Actor Darshan : ನನ್ನ ಏಳ್ಗೆಯನ್ನು ಸಹಿಸದವರಿಗೆ ಕಾಲವೇ ಉತ್ತರಿಸುತ್ತೆ – ದರ್ಶನ್ ಎಚ್ಚರಿಸಿದ್ದು ಯಾರಿಗೆ?

ದುಬೈ ಪ್ರವಾಸದಲ್ಲಿರುವ ನಟ ದರ್ಶನ್ (Actor Darshan) ಕಾಟೇರ ಚಿತ್ರದ (Kaatera Film) ಯಶಸ್ಸಿಗೆ ಕಾರಣೀಭೂತರಾದ ಅಭಿಮಾನಿಗಳು ಹಾಗೂ ದೇಶ, ವಿದೇಶದ ಕನ್ನಡಿಗರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಹಾಗೆಯೇ, ತಮ್ಮ ವಿರೋಧಿಗಳಿಗೆ ಟ್ವೀಟ್ ಮೂಲಕ ಸಮಾಧಾನ ಚಿತ್ತರಾಗಿಯೇ ಆಕ್ರೋಶ ಹೊರಹಾಕಿರುವ ಅವರು, ನನ್ನ ಏಳ್ಗೆಯನ್ನು ಸಹಿಸದವರಿಗೆ ಕಾಲವೇ ಉತ್ತರ ನೀಡುತ್ತದೆ ಎಂದು ಎಚ್ಚರಿಸಿದ್ದಾರೆ.

ಡಿಸೆಂಬರ್ 29ರಂದು ಅದ್ದೂರಿಯಾಗಿ ತೆರೆಗೆ ಬಂದಿರುವ ದರ್ಶನ್ (Actor Darshan) ನಟನೆಯ ಕಾಟೇರ ಚಿತ್ರ (Kaatera Film) ಅದ್ಭುತ ಪ್ರದರ್ಶನ ಕಾಣುತ್ತಿದೆ. ಕಳೆದ 2 ವಾರಗಳಿಂದ ಚಿತ್ರ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದ್ದು, ಮುಂದಿನ ಕೆಲ ದಿನಗಳವರೆಗೂ ಯಶಸ್ವಿ ಪ್ರದರ್ಶನ ಕಾಣುವ ಭರವಸೆಯನ್ನು ಚಿತ್ರ ಸೃಷ್ಠಿಸಿದೆ.

ರಾಜ್ಯ ಸೇರಿದಂತೆ ವಿದೇಶದಲ್ಲಿಯೂ ಚಿತ್ರ ಅದ್ಭುತ ಪ್ರದರ್ಶನ ಕಾಣುತ್ತಿದೆ. ಈ ನಿಟ್ಟಿನಲ್ಲಿ ನಟ ದರ್ಶನ್ ದುಬೈಗೆ ಪ್ರವಾಸ ಮಾಡಿದ್ದು, ಚಿತ್ರದ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಈ ಮಧ್ಯೆ ನಟ ದರ್ಶನ್ ಟ್ವೀಟ್ʼನಲ್ಲಿ ತಮ್ಮ ವಿರೋಧಿಗಳಿಗೆ ನೀಡಿರುವ ಸೂಚನೆ/ಎಚ್ಚರಿಕೆ ಮತ್ತೊಮ್ಮೆ ವಿವಾದಕ್ಕೆ ಕಾರಣವಾಗಬಹುದು ಎಂದು ಅಂದಾಜಿಸಲಾಗುತ್ತಿದೆ. ತಮ್ಮ ಎಕ್ಸ್ ಖಾತೆಯ ಮೂಲಕ ಟ್ವೀಟ್ ಮಾಡಿರುವ ಅವರು, “ಕಾಟೇರನ ಅಭೂತಪೂರ್ವ ಗೆಲುವಿಗೆ ಕಾರಣಕರ್ತರಾದ ಪ್ರೀತಿಯ ಸೆಲೆಬ್ರಿಟಿಸ್ ಹಾಗೂ ನಾಡಿನ ಜನತೆಗೆ ಹೃದಯಪೂರ್ವಕ ವಂದನೆಗಳು. ದುಬೈನಲ್ಲಿ ನೀವು ನೀಡಿದ ಪ್ರೀತಿಗೆ ಹಾಗೂ ಇತರ ದೇಶಗಳಲ್ಲಿಯೂ ಸಹ ಜನರು ನೀಡುತ್ತಿರುವ ಅಭಿಮಾನಕ್ಕೆ ಆಭಾರಿಯಾಗಿದ್ದೇವೆ. ಈ ಏಳಿಗೆಯನ್ನು ಸಹಿಸಲಾರದ ನನ್ನ ಪ್ರೀತಿಯ ಆತ್ಮೀಯರಿಗೆ ಹೇಳೋದು ಒಂದೇ ಮಾತು: ನೀವು ಏನೇ ಮಾಡಿದರೂ ನಾನು ಕೋಪ ಮಾಡ್ಕೊಳಲ್ಲ, ಬೇಜಾರ್ ಮಾಡ್ಕೊಳಲ್ಲ, ನೊಂದುಕೊಳ್ಳಲ್ಲ. ಕಾಲಾಯ ತಸ್ಮಯ್ ನಮಃ.” ಎಂದು ಎಂದಿನಂತೆಯೇ ತಮ್ಮದೇ ಸ್ಟೈಲ್‌ʼನಲ್ಲಿ ಬರೆದುಕೊಂಡಿದ್ದಾರೆ.

