Kaatera Film : ಲೇಟ್‌ ನೈಟ್‌ ಪಾರ್ಟಿ – ನಟ ದರ್ಶನ್‌, ಡಾಲಿ ಧನಂಜಯ್‌ ಸೇರಿದಂತೆ 8 ಜನರಿಗೆ ಸಂಕಷ್ಟ

ನಟ ದರ್ಶನ್‌ (Actor Darshan) ನಟನೆಯ ಕಾಟೇರ (Kaatera Film) ಚಿತ್ರ ದೊಡ್ಡ ಪ್ರಮಾಣದ ಯಶಸ್ಸು ಕಂಡಿದೆ. ಜಾತೀಯತೆ, ರೈತ ಹಾಗೂ ಉಳುವವನೇ ಭೂ ಒಡೆಯ ಯೋಜನೆಗೆ ಸಂಬಂಧಿಸಿದಂತೆ ತ್ರಿಕೋನ ಕಥೆ ಪ್ರೇಕ್ಷಕರ ಮನೆ ಸೆಳೆಯುತ್ತಿದೆ. ಈ ನಡುವೆ, ಚಿತ್ರದ ಯಶಸ್ಸಿನ ಬಗ್ಗೆ ಚಿತ್ರತಂಡ ಸಕ್ಸಸ್‌ ಪ್ರೆಸ್‌ ಮೀಟ್‌ ಮಾಡಿತ್ತು. ಈ ಪ್ರೆಸ್‌ ಮೀಟ್‌ ನಂತರ ಬೆಳಿಗ್ಗೆಯವರೆಗೂ ಸಕ್ಸಸ್‌ ಪಾರ್ಟ್‌ ಮಾಡಿದ್ದ ಚಿತ್ರತಂಡ ಹಾಗೂ ಇತರೆ ಪ್ರಮುಖ ನಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜನವರಿ 03ರಂದು ರಾಜಾಜಿನಗರದ ಬೆಂಗಳೂರಿನ ಒರಾಯನ್‌ ಮಾಲ್ ಬಳಿ ಇರುವ ಜೆಟ್‌ ಲ್ಯಾಗ್‌ ರೆಸ್ಟೋಬಾರ್‌ʼನಲ್ಲಿ ನಟ ದರ್ಶನ್ (Actor Darshan) ಕಾಟೇರ (Kaatera Film) ಚಿತ್ರದ ಸಕ್ಸಸ್‌ ಪಾರ್ಟಿಯನ್ನು ಭರ್ಜರಿಯಾಗಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಭಾಗವಹಿಸಿದ್ದ ಹಲವು ನಟ-ನಟಿಯರು ನಿಯಮ ಉಲ್ಲಂಘಿಸಿ ಬೆಳಗ್ಗಿನವರೆಗೂ ಪಾರ್ಟಿ ಮಾಡಿದ್ದರು. ಈ ಬಗ್ಗೆ ಜೆಟ್‌ ಲ್ಯಾಗ್‌ ರೆಸ್ಟೋಬಾರ್‌ ಮಾಲೀಕರ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ಪಾರ್ಟಿಯಲ್ಲಿ ಭಾಗಿಯಾಗಿದ್ದ ಸೆಲೆಬ್ರಿಟಿಗಳಿಗೆ ನೋಟಿಸ್‌ ಜಾರಿ ಮಾಡಿದ್ದಾರೆ.

ಸುಬ್ರಹ್ಮಣ್ಯನಗರ ಪೊಲೀಸ್‌ ಠಾಣೆಯ ಇನ್ಸ್ಪೆಕ್ಟರ್ ಸುರೇಶ್ ಅವರಿಂದ ನಟ ದರ್ಶನ್‌ (Actor Darshan), ನಟ ಅಭಿಷೇಕ್‌ ಅಂಬರೀಶ್‌ (Actor Abhishek Ambareesh) ಹಾಗೂ ನಿರ್ಮಾಪಕ ರಾಕ್‌ʼಲೈನ್‌ ವೆಂಕಟೇಶ್‌ (RockLine Venkatesh) ಅವರಿಗೆ ನೋಟಿಸ್ ಜಾರಿ ಆಗಿದೆ. ಹಾಗೆಯೇ, ಈ ತಡರಾತ್ರಿ ಪಾರ್ಟಿಯಲ್ಲಿ ಇನ್ನು ಯಾವ್ಯಾವ ನಟ-ನಟಿಯರು ಪಾಲ್ಗೊಂಡಿದ್ದರು ಎಂಬ ಬಗ್ಗೆಯೂ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

ನಟರಾದ ಡಾಲಿ ಧನಂಜಯ್ (Actor Dali Dhananjay), ಚಿಕ್ಕಣ್ಣ, ನಿನಾಸಂ ಸತೀಶ್ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರಿಗೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಪಾರ್ಟಿಯಲ್ಲಿ ಭಾಗಿಯಾಗಿದ್ದ ಎಲ್ಲಾ ನಟರಿಗೂ ಪೊಲೀಸರು ನೋಟಿಸ್‌ ಜಾರಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಜೆಟ್‌ ಲ್ಯಾಗ್ ರೆಸ್ಟೋಬಾರ್ ಮಾಲೀಕರಾದ ಶಶಿರೇಖಾ ಮತ್ತು ಮ್ಯಾನೇಜರ್‌ ಪ್ರಶಾಂತ್ ವಿರುದ್ದ ಎಫ್ಐಆರ್ ದಾಖಲಾಗಿದೆ.

