2023 ರಲ್ಲಿ ಅತೀ ಹೆಚ್ಚು ಫುಡ್ ಆರ್ಡರ್ ಮಾಡಿದ ದೇಶ ಭಾರತ – ವಿವರ ಇಲ್ಲಿದೆ ಓದಿ.

ಬದಲಾದ ಕಾಲಘಟ್ಟಕ್ಕೆ ತಕ್ಕಂತೆ ಮಾನವನು ಬದಲಾಗುತ್ತಿದ್ದಾನೆ. ತಮ್ಮ ಜೀವನ ಸಾಗಣೆ, ದುಡಿಮೆ, ಮಕ್ಕಳ ಭವಿಷ್ಯ, ಪ್ರಸ್ತುತತೆ ಹೀಗೆ ನಾನಾ ಕಾರಣಗಳಿಗಾಗಿ ಮನುಷ್ಯ ಸಂಪಾದಿಸುವ ನೆಪವೊಡ್ಡಿ ಓಡುತ್ತಲಿದ್ದಾನೆ. ಒಂದೆಡೆ ಕೂತು ಸಮಾಧಾನದಿಂದ ತಿನ್ನುವಷ್ಟು ಸಮಯದ ಅಭಾವವಿರುವ ಪ್ರಸ್ತುತತೆಯಲ್ಲಿ ಇನ್ನೂ ಮಾಡಿ ತಿನ್ನುವುದಾದರು ದೂರದ ಮಾತು ಬಿಡಿ!

ಈ ಆನ್ಲೈನ್ ಕಾಲಮಾನ ಶುರುವಾದ ಮೇಲಂತು ಮನುಷ್ಯರು ಕೂತಲ್ಲೇ ಎಲ್ಲಾ ಪಡೆಯುತ್ತಿದ್ದಾರೆ. ಈ ಜ್ಯೋಮ್ಯಾಟೋ, ಸ್ವಿಗ್ಗಿಯಂತಹ ಆ್ಯಪ್ ಗಳು ಬಂದ ಮೇಲಂತು ಅಡುಗೆ ಮಾಡಿ ಉಣ್ಣುವುದ್ದಕ್ಕಿಂತ ಹೆಚ್ಚಾಗಿ ಆರ್ಡರ್ ಮಾಡಿ ಸವಿಯುವುದ್ದಕ್ಕೆ ಬಹುತೇಕ ಮಂದಿ ಅಡಿಕ್ಟ್ ಆಗಿಬಿಟ್ಟಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಆರ್ಡರ್ ಮಾಡಿದ ಕೆಲವೇ ನಿಮಿಷಗಳಲ್ಲಿ ಮನೆ ಬಾಗಿಲಿಗೆ ಬಿಸಿ ಬಿಸಿ ರೆಸಿಪಿಗಳು ಬರುತ್ತಿರುವಾಗ ಜನರೋ ಉಪ್ಪು, ಹುಳಿ, ಖಾರವಿಲ್ಲದ ಅಡಗೆ ಸವಿಯಲು ಹೇಗೆ ತಾನೆ ಬಯಸುತ್ತಾರೆ? ಈ ನಿಟ್ಟಿನಲ್ಲಿ 2023ರಲ್ಲಿ ಜನರು ಸ್ವಿಗ್ಗಿ ಆ್ಯಪ್ ಮೂಲಕ ಅತೀ ಹೆಚ್ಚು ಆರ್ಡರ್ ಮಾಡಿ ಸವಿದ ಫುಡ್ ಯಾವುದು? ಎಂಬುದನ್ನು ಇಲ್ಲಿ ತಿಳಿಯೋಣ!

ಆಹಾರ ಆರ್ಡರ್ ಮಾಡುವ ಮತ್ತು ವಿತರಣಾ ಸಂಸ್ಥೆಯು ಎಷ್ಟು ಜನ ಯಾವ ಆಹಾರವನ್ನು ಆರ್ಡರ್ ಮಾಡುತ್ತಾರೆ ಎಂಬ ಅಂಕಿ-ಅಂಶವನ್ನು ಕಳೆದ 8 ವರ್ಷಗಳಿಂದ ಬಿಡುಗಡೆ ಮಾಡುತ್ತ ಬಂದಿದೆ.

ಅತೀ ಹೆಚ್ಚು ಆರ್ಡರ್ ಮಾಡಿದ ಖಾದ್ಯದ ಕಿರೀಟ ಹೊತ್ತ ಬಿರಿಯಾನಿ:

ಬಿರಿಯಾನಿ ಎಂದರೆ ಸಾಕು! ಯಾರ ಬಾಯಲ್ಲಿ ನೀರು ಬರಲ್ಲ ಹೇಳಿ. ಸ್ವಿಗ್ಗಿ ಆ್ಯಪ್ ಅಲ್ಲಿ ಸತತ 8 ವರ್ಷಗಳಿಂದಲೂ ಅತೀ ಹೆಚ್ಚು ಕ್ರೇಜ್ ಉಂಟುಮಾಡಿದ ಆಹಾರವೆಂದರೆ ಅದು ಬಿರಿಯಾನಿ. ಪ್ರತಿ ಸೆಕೆಂಡಿಗೆ ಸುಮಾರು 2.5 ಬಿರಿಯಾನಿಗಳನ್ನು ಆರ್ಡಾರ್ ಮಾಡಲಾಗುತ್ತಿದೆ ಎಂದು ಆಹಾರ ವಿತರಣಾ ವೇದಿಕೆ ತಿಳಿಸಿದೆ.

