ಕಾಣೆಯಾದ ಬೆಕ್ಕನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ

ಸಾಮಾನ್ಯವಾಗಿ ನಮ್ಮ ಪರಿಚಿತರಲ್ಲಿ ಯಾರಾದ್ರು ಕಳೆದುಹೋದಲ್ಲಿ ಮಿಸ್ಸಿಂಗ್ ಅಂತ ಪೋಸ್ಟರ್ ಹಾಕ್ತೇವೆ. ತೀರ ಅಂದ್ರೆ ಸಾಕುಪ್ರಾಣಿಗಳು ಕಳೆದುಹೋದ್ರು ಪೋಸ್ಟರ್ ಹಾಕಿರೋದ್ದನ್ನ ನೋಡಿದ್ದೇವೆ. ಆದರೆ ಇಲ್ಲಿ ತೀರ ವಿಭಿನ್ನವಾಗಿ ಕಳೆದು ಹೋದ ಬೆಕ್ಕಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಪೋಸ್ಟರ್ ಹಾಕಿದ್ದು ಸಖತ್ ವೈರಲ್ ಆಗುತ್ತಿದೆ. ಏನಪ್ಪ ಅದು ಸುದ್ದಿ ಅಂತೀರ?

ಹೌದು! ನೋಯ್ಡಾ ಮೂಲದ ವ್ಯಕ್ತಿಯೊಬ್ಬರು ಕಳೆದು ಹೋದ ಪ್ರೀತಿಯ ಬೆಕ್ಕಿನ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ. ಬಹುಮಾನ ಕೊಡುವುದಾಗಿ ಅಂಟಿಸಿರುವ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಪೋಸ್ಟರ್ ಅಲ್ಲಿ ಏನೆಂದು ಬರೆಯಲಾಗಿದೆ?

• ಪೋಸ್ಟರ್ ಅಲ್ಲಿ ಕಳೆದು ಹೋದ ಬೆಕ್ಕಿನ ಫೋಟೋ ಹಾಕಲಾಗಿದೆ.
• ಬೆಕ್ಕಿನ ಹೆಸರು – ಚೀಕು (ಗಂಡು),
• ವಯಸ್ಸು – 1.5,
• ಬಣ್ಣ: ಶುಂಠಿಯ ಬಣ್ಣ
• ಕುತ್ತಿಗೆಯ ಭಾಗದಲ್ಲಿ ಬಿಳಿ ಕೂದಲು ಇದೆ

ಈ ಬೆಕ್ಕಿನ ಕುರಿತು ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಪೋಸ್ಟರ್ ನಲ್ಲಿ ತಿಳಿಸಲಾಗಿದೆ.

ಈ ಕುರಿತು ಬೆಕ್ಕಿನ ಮಾಲೀಕ ಅಜಯ್ ಕುಮಾರ್ ಅವರು ತಮ್ಮ ಬೆಕ್ಕು ಡಿಸೆಂಬರ್ 24ರಿಂದ ಕಾಣೆಯಾಗಿದ್ದು, ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂ. ಬಹುಮಾನ ನೀಡುವುದಾಗಿ ಎಕ್ಸ್ ನಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

You might also like
Leave A Reply

Your email address will not be published.