ಬಿಗ್ ಬಾಸ್ ಮುಗೀತು – ಈಗೇನ್ ಮಾಡ್ತಿದ್ದಾರೆ ನಿಮ್ ಹೀರೋಗಳು

ಬಿಗ್’ಬಾಸ್ ಆಟ ಮುಗಿದ ಮೇಲೆ ಅಲ್ಲಿಯ ಕಂಟೆಸ್ಟೆಂಟ್ ಗಳ ಪೈಕಿ ಬೆರಳಣಿಕೆಯಷ್ಟು ಜನರು ಜನಮಾನಸದಲ್ಲಿ ಮಿಂಚುತ್ತ ಹೋಗುತ್ತಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ವಿಲನ್ ಎಂದೇ ಖ್ಯಾತಿ ಪಡೆದ ವಿನಯ್ ಇದೀಗ ಹೀರೋ ಆಗಿ ಮಿಂಚುತ್ತಿದ್ದಾರೆ. ಕರುಣಾಭಾವದಿಂದ ಗೆದ್ದ ಪ್ರತಾಪ್ ಟ್ರೋಲ್ ಗಳಿಗೆ ಸುದ್ದಿಯಾಗಿದ್ದಾರೆ. ವರ್ತೂರು ಸಂತು ಮತ್ತು ತನಿಷಾ ಮದುವೆ ಕಥೆ ರಾಜ್ಯಾದ್ಯಂತ ಹಬ್ಬಿದೆ. ಇನ್ನೂ ಸಂಗೀತ ಬಿಗ್ ಬಾಸ್ ಟ್ರೋಫಿ ಮಿಸ್ ಮಾಡ್ಕೊಂಡ್ರೂ, ಜನತೆಯಿಂದ ಸಿಂಹಿಣಿ ಎಂಬ ಪ್ರಶಸ್ತಿಗೆ ಭಾಜನರಾದರು. ಅಂದಹಾಗೆ ಮನೆಯ ಸಂತು ಪಂತು ಎಂದೇ ಖ್ಯಾತರಾದವರು ಸಿನಿಮಾದ ಹೆಸರಲ್ಲಿ ಬಿಗ್ ಟ್ವಿಸ್ಟ್ ಕೊಡ್ತಿದ್ದಾರಂತೆ ಏನದು?

ಹೌದು! ಹಾಸ್ಯ ಕಲಾವಿದ ತುಕಾಲಿ ಸಂತು ಮತ್ತು ಹಳ್ಳಿಕಾರ್ ಖ್ಯಾತಿಯ ವರ್ತೂರು ಸಂತೋಷ್ ಇದೀಗ ಸಂತು-ಪಂತು ಎಂಬ ಹೆಸರಲ್ಲೇ ಸಿನಿಮಾವೊಂದು ಮೂಡಿ ಬರಲಿದೆ ಎನ್ನುವುದು ಸಧ್ಯ ಸ್ಯಾಂಡಲ್ ವುಡ್ ನಲ್ಲಿ ಓಡಾಡುತ್ತಿರುವ ಸುದ್ದಿ. ಈ ಕುರಿತು ಸ್ವತಃ ತುಕಾಲಿ ಸಂತು ಅವರೇ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದು, ಈಗಾಗಲೇ ಸ್ಕ್ರಿಪ್ಟ್ ರೆಡಿಯಿದೆ. ನಿರ್ಮಾಪಕರೂ ಕೂಡ ಇದ್ದಾರೆ. ಆದರೆ, ಈ ಸಿನಿಮಾ ಯಾವಾಗ ಆಗುತ್ತದೆಯೋ ಎಂಬುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Bigg Boss is over - what are your heroes doing now?

ಸದ್ಯ ತುಕಾಲಿ ಸಂತು ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದು, ವರ್ತೂರು ಸಂತೋಷ್ ಅವರು ಹಳ್ಳಿಕಾರ್ ಪಂದ್ಯವನ್ನು ಆಯೋಜಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಇಬ್ಬರೂ ಒಟ್ಟಾಗಿ ಬಂದು ಈ ಚಿತ್ರವನ್ನು ಮಾಡುತ್ತಾರಾ? ಅಥವಾ ಮಾತಿನಲ್ಲೇ ಸಿನಿಮಾ ಮುಗಿಸ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಯಾಕೆಂದರೆ, ಇತ್ತೀಚೆಗೆ ಯಾವುದಾದರೂ ವಿಚಾರ ಸಿಕ್ಕಾಪಟ್ಟೆ ಸದ್ದಾದಾಗ ಈ ರೀತಿಯ ಚಿತ್ರಗಳು ಬಾಯಿ ಮಾತಲ್ಲಿ ಥಟ್ ಎಂದು ಹುಟ್ಟಿಕೊಳ್ಳುತ್ತವೆ. ಅದೇ ಸುದ್ದಿ ತಣ್ಣಗಾದಾಗ ಚಿತ್ರಗಳೂ ಅಷ್ಟೇ ವೇಗದಲ್ಲಿ ಅಕಾಲಿಕ ಮರಣ ಹೊಂದುತ್ತವೆ. ಸಂತು-ಪಂತು ಸಿನಿಮಾ ಇವೆರೆಡರ ಪೈಕಿ ಯಾವ ಕ್ಯಾಟಗರಿಗೆ ಸೇರುತ್ತದೆ ಎಂಬುದನ್ನು ನೋಡಬೇಕಿದೆ.

You might also like
Leave A Reply

Your email address will not be published.