ರಾಜ್ಯದಲ್ಲಿ ‘ಹಮಾರೇ ಬಾರಹ’ ಚಿತ್ರ ಬ್ಯಾನ್ – ಪಿಡುಗುಗಳನ್ನು ಟೀಕಿಸುವ ಚಿತ್ರವನ್ನು ಸಿದ್ದು ಸರ್ಕಾರ ರಾಜ್ಯದಲ್ಲಿ ನಿಷೇಧಿಸಿದ್ದೇಕೆ?

ಈಗಾಗಲೇ ದೇಶದಲ್ಲಿ ಬಹಳಷ್ಟು ಚರ್ಚೆಯಲ್ಲಿರುವ ವಿಚಾರ ಜನಸಂಖ್ಯಾ ಸ್ಫೋಟ. ಬಹುಸಂಖ್ಯಾತರಾಗಿದ್ದ ಹಿಂದೂಗಳ ಜನಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಿದ್ದರೆ, ಅಲ್ಪಸಂಖ್ಯಾತರಾಗಿದ್ದ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯ, ಬಹುತೇಕ 43% ನಷ್ಟು ತಮ್ಮ ಜನಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿದ್ದು ತಿಳಿದೇ ಇದೆ.

ಈ ಹಿಂದೆ, ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮಾರಣಹೋಮ ನಡೆಸಿದ್ದ ಕಥೆಯನ್ನಾಧರಿಸಿದ ದಿ ಕಾಶ್ಮೀರ್ ಫೈಲ್ಸ್ ಚಿತ್ರ, ಕಾಶ್ಮೀರದಲ್ಲಿ ನಡೆದ ಹಿಂಸಾಚಾರವನ್ನು ಸಂಪೂರ್ಣವಾಗಿ ಬಿಚ್ಚಿಟ್ಟಿತ್ತು.‌ ಅದಲ್ಲದೇ, ಕೇರಳದಲ್ಲಿ ಯಥೇಚ್ಛವಾಗಿ ನಡೆಯುತ್ತಿದ್ದ/ನಡೆಯುತ್ತಿರುವ ಲವ್ ಜಿಹಾದ್ ಕರಾಳ ಮುಖವನ್ನು ಬಿಚ್ಚಿಟ್ಟ ದಿ ಕೇರಳ ಸ್ಟೋರಿ – ಈ ಎರಡೂ ಚಿತ್ರಗಳನ್ನು, ಸತ್ಯಾಂಶಗಳನ್ನೊಳಗೊಂಡಿದ್ದರೂ ಕೂಡ ವ್ಯಾಪಕವಾಗಿ ಟೀಕಿಸಿದ ಪ್ರತಿಪಕ್ಷಗಳು, ಅಲ್ಪಸಂಖ್ಯಾತ ಮತಗಳ ಓಲೈಕೆಗೆ ತೊಡಗಿದ್ದವು‌. ಅಷ್ಟೇ ಅಲ್ಲದೇ, ಈ ಎರಡೂ ಚಿತ್ರಗಳಲ್ಲಿರುವುದು ಬರೀ ಸುಳ್ಳು ಎನ್ನುವ ಹಾಗೆ ಬಿಂಬಿಸಿ, ಸತ್ಯವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಿದ್ದವು. ಇದೀಗ ಅಂತಹುದೇ ಮತ್ತೊಂದು ಪ್ರಯತ್ನ ನಡೆದಿದ್ದು, ಮುಸ್ಲಿಂ ಧರ್ಮದಲ್ಲಿರುವ ಕೆಲವು ಪಿಡುಗುಗಳನ್ನು ಬಿಚ್ಚಿಡುವ ‘ಹಮಾರೇ ಬಾರಹ’ ಚಿತ್ರವನ್ನು ಕರ್ನಾಟಕದಲ್ಲಿ ಸಿದ್ದು ಸರ್ಕಾರ ನಿಷೇಧಿಸಿದೆ. ಅಷ್ಟಕ್ಕೂ ಈ ನಿಷೇಧದ ಹಿಂದಿನ ಅಸಲಿಯತ್ತು ಇಲ್ಲಿದೆ.

