ಮದುವೆ ಆಗ್ತಿದೀರಾ? ಹೆಲಿಕಾಪ್ಟರ್ ಬಾಡಿಗೆಗೆ ಇದೆ – ಈ ವರದಿ ಓದಿ

ಮದುವೆ ಅಂದ್ರೆ ಅದೊಂದು ಕನಸಿನ ಲೋಕ. ಜೀವನದಲ್ಲಿ ಒಮ್ಮೆ ಆಗೋ ಮದುವೆ ಜೀವನ ಪರ್ಯಾಂತ ನೆನಪಿರಲು ಲಕ್ಷಂತರ ರೂಪಾಯಿ ಖರ್ಚು ಮಾಡುತ್ತೇವೆ. ಆಧುನಿಕತೆಗೆ ತಕ್ಕಂತೆ ಪ್ರಿ-ವೆಡ್ಡಿಂಗ್ ಶೂಟ್ ಕೂಡ ಕಾಮನ್ ಆಗೋಗಿದೆ. ನವಜೋಡಿಗಳು ಕೂಡ ಎತ್ತಿನಬಂಡಿ, ಟ್ರ್ಯಾಕ್ಟರ್ ಗಳನ್ನು ಬಿಟ್ಟು ಕಾರುಗಳನ್ನು ಏರಲಾರಂಭಿಸಿದ್ದಾರೆ. ಇದೀಗ ಹೆಲಿಕಾಪ್ಟರ್ ಗಳು ಕಾರುಗಳನ್ನು ನುಂಗಲಾರಂಭಿಸಿದ್ದು, ಎಲ್ಲೆಡೆ ಎಲಿಕಾಫ್ಟರ್ ದೆ ಸದ್ದಾಗಿದೆ.

ಪ್ರಸ್ತುತತೆಯಲ್ಲಿ ನವಜೋಡಿಗಳು ಹೆಲಿಕಾಪ್ಟರ್ ನಲ್ಲಿ ವರನ ಮನೆ ತಲುಪೋದು ಫ್ಯಾಷನ್ ಆಗಿ ಬದಲಾಗಿದೆ. ಹಾಗಾದ್ರೆ ನಿಮ್ಮ ಮದುವೆಯಲ್ಲೂ ಪತ್ನಿಯನ್ನು ಹೆಲಿಕಾಪ್ಟರ್ ನಲ್ಲಿ ಮನೆಗೆ ಕರೆತರಬೇಕೆಂಬ ಪ್ಲ್ಯಾನ್ ಇದೆಯಾ? ಅದು ಸಾಧ್ಯನ? ಹೆಲಿಕಾಪ್ಟರ್ ಬುಕ್ಕಿಂಗ್ ಹೇಗೆ? ಬೆಲೆ ಎಷ್ಟು? ಏನೆಲ್ಲ ದಾಖಲೆ ಬೇಕು? ಹೀಗೆ ನಿಮ್ ಮದುವೆನೂ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡ್ಲಿಕ್ಕೆ ಸಿಂಪಲ್ ಟ್ರಿಕ್ ಕೊಡ್ಲಿಕ್ಕೆ ಬಂದಿವಿ. ಮಾಹಿತಿ ತಿಳ್ಕೊಂಡು ಮದುವೆಗೂ ಕರಿರಿ..!!

ಹೆಲಿಕಾಪ್ಟರ್ (Helicopter) ಬೆಲೆ ಎಷ್ಟು?
ನೀವು ಯಾವ ಹೆಲಿಕಾಪ್ಟರ್ ಬುಕ್ ಮಾಡಲಿದ್ದಿರಿ ಎಂಬ ಆಯ್ಕೆಯನ್ವಯ ಬೆಲೆ ನಿರ್ಧಾರವಾಗುತ್ತದೆ. ನೀವು ಯಾವುದೇ ಹೆಲಿಕಾಪ್ಟರ್ ತಗೊಂಡ್ರು ಅದ್ರ ಬೆಲೆ ಗಂಟೆ ಆಧಾರದ ಮೇಲೆ ತಿಳಿಯುತ್ತದೆ.