ನಿಯಮ ಏನು?

ಅಬಕಾರಿ ಕಾಯಿದೆ ಷರತ್ತುಗಳ ಪ್ರಕಾರ ಬೆಳಗ್ಗೆ 10 ಗಂಟೆಯಿಂದ ರಾತ್ರಿ 1 ಗಂಟೆಯವರೆಗೆ ಮಾತ್ರ ರೆಸ್ಟೋಬಾರ್ ತೆರೆಯಲು ಅವಕಾಶವಿದೆ. 1 ಗಂಟೆಯ ನಂತರ ಯಾವುದೇ ಕಾರಣಕ್ಕೂ ಬಾಗಿಲು ತೆರೆಯಲು ಅವಕಾಶವಿರುವುದಿಲ್ಲ.

ಪೊಲೀಸರು ದಾಖಲಿಸಿರುವ ಎಫ್‌ʼಐʼಆರ್‌ ಪ್ರತಿಯಲ್ಲಿ ಇರುವುದೇನು?

ರೆಸ್ಟೋರೆಂಟ್‌ʼನ ಕ್ಲೋಸಿಂಗ್‌ ಸಮಯ ಮುಗಿದರೂ, ಬೆಳಿಗ್ಗ 3.30ರ ವರೆಗೆ ಪಾರ್ಟಿ ಮಾಡಲಾಗಿದೆ. ರೆಸ್ಟೋಬಾರ್ ಬೆಳಗ್ಗಿನ ಜಾವ 3 ಗಂಟೆಯಾದ್ರೂ ತೆಗೆದೇ ಇರುವ ಬಗ್ಗೆ ಸ್ಥಳೀಯರು, ಸುಬ್ರಹ್ಮಣ್ಯ ನಗರ ಠಾಣೆಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಜಟ್‌ ಲ್ಯಾಗ್ ರೆಸ್ಟೋಬಾರ್ ಮೇಲೆ ದಾಳಿ‌ ನಡೆಸಿದ್ದ ಪೊಲೀಸರು ಕೂಡಲೇ ರೆಸ್ಟೋರೆಂಟ್ ಕ್ಲೋಸ್ ಮಾಡಿಸಿ 3.30ರ ಸುಮಾರಿಗೆ ಜೆಟ್ಲಾಗ್ ನಲ್ಲಿ ಪಾರ್ಟಿ ಮಾಡ್ತಿದ್ದ ಸೆಲೆಬ್ರಿಟಿಗಳನ್ನು ಮನೆಗೆ ಕಳುಹಿಸಿದ್ದರು.

ಕಾಟೇರ ಚಿತ್ರ (Kaatera Film) ರಾಜ್ಯ ಸೇರಿದಂತೆ ವಿದೇಶಲ್ಲಿಯೂ ಕಮಾಲ್‌ ಮಾಡುತ್ತಿದೆ. ಜ.6 ಶನಿವಾರರಂದು ರಾಜ್ಯದಲ್ಲಿ ಬುಕ್‌ ಮೈ ಶೋ ಮೂಲಕ ಈ ಚಿತ್ರ ನೋಡಲು ಸರಿಸುಮಾರು 65 ಸಾವಿರ ಜನ ಟಿಕೆಟ್‌ ಬುಕ್‌ ಮಾಡಿಕೊಂಡಿದ್ದಾರೆ. ಜ.7 ಭಾನುವಾರದಂದು 75 ಸಾವಿರಕ್ಕೂ ಅಧಿಕ ಜನ ಟಿಕೆಟ್‌ ಬುಕ್‌ ಮಾಡಿಕೊಂಡಿದ್ದಾರೆ. ನಟ ದರ್ಶನ್ (Actor Darshan) ಅವರ ಕಾಟೇರ ಚಿತ್ರ 10 ದಿನಗಳ ಕಲೆಕ್ಷನ್‌ ಬರೋಬ್ಬರಿ 55.68 ಕೋಟಿ ರೂ.ಗಳಷ್ಟಾಗಿದೆ ಎಂದು ವರದಿಯಾಗಿದೆ.

You might also like
Leave A Reply

Your email address will not be published.