ದಿ ಕೇರಳ ಸ್ಟೋರಿಯನ್ನು ಮೀರಿಸುತ್ತೆ ಬಸ್ತರ್‌ ಸಿನೆಮಾ – ನಕ್ಸಲ್‌ ಪರವಾದಿಗಳಿಂದ ಟೀಕೆ

ಅಂದು ದಿ ಕೇರಳ ಸ್ಟೋರಿ ಎಷ್ಟರ ಮಟ್ಟಿಗೆ ವಿವಾದಕ್ಕೆ ಸಿಲುಕಿಕೊಂಡಿತ್ತು ಎಂಬುದನ್ನು ನೆನಪಿಸಿಕೊಂಡರೆ ಇಡೀ ಕಥೆಯೇ ಕಣ್ಣುಮುಂದೆ ಬರುತ್ತದೆ. ಹಾಗೆಯೇ ಇಂದು ಕೂಡ ಇದೇ ತರಹದ ಒಂದು ಸಿನಿಮಾ ರಿಲೀಸ್ ಆಗಿದ್ದು ಅದೇ ತರಹದ ಸಂಚಲನವೊಂದನ್ನು ದೇಶದ್ಯಂತ ಮೂಡಿಸಿದೆ. ಯಾವುದದು ಸಿನಿಮಾ? ಯಾರ ಕಾಂಬೀನೆಷನ್ ಅಲ್ಲಿ ಮೂಡಿಬಂದಿದೆ ಎಂಬುದಕ್ಕೆ ಈ ಸ್ಟೋರಿ ಓದಿ..

ದಿ ಕೇರಳ ಸ್ಟೋರಿ ಮೂಲಕ ಸಂಚಲನ ಸೃಷ್ಟಿ ಮಾಡಿದ್ದ ಸುದೀಪ್ತೋ ಸೇನ್ ಮತ್ತು ಅದಾ ಶರ್ಮಾ ಕಾಂಬಿನೇಷನ್ ಇದೀಗ ಬಸ್ತರ್ ಹೆಸರಿನ ಸಿನಿಮಾ ಮಾಡಿದ್ದು, ಈ ವಾರ ದೇಶದಾದ್ಯಂತ ಬಿಡುಗಡೆಯಾಗಿದೆ. ಈ ಸಿನಿಮಾ ಕೂಡ ದಿ ಕೇರಳ ಸ್ಟೋರಿಯಷ್ಟೇ ವಿವಾದಕ್ಕೆ ಸಿಲುಕಿಕೊಂಡಿದೆ.

Bastar movie surpasses The Kerala Story - Criticism from pro-Naxalists

ಬಸ್ತರ್ (Bastar) ಸಿನಿಮಾ:

ಬಸ್ತರ್ (Bastar) ನಕ್ಸಲೈಟ್ ಕುರಿತಾದ ಸಿನಿಮಾವಾಗಿದ್ದು, ಸುಳ್ಳಿನ ಹಿಂದಿರುವ ಸತ್ಯವನ್ನು ಈ ಸಿನಿಮಾ ಮೂಲಕ ಹೇಳುವುದಾಗಿ ಚಿತ್ರತಂಡ ತಿಳಿಸಿತ್ತು. ಭಾರತೀಯ ಸೈನಿಕರನ್ನು ನಕ್ಸಲ್ ರು ಹೇಗೆ ಹತ್ಯೆ ಮಾಡಿದರು ಎನ್ನುವುದನ್ನು ಸಿನಿಮಾದಲ್ಲಿ ಎಳೆ ಎಳೆಯಾಗಿ ಬಿಚ್ಚಿಡಲಾಗಿದೆ. ಇದೇ ಆಕ್ರೋಶಕ್ಕೆ ಕಾರಣವಾಗಿದೆ. ಅನಗತ್ಯ ವಿಷಯಗಳನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹಲವರು ಆಕ್ರೋಶ ಹೊರ ಹಾಕಿದ್ದಾರೆ. ಕೆಲವು ಕಡೆ ಸಿನಿಮಾ ಪ್ರದರ್ಶನವನ್ನೂ ನಿಲ್ಲಿಸಿದ್ದಾರೆ.

ಕಡಿಮೆ ಬಜೆಟ್ ನಲ್ಲಿ ತಯಾರಾದ ದಿ ಕೇರಳ ಸ್ಟೋರಿ ಸಿನಿಮಾ ಕಡಿಮೆ ಅವಧಿಯಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿತು. ವಿವಾದ, ಬೈಕಾಟ್, ಬ್ಯಾನ್ ನಡುವೆಯೂ ಹಲವು ರಾಜ್ಯಗಳಲ್ಲಿ ಇದು ತುಂಬಿದ ಪ್ರದರ್ಶನ ಕಂಡಿತು. ಕೆಲ ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಮೊತ್ತ ನಿರ್ಮಾಪಕರಿಗೆ ಹರಿದು ಬಂದಿತ್ತು. ಬಸ್ತರ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ.

You might also like
Leave A Reply

Your email address will not be published.