ಇನ್ನು ಚಂಡೀಗಢದ ಕುಟುಂಬವೊಂದು ಒಂದೇ ಬಾರಿಗೆ 70 ಪ್ಲೇಟ್ ಗಳ ಬಿರಿಯಾನಿಯನ್ನು ಆರ್ಡರ್ ಮಾಡಿದ್ದಾರೆ. ಜನವರಿ 1 ರಂದೇ ಸ್ವಿಗ್ಗಿಯಲ್ಲಿ 4 ಲಕ್ಷದ 30 ಸಾವಿರ ಬಿರಿಯಾನಿ ಆರ್ಡರ್ ಮಾಡಲಾಗಿದೆ. ಅಲ್ಲದೇ ಜ.1 ಮತ್ತು ನ.23ರ ನಡುವೆ ಸುಮಾರು 2.49 ಮಿಲಿಯನ್ ಗ್ರಾಹಕರು ಬಿರಿಯಾನಿ ಆರ್ಡರ್ ಮಾಡಿದ್ದಾರೆ.

ಡೆಲಿವರಿ ಅಪ್ಲಿಕೇಶನ್ ಅಲ್ಲಿ ಸುಮಾರು 20 ಲಕ್ಷ ಮಂದಿ ತಮ್ಮ ಮೊದಲ ಆರ್ಡರ್ ಅನ್ನು ಬಿರಿಯಾನಿಯನ್ನೆ ಆಯ್ಕೆ ಮಾಡಿಕೊಂಡಿರುವುದು ಸೋಜಿಗವೆನಿಸಿದೆ. ಈ ಫ್ಲಾಟ್ ಫಾರ್ಮ್ ನಲ್ಲಿ ಸುಮಾರು 40ಕ್ಕೂ ಹೆಚ್ಚು ಭಾರಿ ಬಿರಿಯಾನಿಯನ್ನು ಹುಡುಕಲಾಗಿದೆ ಎಂಬ ವರದಿ ಬಿಡುಗಡೆಯಾಗಿದೆ.

ಖಾದ್ಯಗಳಷ್ಟೇ ಅಲ್ಲ ಕೆಲ ಗ್ರಾಹಕರು ಹೊಸ ದಾಖಲೆ ನಿರ್ಮಿಸಿದ್ದಾರೆ!

1. ಮುಂಬೈನ ನಿವಾಸಿಯೊಬ್ಬರು 1 ವರ್ಷದಲ್ಲಿ 42.3 ಲಕ್ಷ ರೂ. ಮೌಲ್ಯದ ಫುಡ್ ಆರ್ಡರ್ ಮಾಡಿದ್ದಾರೆ.
2. ಝಾನ್ಸಿಯಾ ಎಂಬುವವರು ಒಂದೇ ದಿನ 269 ಪದಾರ್ಥಗಳನ್ನು ಆರ್ಡರ್ ಮಾಡಿದ್ದರು.
3. ಭುವನೇಶ್ವರ ನಗರದ ಒಬ್ಬ ವ್ಯಕ್ತಿ ಒಂದೇ ದಿನದಲ್ಲಿ 207 ಫಿಜ್ಜಾಗಳನ್ನು ಆರ್ಡರ್ ಮಾಡಿದ್ದಾನೆ.
4. ಚಂಡೀಗಢದ ಕುಟುಂಬವೊಂದು ಒಂದೇ ಬಾರಿಗೆ 70 ಪ್ಲೇಟ್ ಗಳ ಬಿರಿಯಾನಿಯನ್ನು ಆರ್ಡರ್ ಮಾಡಿದೆ.

ದುರ್ಗಾ ಪೂಜೆಯಲ್ಲಿ ರಸಗುಲ್ಲಾ ಬದಲಿಗೆ ಜಾಮೂನು ಹೆಚ್ಚು ಮಾರಾಟ:

2023ರ ದುರ್ಗಾ ಪೂಜೆಯಲ್ಲಿ ಬಂಗಾಳದ ಪ್ರಸಿದ್ಧ ಸಿಹಿಯಾದ ರಸಗುಲ್ಲಾವನ್ನು ಕಳೆದ ವರ್ಷ ಹೆಚ್ಚಾಗಿ ಆರ್ಡರ್ ಮಾಡಿದ್ದರು. ಆದರೆ ಈ ಭಾರಿ ರಸಗುಲ್ಲಾ ಬದಲಿಗೆ ಗುಲಾಬ್ ಜಾಮೂನ್ ಅತೀ ಹೆಚ್ಚು ಆರ್ಡರ್ ಮಾಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ದಿನ ಭರ್ಜರಿ ಕೇಕ್ ಗಳ ಆರ್ಡರ್:

ಬೆಂಗಳೂರು ಕರ್ನಾಟಕದ ರಾಜಧಾನಿ ಮಾತ್ರವಲ್ಲ, ದೇಶದ ಕೇಕ್ ವಿತರಣೆಯಲ್ಲೂ ರಾಜಧಾನಿ ಎಂದೇ ಖ್ಯಾತಿ ಪಡೆದಿದೆ. 2023 ರಲ್ಲಿ ಸುಮಾರು 80 ಲಕ್ಷ ಕೇಕ್ ಚಾಕಲೇಟ್ ಕೇಕ್ ಆರ್ಡರ್ ಮಾಡಲಾಗಿದೆ. ಇನ್ನೂ ತಾಯಂದಿರ ದಿನದಂದು ಅತೀ ಹೆಚ್ಚು ಚಾಕಲೇಟ್ ಕೇಕ್ ಮಾರಾಟವಾದರೆ, ಪ್ರೇಮಿಗಳ ದಿನದಂದು ದೇಶದಾದ್ಯಂತ ಪ್ರತಿ ನಿಮಿಷಕ್ಕೆ 271 ಕೇಕ್ ಆರ್ಡರ್ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.

You might also like
Leave A Reply

Your email address will not be published.