ದೇಶದಲ್ಲಿ ಜನಸಂಖ್ಯಾ ಸ್ಫೋಟದ ಕರಾಳ ಸತ್ಯವನ್ನು ಬಿಚ್ಚಿಡುವ ಹಮಾರೇ ಬಾರಹ ಎನ್ನುವ ಈ ಹಿಂದಿ ಚಿತ್ರವನ್ನು ರಿಲೀಸ್ ಮಾಡದಂತೆ ಈಗಾಗಲೇ ಬಾಂಬೆ ಹೈಕೋರ್ಟ್ ತಡೆ‌ ನೀಡಿದೆ. ಅದಲ್ಲದೇ, ಈ ಕುರಿತು ಚಿತ್ರದಲ್ಲಿರುವ ಅಂಶಗಳ ಬಗ್ಗೆ ವಿಶ್ಲೇಷಣೆ ನಡೆಸಲು, ಮೂರು ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸಲು ಆದೇಶಿಸಿದ್ದು, ಸಮಿತಿಯಲ್ಲಿ ಕನಿಷ್ಠ ಒಬ್ಬ ಮುಸ್ಲಿಂ ಸದಸ್ಯರನ್ನು ನೇಮಿಸಿಕೊಳ್ಳುವಂತೆ ಸೂಚಿಸಿದೆ. ಹಾಗೆಯೇ, ಕೇವಲ ಚಿತ್ರದಲ್ಲಿನ ಪ್ರಚೋದನಕಾರಿ ಅಂಶಗಳನ್ನಷ್ಟೇ ವಿಶ್ಲೇಷಣೆಗೆ ಒಳಪಡಿಸಲು ಕೂಡ ಆದೇಶಿಸಿದೆ. ಇದನ್ನೇ ಆಧರಿಸಿ, ಕರ್ನಾಟಕದಲ್ಲಿ ಕೂಡ‌ ಈ ಚಿತ್ರ ಕೋಮುಸೌಹಾರ್ದ ಕದಡುತ್ತದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.

ಈ ಹಿಂದೆ, ಇದೇ ಚಿತ್ರವು ‘ಹಮ್ ದೋ ಹಮಾರೇ ಬಾರಹ (ನಾವಿಬ್ಬರು, ನಮಗೆ ಹನ್ನೆರಡು)’ ಎನ್ನುವ ಟೈಟಲ್’ನೊಂದಿಗೆ ಬಿಡುಗಡೆಗೆ ಸಿದ್ಧವಾಗಿದ್ದ ಈ ಚಿತ್ರದ ಟೈಟಲ್ ಅನ್ನು ಬದಲಾಯಿಸುವಂತೆ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್‌ ಸರ್ಟಿಫಿಕೇಷನ್ (ಸಿ.ಬಿ.ಎಫ್.ಸಿ) ನಿರ್ದೇಶಿಸಿತ್ತು. ಅದರಂತೆ ಚಿತ್ರದ ಟೈಟಲ್ ಅನ್ನು ‘ಹಮಾರೇ ಬಾರಹ’ ಎಂದು ಬದಲಾಯಿಸಿ ಹೊಸ ಟೈಟಲ್’ನೊಂದಿಗೆ ಬಿಡುಗಡೆಗೆ ಮತ್ತೆ ಸಜ್ಜಾಗಿತ್ತು. ಜೂನ್ 07 ರಂದು ದೇಶದಾದ್ಯಂತ ರಿಲೀಸ್ ಆಗಲು ಸಿದ್ಧವಾಗಿರುವ ಈ ಚಿತ್ರಕ್ಕೆ ಕರ್ನಾಟಕ ಸರ್ಕಾರ ರಾಜ್ಯದಲ್ಲಿ ಬ್ರೇಕ್ ಹಾಕಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ನಟ ಮನೋಜ್ ಜೋಷಿ, ಈ ಚಿತ್ರವು ಯಾವುದೇ ಸಮುದಾಯವನ್ನು ಟಾರ್ಗೆಟ್ ಮಾಡುವುದಕ್ಕಾಗಿ ನಿರ್ಮಿಸಿರುವುದಲ್ಲ.‌ ನಾನೊಬ್ಬ ನಟ. ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ.‌ ಆದರೆ ಕೆಲವೊಬ್ಬರು ಇದನ್ನು ವಿರೋಧಿಸುತ್ತಿದ್ದಾರೆ. ಈ ಚಿತ್ರವನ್ನು ಯಾವುದೇ ಸಮುದಾಯಕ್ಕೆ ನೋವಾಗಬೇಕು ಎನ್ನುವ ಕಾರಣಕ್ಕೆ ಚಿತ್ರಿಸಿಲ್ಲ. ಈ ದೇಶದಲ್ಲಿ ಹೆಣ್ಣುಮಕ್ಕಳಿಗೆ ಗೌರವ ಸಿಗಬೇಕಾದ ಬಹಳಷ್ಟು ಚರ್ಚಾತ್ಮಕ ವಿಷಯಗಳಿವೆ. ಯಾವುದೇ ಸಮಾಜದಲ್ಲಿ ಹೆಣ್ಣುಮಕ್ಕಳಿಗೆ ಅಗೌರವವಾಗಬಾರದು. ಹೆಣ್ಣು ಒಂದು ವಸ್ತುವಲ್ಲ. ಅವಳಿಗೆ ಈ ಅದ್ಭುತ ದೇಶದಲ್ಲಿ ದೊರಕುತ್ತಿದ್ದ ಗೌರವ ಮತ್ತೆ ದೊರಕಬೇಕು. ಇನ್ನು, ಈ ಚಿತ್ರ ಕೇವಲ ಅದೊಂದೇ ವಿಚಾರವಲ್ಲದೇ, ಶಿಕ್ಷಣ, ಸಬಲೀಕರಣ, ಉದ್ಯೋಗ, ಸ್ತ್ರೀಗೌರವ ಮತ್ತು ಅವರ ಸಬಲೀಕರಣ ಮತ್ತು ದೇಶದ ಜನಸಂಖ್ಯಾ ಸ್ಫೋಟದ ವಿಚಾರಗಳನ್ನೂ ಕೂಡ ಆಧರಿಸಿದೆ. ಹಾಗಾಗಿ ಈ ಚಿತ್ರವನ್ನು ಎಲ್ಲರೂ ಕೂಡ ತಮ್ಮ ಕುಟುಂಬದೊಂದಿಗೆ ನೋಡಬಹುದಾಗಿದೆ ಎಂದಿದ್ದಾರೆ.‌