ಒಂದು ಮಾಹಿತಿ ಪ್ರಕಾರ, ಕರ್ನಾಟಕದಲ್ಲಿ ಪ್ರತಿ ಗಂಟೆಗೆ ಐವತ್ತು ಸಾವಿರದಿಂದ ಒಂದು ಲಕ್ಷದವರೆಗೆ ಹೆಲಿಕಾಪ್ಟರ್ ಚಾರ್ಜ್ ಇದೆ. ಸಾಮಾನ್ಯವಾಗಿ ಎರಡು ಗಂಟೆಗಳ ಕಾಲ ಹೆಲಿಕಾಪ್ಟರ್ ಲಭ್ಯವಿರುತ್ತದೆ. ನೀವು ಎಷ್ಟು ಸೀಟ್ ನ ಹೆಲಿಕಾಪ್ಟರ್ ಬುಕ್ ಮಾಡಿದ್ದೀರಿ ಎಂಬುದು ಕೂಡ ಇಲ್ಲಿ ಮುಖ್ಯವಾಗುತ್ತದೆ. ಹೆಚ್ಚು ಸೀಟ್ ನ ಹೆಲಿಕಾಪ್ಟರ್ ಬುಕ್ ಮಾಡಿದ್ರೆ ಹಾಗೂ ಹೆಚ್ಚು ಗಂಟೆಗೆ ಹೆಲಿಕಾಪ್ಟರ್ ಬಳಸಿಕೊಂಡಲ್ಲಿ ಇದರ ಬೆಲೆ ಗಂಟೆ ಲೆಕ್ಕದಲ್ಲಿ ಏರಿಕೆಯಾಗುತ್ತ ಹೋಗುತ್ತದೆ. ಕೆಲವೊಂದು ಕಂಪನಿಗಳು, ಹೆಲಿಕಾಪ್ಟರನ್ನು ಪ್ಯಾಕೇಜ್ ದರದಲ್ಲಿ ಬುಕ್ ಮಾಡುವ ಆಫರ್ ನೀಡಲಾರಂಭಿಸಿವೆ.

ಹೆಲಿಕಾಪ್ಟರ್ ಬುಕ್ಕಿಂಗ್ ಹೇಗೆ?
ನೀವು ಮದುವೆ ಕಾರ್ಯಕ್ಕೆ ಹೆಲಿಕಾಪ್ಟರ್ ಬಳಕೆ ಮಾಡ್ತಿದ್ದರೆ ಆನ್ ಲೈನ್ ಅಥವಾ ಆಫ್ ಲೈನ್ ನಲ್ಲಿ ಹೆಲಿಕಾಪ್ಟರ್ ಅನ್ನು ಬುಕ್ ಮಾಡಬಹುದು. ವಿವಿಧ ವಲಯಗಳಲ್ಲಿ ವಿಭಿನ್ನ ಹೆಲಿಕಾಪ್ಟರ್ ಆಪರೇಟರ್ಗಳಿವೆ. ನೀವು ಆನ್ ಲೈನ್‌ನಲ್ಲಿ ಹೆಲಿಕಾಪ್ಟರ್ ಅನ್ನು ಬುಕ್ ಮಾಡಲು ಬಯಸಿದರೆ ಅನೇಕ ಪ್ರಮುಖ ಪ್ರಯಾಣ ತಾಣಗಳು ಈ ಸೌಲಭ್ಯವನ್ನು ಒದಗಿಸುತ್ತವೆ. ಆಫ್ಲೈನ್ ಅಂದ್ರೆ ನೀವು ಕಂಪನಿ ಕಚೇರಿಗೆ ಹೋಗಿ ಮಾತುಕತೆ ನಡೆಸಬೇಕಾಗುತ್ತದೆ.

