ಫೇಸ್ಬುಕ್, ಇನ್ಸ್ಟಾಗ್ರಾಮ್‌ ಸರ್ವರ್‌ ಡೌನ್‌ – ಎಕ್ಸ್‌ ವೇದಿಕೆಯಲ್ಲಿ ಟ್ರೋಲ್ ಆದ ಮೆಟಾ

ಅಬ್ಬಾ ಮೊಬೈಲ್ ಕುಟ್ಟಿದ್ದೆ ಕುಟ್ಟಿದ್ದು. ಇನ್ಸ್ಟಾಗ್ರಾಮ್, ಫೇಸ್ಬುಕ್ ಓಪನ್ ಹಾಕ್ತಿಲ್ಲ ಅಂತ ಏರೋಪ್ಲೇನ್ ಮೋಡ್ ಗೆ ಹಾಕಿ ಹಾಕಿ ಸುಸ್ತಾದ್ರ? ಮೊಬೈಲ್ ಸ್ವಿಚ್ ಆಫ್ ಮಾಡಿ ಸ್ವಿಚ್ ಆನ್ ಮಾಡಿದ್ರ? ಹಾಗಿದ್ರೆ ನೀವು ಖಂಡಿತ ಯಾಮಾರಿದ್ರಿ ಎಂದರ್ಥ! ಅಷ್ಟಕ್ಕೂ ನಡೆದಿರೋದು ಏನು? ಇಲ್ಲಿದೆ ನೋಡಿ ವರದಿ.

ಜಗತ್ತಿನಾದ್ಯಂತ ನಿನ್ನೆ ಮಂಗಳವಾರ ರಾತ್ರಿ 8 ರಿಂದ 9 ಗಂಟೆಯೊಳಗೆ ಫೇಸ್ಬುಕ್, ಇನ್ಸಾಗ್ರಾಮ್ ಬಳಕೆದಾರರಿಗೆಲ್ಲ ದೊಡ್ಡ ಅಚ್ಚರಿಯೇ ಕಾದಿತ್ತು. ಲಾಗಿನ್ ಆಗಿದ್ದ ಅಕೌಂಟ್ ಗಳು ಅದಷ್ಟಕ್ಕೆ ಲಾಗೌಟ್ ಆಗದು.. ಎಷ್ಟೇ ರಿಫ್ರೆಶ್ ಮಾಡಿದ್ರು, couldn’t refresh, Session expired ಎಂಬ ಸಂದೇಶ ಕಾಣಿಸಿಕೊಂಡಿದ್ದು, ಎಲ್ಲಾರಿಗೂ ತಲೆ ನೋವಾಗಿ ಪರಿಣಮಿಸಿತ್ತು.

Facebook, Instagram server down - Meta trolled on X Flatform

ಪ್ರತಿಕ್ಷಣವೂ ಇನ್ಸ್ಟಾಗ್ರಾಮ್ ರೀಲ್ಸ್ ಗಳಲ್ಲಿಯೇ ನೇತಾಡುವವರಿಗಂತೂ ಆದ ಪರಿಪಾಟಲು ಹೇಳತೀರದು. ಅಷ್ಟಕ್ಕೂ ಏನೋ ನೆಟ್ವರ್ಕ್ ಸಮಸ್ಯೆ ಇದೆ ಎಂದು airplane mode ಗೆ ಹಾಕಿ ಚೆಕ್ ಮಾಡಿದವರೆ ಹೆಚ್ಚು. ಆದರೂ ಓಪನ್ ಆಗದಿದ್ದಾಗ ಕೈ ಬಿಟ್ಟವರಿಗೆ ಟ್ವಿಟರ್ ಮೂಲಕ ಗೊತ್ತಾಗಿದ್ದು ಜಗತ್ತಿನಾದ್ಯಂತ ಮೆಟಾ ಒಡೆತನದ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಹಾಗೂ ಕೆಲವು ಕಡೆಗಳಲ್ಲಿ ವಾಟ್ಸ್ ಆಪ್ ಕೂಡ ಸರ್ವರ್ ಡೌನ್ ಆಗಿದೆ ಎಂದು.