ಈ ಚಿತ್ರವನ್ನು ಕಮಲ್ ಚಂದ್ರ ನಿರ್ದೇಶಿಸಿದ್ದು, ರಾಧಿಕಾ ಜಿ ಫಿಲಂ & ನ್ಯೂಟೆಕ್ ಮೀಡಿಯಾ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ. ರವಿ ಎಸ್ ಗುಪ್ತಾ, ಬೀರೇಂದರ್ ಭಗತ್, ಸಂಜಯ್ ನಾಗಪಾಲ್ ಮತ್ತು ಶಿಯೋ ಬಲಾಕ್ ಸಿಂಗ್ ಅವರು ನಿರ್ಮಾಪಕರಾಗಿದ್ದು, ತ್ರಿಲೋಕಿ ಪ್ರಸಾದ್ ಸಹನಿರ್ಮಾಪಕರಾಗಿದ್ದಾರೆ.

 

View this post on Instagram

 

A post shared by Kamal Chandra (@kamalchandraofficial)

ಈ ಚಿತ್ರದಲ್ಲಿ ಇದೆ ಎನ್ನಲಾದ ಜನಸಂಖ್ಯಾ ಸ್ಫೋಟದ ವಿಚಾರವನ್ನು, ಮುಸ್ಲಿಂ ಮತಬ್ಯಾಂಕ್ ಗೆ ಹೆದರಿ, ಕರ್ನಾಟಕದಲ್ಲಿ ಬ್ಯಾನ್ ಮಾಡುವ ನಿರ್ಧಾರ ಕೈಗೊಂಡಿರುವುದು, ದೇಶದಲ್ಲಿನ ಸತ್ಯವಿಚಾರಗಳನ್ನು ಆಧರಿಸಿದ ಚಿತ್ರಗಳಿಗೆ ಸರ್ಕಾರ ಮಾಡುತ್ತಿರುವ ಅನ್ಯಾಯ ಎಂದು ಚಿತ್ರತಂಡ ಹಾಗೂ ಸಾರ್ವಜನಿಕರು ದೂರುತ್ತಿದ್ದಾರೆ.

ಅದೇನೇ ಇರಲಿ. ಮುಂದಿನ ಆದೇಶದವರೆಗೆ ರಾಜ್ಯದಲ್ಲಿ ಈ ಚಿತ್ರವನ್ನು ಪ್ರದರ್ಶಿಸುವಂತಿಲ್ಲ ಎಂದಿರುವ ಸರ್ಕಾರ ತನ್ನ ನಿರ್ಧಾರವನ್ನು ಯಾವಾಗ ಹಿಂಪಡೆಯಲಿದೆ ಎನ್ನುವುದನ್ನು ಕಾದುನೋಡಬೇಕಿದೆ.

You might also like
Leave A Reply

Your email address will not be published.