ತಡರಾತ್ರಿಯವರೆಗೂ ಸಕ್ಸಸ್‌ ಪಾರ್ಟಿ – ದರ್ಶನ್‌ʼಗೆ ಪೊಲೀಸ್‌ ನೋಟಿಸ್ :

ಕಾಟೇರ ಚಿತ್ರ (Kaatera Film) ಅಭೂತಪೂರ್ವ ಯಶಸ್ಸು‌ ಕಂಡ ಬೆನ್ನಲ್ಲೇ, ಚಿತ್ರತಂಡ ಸಕ್ಸಸ್‌ ಪಾರ್ಟಿಯನ್ನು ರಾಜಾಜಿನಗರದ ಜೆಟ್‌ʼಲ್ಯಾಗ್‌ ರೆಸ್ಟೋರೆಂಟ್‌ʼನಲ್ಲಿ ಆಯೋಜನೆ ಮಾಡಿತ್ತು. ಆದರೆ, ಈ ಪಾರ್ಟಿ ನಸುಕಿನ ಮುಂಜಾನೆಯವರೆಗೂ ನಡೆದಿದ್ದರಿಂದ ವಿವಾದ ಸ್ವರೂಪ ಪಡೆದುಕೊಂಡಿತ್ತು. ಜೆಟ್ಲಾಗ್‌ ಪಬ್‌ ಮಾಲೀಕರ ವಿರುದ್ಧ ಸುಬ್ರಮಣ್ಯನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ಆಧಾರದ ಮೇಲೆ ತಡರಾತ್ರಿಯವರೆಗೂ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟ ದರ್ಶನ್‌ (Actor Darshan), ನಟ ಧನಂಜಯ್‌, ನಿರ್ಮಾಪಕ ರಾಕ್‌ʼಲೈನ್‌ ವೆಂಕಟೇಶ್.‌ ನಿರ್ದೇಶಕ ತರುಣ್‌ ಸುದೀರ್‌, ನಟ ಚಿಕ್ಕಣ್ಣ, ನಟ ನೀನಾಸಂ ಸತೀಶ್‌, ಸಂಗೀತ ನಿರ್ದೇಶಕ ಹರಿಕೃಷ್ಣ ಸೇರಿದಂತೆ ಎಂಟು ಜನರಿಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ನಟ ದರ್ಶನ್‌ ಇಂದು ಜ.9 ಮಂಗಳವಾರದಂದು ಪೊಲೀಸ್‌ ಠಾಣೆಗೆ ಬಂದು ಉತ್ತರ ನೀಡಬೇಕಿತ್ತು. ಆದರೆ, ದುಬೈ ಪ್ರವಾಸದಲ್ಲಿರುವ ಕಾರಣಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಇದೀಗ, ಟ್ವೀಟ್‌ ಮಾಡಿರುವ ಅವರು ಕಾಲಾಯ ತಸ್ಮೈ ನಮಃ ಎಂದಿರುವುದರ ಹಿಂದೆ ಇದೇ ತಡರಾತ್ರಿ ಪಾರ್ಟಿ ಪ್ರಕರಣವೇ ಇರಬಹುದು ಎಂದು ಅಂದಾಜಿಸಲಾಗಿದೆ.

ಫ್ಯಾನ್ಸ್‌ ವಾರ್‌ʼಗಳು ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯವಾದಂತಾಗಿವೆ. ಈ ಟ್ವೀಟ್‌ ಮೂಲಕ ತಮ್ಮ ವಿರೋಧಿ ಫ್ಯಾನ್ಸ್‌ʼಗಳಿಗೆ ನಟ ದರ್ಶನ್‌ (Actor Darshan) ಎಚ್ಚರಿಸಿದ್ರಾ? ಎನ್ನುವ ಪ್ರಶ್ನೆಯೂ ಮೂಡಿದೆ.

You might also like
Leave A Reply

Your email address will not be published.