ಸಿನಿಪ್ರಿಯರಿಗೆ ಬಾಯಿ ಉರಿ ಮಾಡಿತಾ? ಕಣ್ಣೀರು ತರಿಸಿತಾ? ಈ ಮೆಣಸು – ಮಹೇಶ್ ಬಾಬು ಗುಂಟೂರು ಖಾರಂ

ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಕಾಂಬಿನೇಷನ್ ಸಿನಿಮಾ ‘ಗುಂಟೂರು ಖಾರಂ’ ಸಿನಿಮಾ (Guntur Kaaram) ಇಂದು (ಜನವರಿ 12) ರಿಲೀಸ್ ಆಗಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರಿಗೆ ಸಿನಿಮಾ ಬೋರ್ ಎನಿಸಿದರೆ, ಮತ್ತೆ ಕೆಲವರಿಗೆ ಸೂಪರ್ ಆಗಿ ಅನಿಸಿದೆ. ಹಾಗಾದ್ರೆ ನಟ ಮಹೇಶ್ ಬಾಬು ಈ ಸಿನಿಮಾದಿಂದ ಸೋಲು ಕಾಣ್ತಾರ? ಎಂಬುದನ್ನು ಕಾದು ನೋಡಬೇಕಿದೆ.

Mahesh Babu and director Trivikram Srinivas combination movie 'Guntur Kharam' movie.

ಇತ್ತೀಚೆಗಷ್ಟೆ ನಟ ಮಹೇಶ್ ಬಾಬು ತಮ್ಮ ನಟನೆಯ ಗುಂಟೂರು ಖಾರಂ ಸಿನಿಮಾ ಬಿಡುಗಡೆಯ ಕುರಿತು ಮಾಹಿತಿ ಹಂಚಿಕೊಂಡಿದ್ದು, ಅವರ ಅಭಿಮಾನಿಗಳು ಕೂಡ ಅಷ್ಟೇ ಕಾತುರದಿಂದ ನಿರೀಕ್ಷಿಸುತ್ತಿದ್ದರು. ಇಂದು ಸಿನಿಮಾ ಬಿಡುಗಡೆ ಆಗಿದ್ದು ವೀಕ್ಷಕರಿಗೆ ಭಾರಿ ನಿರಾಸೆ ಮೂಡಿದೆ.

ಈ ಸಿನಿಮಾ ರಿಲೀಸ್ ಆಗುವ ತನಕವು ಕೆಲಸಗಳು ನಡೆಯುತ್ತಲೇ ಇದ್ದವು. ಅಲ್ಲದೇ ಸೆಟ್ಟೇರಿ ಬಹಳ ದಿನಗಳು ಕಳೆದಿತ್ತು. ಹೀಗಿದ್ದರು ಸಿನಿಮಾ ವೀಕ್ಷಿಸಿದ ಹಲವರಿಗೆ ಈ ಚಿತ್ರ ಇಷ್ಟ ಆಗಿಲ್ಲ. ಸಿನಿಮಾ ನೋಡಿ ನಿದ್ದೆ ಬಂದಿದೆ ಎಂದು ಹಲವರು ಓಪನ್ ಆಗಿ ಟ್ವೀಟ್ ಮಾಡುತ್ತಿದ್ದಾರೆ. ಅಂದುಕೊಂಡ ರೀತಿಯಲ್ಲಿ ಜನರು ಪ್ರತಿಕ್ರಿಯೆ ನೀಡುತ್ತಿಲ್ಲ. ನೆಗೆಟಿವ್ ವಿಮರ್ಶೆ ಹೆಚ್ಚಾಗೆ ಬರುತ್ತಲಿದೆ.

       ಟ್ವಿಟರ್ ಅಲ್ಲಿ ಬಂದ ಕಮೆಂಟ್ ಅಲ್ಲಿ ಏನಿದೆ?

  •  ‘ಮಹೇಶ್ ಬಾಬುಗಾಗಿ ಮಾತ್ರ ನೋಡಬೇಕಾದ ಸಿನಿಮಾ ಗುಂಟೂರು ಖಾರಂ. ಅವರ ಕರಿಯರ್ನ ಬೆಸ್ಟ್ ಪರ್ಫಾರ್ಮೆನ್ಸ್ ಇದು. ತ್ರಿವಿಕ್ರಂ ಮ್ಯಾಜಿಕ್ ಮಿಸ್ ಆಗಿದೆ. ತಮನ್ ಅವರ ಬಿಜಿಎಂ ಮ್ಯಾಜಿಕ್ ಮಾಡಿಲ್ಲ’ ಎಂದು                         ಅಭಿಮಾನಿ ಓರ್ವ ಬರೆದುಕೊಂಡಿದ್ದಾನೆ.

  •  ಇಡೀ ಗುಂಪನ್ನು ಸೈಲೆಂಟ್ ಮಾಡುವ ತಾಕತ್ತು ಚಿತ್ರಕ್ಕಿದೆ’ ಎಂದು ಕೆಲವರು ಹೇಳಿದ್ದಾರೆ.
  •  ಇನ್ನೂ ಕೆಲವರು ‘ಅದೇ ಹಳೆಯ ಕಥೆ’ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

 

guntur karam

ಮಹೇಶ್ ಬಾಬು ಅವರಿಗೆ ಜೊತೆಯಾಗಿ ಕನ್ನಡದ ಶ್ರೀಲೀಲಾ ನಟಿಸಿದ್ದಾರೆ. ಮೀನಾಕ್ಷಿ ಚೌಧರಿ, ರಮ್ಯಾ ಕೃಷ್ಣ, ಪ್ರಕಾಶ್ ರಾಜ್ ಮೊದಲಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ಅದು ಹುಸಿ ಆಗಿದೆ. ಮೊದಲ ದಿನ ಈ ಚಿತ್ರದ ಗಳಿಕೆ ಎಷ್ಟಾಗಲಿದೆ ಎನ್ನುವ ಕುತೂಹಲವೂ ಸಾಕಷ್ಟು ಪ್ರಶ್ನೆಯಾಗಿದೆ.

You might also like
Leave A Reply

Your email address will not be published.