ಯಾವ ಅನುಮತಿ ಅಗತ್ಯ?
ಹೆಲಿಕಾಪ್ಟರ್ ಲ್ಯಾಂಡಿಂಗ್ ಮತ್ತು ಟೇಕಾಫ್ ಗೆ ಎರಡು ರೀತಿಯ ಅನುಮತಿ ಅಗತ್ಯವಿರುತ್ತದೆ.
1. ವಾಯುಪಡೆ
2. ವಿಮಾನ ನಿಲ್ದಾಣ ಪ್ರಾಧಿಕಾರ ಅಥವಾ ಸ್ಥಳೀಯ ಆಡಳಿತ
ಆದರೆ ಈ ಅನುಮತಿಗಾಗಿ ದಾಖಲೆ ಹಿಡಿದು ನೀವು ಓಡಾಡಬೇಕಾದ ಅಗತ್ಯವಿಲ್ಲ. ಹೆಲಿಕಾಪ್ಟರ್ ಕಂಪನಿ, ಆಪರೇಟರ್ ಗಳೆ ಈ ಅನುಮತಿಯನ್ನು ಪಡೆಯುತ್ತಾರೆ.

ಜಾಗದ ವ್ಯವಸ್ಥೆ :
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೆಲಿಕಾಪ್ಟರ್ ಹೋಗುವ ಕಾರಣ ಎರಡು ಕಡೆ ಹೆಲಿಕಾಪ್ಟರ್ ಇಳಿಯಲು ವ್ಯವಸ್ಥೆ ಮಾಡಬೇಕಾಗುತ್ತದೆ. ಅದಕ್ಕೆ ಅಗತ್ಯವಿರುವ ಸೂಕ್ತ ಜಾಗವನ್ನು ಪತ್ತೆ ಮಾಡಿ, ಅದನ್ನು ಸಿದ್ಧಪಡಿಸಬೇಕು. ಹೆಚ್ ಪೇಟಿಂಗ್ ಹಾಗೂ ವಿಶೇಷ ಹೊಗೆ ವ್ಯವಸ್ಥೆ ಸೇರಿದಂತೆ ಲ್ಯಾಂಡಿಂಗ್ ಗೆ ಅಗತ್ಯವಿರುವ ಉಳಿದ ವ್ಯವಸ್ಥೆಯನ್ನು ಹೆಲಿಕಾಪ್ಟರ್ ಆಪರೇಟರ್ ಪ್ರತಿನಿಧಿಗಳು ಮಾಡುತ್ತಾರೆ.

ಓದಿದ್ರಲ್ಲ. ನಿಮ್ ಕನಸಿನ ಹುಡುಗಿ ಅಥವಾ ಹುಡುಗನೊಂದಿಗೆ ಮದುವೆಯಲ್ಲಿ ಹೆಲಿಕ್ಯಾಪ್ಟರ್ ರೈಡ್ ಹೋಗ್ಬೇಕ? ಅಥವಾ ವಧುವನ್ನ ಹೆಲಿಕಾಫ್ಟರ್ ಮೂಲಕ ಕರೆತಂದು ಮನೆ ತುಂಬಿಸ್ಕೊಬೇಕ? ಫೋಟೋ ಶೂಟ್ ಅಲ್ಲಿ ಹೆಲಿಕ್ಯಾಪ್ಟರ್ ಪ್ಲ್ಯಾನ್ ಮಾಡಿದ್ದಿರ? ಹೀಗೆ ನಾನಾ ಕಾರಣಗಳಿಗೆ, ವೇಕೆಷನ್ ಗಳಿಗೆ ಹೆಲಿಕ್ಯಾಫ್ಟರ್ ಸಿದ್ದವಾಗಿದೆ. ಇನ್ನೂ ನಿಮ್ಮ ಕೈಯಲ್ಲಿ ಹಣವಿದ್ರೆ, ಮನಸಲ್ಲಿ ಆಸೆ ಇದ್ರೆ, ತಲೆತುಂಬಾ ಕನಸಿದ್ರೆ ನೀವ್ಯಾಕೆ ಹೆಲಿಕಾಪ್ಟರ್ ರೈಡ್ ಟ್ರೈ ಮಾಡಬಾರದು?

You might also like
Leave A Reply

Your email address will not be published.