ಮೆಟಾ ಅಪ್ಲಿಕೇಶನ್ ಗಳು ಓಪನ್ ಆಗದೆ ಇದ್ದಾಗ ಎಲ್ಲರೂ ಮೊರೆ ಹೋಗಿದ್ದು ಎಲಾಮ್ ಮಸ್ಕ್ ಒಡೆತನದ ಎಕ್ಸ್ ಫ್ಲಾಟ್ ಫಾರ್ಮ್ ಗೆ. #FacebookDown #InstagramDown #Meta #Zukerburg hastag ಗಳ ಮೂಲಕ ಈ ಮೆಟಾ ಒಡೆತನದ ಆ್ಯಪ್ ಗಳು ಡೌನ್ ಆಗಿರುವುದು ತಿಳಿದುಬಂದಿದ್ದು, ನೆಟ್ವರ್ಕ್ ಸಮಸ್ಯೆ ಇದೆ ಎಂದುಕೊಂಡವರಿಗೆಲ್ಲ ತಲೆ ಚಚ್ಚಿಓಳ್ಳುವಂತೆ ಆಗಿದಂತು ಸತ್ಯ!

ಅಷ್ಟಕ್ಕೂ ನಡೆದಿದ್ದೇನೆಂದರೆ, ಮೆಟಾ ಸರ್ವರ್ ನ ವೆಬ್ಸೈಟ್ ಅಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ ಆ್ಯಪ್ ಗಳು ಸರಿಯಾಗಿ ಲೋಡ್ ಆಗದೆ ಬಳಕೆದಾರರಿಗೆ ಸಮಸ್ಯೆ ಉಂಟಾಗಿದೆ. ಆದರೆ ಈ ತರಹ ಮೆಟಾ ಡೌನ್ ಆಗಿರೋದು ಇದೇ ಮೊದಲೇನಲ್ಲ. ಹಲವು ಬಾರಿ ಮೆಟಾ ಆ್ಯಪ್ ಗಳು ಡೌನ್ ಆದಾಗ ಗೂಗಲ್ ಹಾಗೂ ಎಕ್ಸ್ ಖಾತೆಗಳ ಮೊರೆ ಹೋಗುತ್ತಿದ್ದ ಬಳಕೆದಾರರಿಗಂತು ಇದು ಅಷ್ಟೊಂದು ತಲೆಕೆಡಿಸಿಕೊಳ್ಳುವ ಸಂಗತಿಯಾಗಿರ್ಲಿಕ್ಕಿಲ್ಲ.

ಇದರೊಂದಿಗೆ ಗೂಗಲ್ ಪ್ಲೆ ಸ್ಟೋರ್ ಕೂಡ ಕ್ಷಣಕಾಲ ಸ್ಥಗಿತಗೊಂಡಿದ್ದು, ಫೇಸ್ಬುಕ್ ಆ್ಯಪ್ ನಲ್ಲಿ ಏನಾದ್ರು ಸಮಸ್ಯೆ ಇದೆ ಎಂದು ಅನ್ ಇನ್ಸ್ಟಾಲ್ ಮಾಡಿದವರಿಗೆ ಮತ್ತೆ ಡೌನ್‌ಲೋಡ್ ಮಾಡಿಕೊಳ್ಳಲು ಆಗದೆ ಪೇಚಾಡುವ ಸ್ಥಿತಿಯಂತು ನಗುತರಿಸುವಂತಿತ್ತು. ಈ ಪರಿಸ್ಥಿತಿಯ ಬಗ್ಗೆ ಕೆಲವೊಂದು ಹಾಸ್ಯಾಸ್ಪದ ಟ್ವಿಟ್ ಗಳು ಇಲ್ಲಿವೆ ನೋಡಿ..

You might also like
Leave A Reply

Your email address will not be published.