ ವಿಜಯ್ ದೇವರಕೊಂಡ, ಸಮಂತಾ ಅವರನ್ನು ಡಾರ್ಲಿಂಗ್ ಎಂದು ಕರೆಯುವ ಮೂಲಕ ಸುದ್ದಿಯಲ್ಲಿದ್ದರು. ಈ ವಿಡಿಯೋ ಕ್ಲಿಪ್ ಕೂಡ ಭಾರೀ ವೈರಲ್ ಆಗಿದ್ದು, ‘ಖುಷಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ.

3. ದೀಪಿಕಾ ಪಡುಕೋಣೆ:


ದೀಪಿಕಾ ಅವರಿಗೆ ಲಿಯಾನಾರ್ಡೋ ಡಿಕಾಪ್ರಿಯೋ ಮೇಲೆ ಕ್ರಶ್ ಇದೆ. ಅವರ ಪೋಸ್ಟರ್ ಮನೆಯ ರೂಂನಲ್ಲಿದೆ ಎಂದು ದೀಪಿಕಾ ಅವರೇ ಖುದ್ದಾಗಿ ಈ ಹಿಂದೆ ರಿವೀಲ್ ಮಾಡಿದ್ದರು. ಇಂದಿಗೂ ಬಾಲಿವುಡ್ನಲ್ಲಿ ಇವರಿಗೆ ಸಖತ್ ಬೇಡಿಕೆ ಇದೆ. ಸದ್ಯ ‘ಫೈಟರ್’ ಸಿನಿಮಾ ರಿಲೀಸ್ಗಾಗಿ ಕಾಯುತ್ತಿದ್ದು, ಜನವರಿ 25ರಂದು ಬಿಡುಗಡೆಯಾಗಲಿದೆ.

4. ರಣಬೀರ್ ಕಪೂರ್:


ರಣಬೀರ್ ಗೆ ಮಾಧುರಿ ದೀಕ್ಷಿತ್ ಮೇಲೆ ಕ್ರಶ್ ಇತ್ತು. ಮಾಧುರಿ ಮದುವೆಯಾದಾಗ ರಣಬೀರ್ ಕಪೂರ್ಗೆ ಸಾಕಷ್ಟು ಬೇಸರ ಆಗಿತ್ತು. ‘ಯೇ ಜವಾನಿ ಹೇ ದಿವಾನಿ’ ಸಿನಿಮಾದಲ್ಲಿ ಮಾಧುರಿ ಜೊತೆ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು. ಇವರು ‘ಗಾಗ್ರಾ..’ ಹಾಡಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಹಾಗೂ ಆಲಿಯಾ ಭಟ್ ಮೇಲೆ ಕೂಡ ಅವರಿಗೆ ಕ್ರಶ್ ಇತ್ತಂತೆ. ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ಒಟ್ಟಾಗಿ ನಟಿಸೋ ಅವಕಾಶ ಸಿಕ್ಕಾಗ ಅವರು ಖುಷಿಪಟ್ಟಿದ್ದರು.

5. ನೀತು ಕಪೂರ್:


ನಟಿ ನೀತು ಕಪೂರ್ ಅವರು ‘ಕಾಫಿ ವಿತ್ ಕರಣ್ ಸೀಸನ್ 8’ರಲ್ಲಿ ಭಾಗವಹಿಸಿದ್ದರು. ಈ ವೇಳೆ ಶಶಿ ಕಪೂರ್ ಮೇಲೆ ಕ್ರಶ್ ಇತ್ತು ಎನ್ನುವ ವಿಚಾರವನ್ನು ಅವರೇ ರಿವೀಲ್ ಮಾಡಿದ್ದಾರೆ.

6. ಟೈಗರ್ ಶ್ರಾಫ್:


ನಟ ಟೈಗರ್ ಶ್ರಾಫ್ ಅವರು ಫಿಟ್ನೆಸ್ ಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಇಂಡಸ್ಟ್ರಿಗೆ ಹಲವು ಮಾಸ್ ಸಿನಿಮಾಗಳನ್ನು ನೀಡಿದ್ದಾರೆ. ‘ಕಾಫಿ ವಿತ್ ಕರಣ್ ಸೀಸನ್ 7’ ಶೋನಲ್ಲಿ ಭಾಗವಹಿಸಿದ್ದಾಗ ದೀಪಿಕಾ ಪಡುಕೋಣೆ ಮೇಲೆ ಕ್ರಶ್ ಇದೆ ಎಂದು ಸ್ವತಃ ಹೇಳಿಕೊಂಡಿದ್ದರು.

7. ಶಾರುಖ್ ಖಾನ್:


ಶಾರುಖ್ ಖಾನ್ ಅವರು ‘ಡಂಕಿ’ ಸಿನಿಮಾದಿಂದ ದೊಡ್ಡ ಯಶಸ್ಸು ಕಂಡಿದ್ದು, ಏಂಜಲೀನಾ ಜೋಲಿ ಮೇಲೆ ಕ್ರಶ್ ಇದೆ ಎಂದು ಎರಡು ಭಾರಿ ಹೇಳಿಕೊಂಡಿದ್ದರು.

8. ಕಾರ್ತಿಕ್ ಆರ್ಯನ್:


ಕಾರ್ತಿಕ್ ಆರ್ಯನ್ ಅವರು ಬಾಲಿವುಡ್ನಲ್ಲಿ ಹೆಸರು ಮಾಡಿದ್ದು, ಕರಿನಾ ಕಪೂರ್ ಮೇಲೆ ಕ್ರಶ್ ಇದೆ ಎಂದು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.

9. ಸಾರಾ ಅಲಿ ಖಾನ್:


ಸಾರಾ ಅಲಿ ಖಾನ್ ಅವರಿಗೆ ಕಾರ್ತಿಕ್ ಆರ್ಯನ್ ಮೇಲೆ ಕ್ರಶ್ ಇತ್ತು. ಇಬ್ಬರೂ ಡೇಟ್ ಕೂಡ ಮಾಡುತ್ತಿದ್ದರು. ದುರದೃಷ್ಟವಷತ್ ಈ ಪ್ರೀತಿ ಹೆಚ್ಚು ದಿನ ಉಳಿಯಲಿಲ್ಲ.

10. ಪರಿಣೀತಿ ಚೋಪ್ರಾ:


ನಟಿ ಪರಿಣೀತಿ ಚೋಪ್ರಾ ಅವರು ಇತ್ತೀಚೆಗೆ ಆಪ್ ನಾಯಕ ರಾಘವ್ ಚಡ್ಡಾ ಅವರನ್ನು ವರಿಸಿದ್ದಾರೆ. ಪರಿಣೀತಿಗೆ ಸೈಫ್ ಅಲಿ ಖಾನ್ ಮೇಲೆ ಕ್ರಶ್ ಇದೆ ಎಂದು ತಿಳಿದುಬಂದಿದೆ.

You might also like
Leave A Reply

Your email address will not be published.