ಲಾಲ್ ಸಲಾಂ – ಹೆಂಡತಿಯ ಚಿತ್ರಕ್ಕೆ ಗಂಡ ವಿಶ್ ಮಾಡ್ಲಿಲ್ಲ

ನಟ ಧನುಷ್ ಹಾಗೂ ರಜನಿಕಾಂತ್ ಮಗಳು ಐಶ್ವರ್ಯಾ ಡಿವೋರ್ಸ್ ಪಡೆದ ಬಳಿಕ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯಗಳನ್ನು ಹೇಳಿಕೊಳ್ಳುತ್ತಿಲ್ಲ. ರಜನಿಕಾಂತ್ ನಟಿಸಿದ್ದಾರೆ ಎಂಬ ಕಾರಣಕ್ಕೆ ಧನುಷ್ ಶುಭಾಶಯ ಕೋರಿದ್ದಾರೆ. ಆದರೆ ಎಲ್ಲಿಯೂ ತಮ್ಮ ಪತ್ನಿಯ ಹೆಸರನ್ನು ಉಲ್ಲೇಖ ಮಾಡಿಲ್ಲ. ಹಾಗಿದ್ರೆ ಯಾವುದದು ಸಿನಿಮಾ? ಧನುಷ್ ವಿಶ್ ಮಾಡಿದಾದರು ಏನು?

ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ನಡೆಯುವ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ‘ಲಾಲ್ ಸಲಾಂ’ ಚಿತ್ರ ಹೇಳಲಿದೆ. ಈ ಬಗ್ಗೆ ಟ್ರೇಲರ್ನಲ್ಲಿ ಸುಳಿವು ನೀಡಲಾಗಿದೆ. ‘ಎಲ್ಲ ದೇವರೂ ಒಂದೇ’ ಎನ್ನುವ ಡೈಲಾಗ್ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಎ.ಆರ್. ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ರಜನಿಕಾಂತ್ ವಿಶೇಷ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ಧನುಷ್ ವಿಶ್ ಮಾಡಿದ್ದಾರೆ.

ಐಶ್ವರ್ಯಾ ರಜನಿಕಾಂತ್ ‘ಲಾಲ್ ಸಲಾಂ’ ಚಿತ್ರವನ್ನು ನಿರ್ದೇಶನ ಮಾಡಿದ್ದು, ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯಾ ಬಾಲಕೃಷ್ಣನ್, ವಿವೇಕ್ ಪ್ರಸನ್ನ, ಕೆಎಸ್ ರವಿ ಕುಮಾರ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿದೆ. ಫೆಬ್ರವರಿ 9ರಂದು ಈ ಚಿತ್ರ ರಿಲೀಸ್ ಆಗಲಿದೆ. ರೆಹಮಾನ್ ಅವರು ಸಿನಿಮಾ ಬಗ್ಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಟ್ರೇಲರ್ನ ಧನುಷ್ ಹಂಚಿಕೊಂಡು ‘ತಂಡಕ್ಕೆ ನನ್ನ ಶುಭ ಹಾರೈಕೆ. ಒಳ್ಳೆಯದಾಗಲಿ’ ಎನ್ನುವ ಮೂಲಕ ತಂಡಕ್ಕೆ ಶುಭಕೋರಿದ್ದಾರೆ. ‘ಸೂಪರ್ಸ್ಟಾರ್’ ಹ್ಯಾಶ್ಟ್ಯಾಗ್ ಹಾಕಿದ್ದಾರೆ. ಆದರೆ ಅವರು ಎಲ್ಲಿಯೂ ಐಶ್ವರ್ಯಾ ಹೆಸರನ್ನು ಉಲ್ಲೇಖ ಮಾಡಿಲ್ಲ. ಅವರನ್ನು ಟ್ಯಾಗ್ ಕೂಡ ಮಾಡಿಲ್ಲ. ಇದನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ. ಪತ್ನಿ ಸಿನಿಮಾಗೆ ಶುಭಕೋರಿದ ಮೇಲೆ ಅವರ ಪತ್ನಿಯ ಹೆಸರನ್ನು ಉಲ್ಲೇಖ ಮಾಡಲು ಏನು ಸಮಸ್ಯೆ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ.

You might also like
Leave A Reply

Your email address will not be published.