ನಾನು ನಿಮ್ಮ ತೊಡೆಯ ದೊಡ್ಡ ಅಭಿಮಾನಿ – ಅಭಿಮಾನಿಯ ಮಾತಿಗೆ ಈ ನಟಿ ಮಾಡಿದ್ದೇನು?

ಸೋಶಿಯಲ್ ಮೀಡಿಯಾ ಬಗ್ಗೆ ಹೇಳ್ಬೇಕಾ? ಬರೀ ಮನರಂಜನೀಯ ಮಾತ್ರವಲ್ಲ ಭಾವನೆಗಳ ಸಾಗರ ಎಂದೇ ಹೇಳಬಹುದು. ಇತ್ತೀಚೆಗೆ ನಟಿಯರು ಸಿಕ್ಕಪಟ್ಟೆ ಬೋಲ್ಡ್ ಫೋಟೋ, ದೇಹದ ಅಂಗಗಳ ಬಗ್ಗೆ, ಅವರು ಹಾಕಿಕೊಂಡ ಬಟ್ಟೆಯ ಬಗೆಗೆ ಪೋಸ್ಟ್ ಮಾಡುತ್ತಿದ್ದು ಅದಕ್ಕೆ ತಕ್ಕಂತೆ ನಾನಾ ರೀತಿಯ ಕಮೆಂಟ್ಗಳು ಬರುತ್ತಿರುವುದು ಸಹಜವಾಗಿದೆ.

‘ರಾವಣಾಸುರ’ ಚಿತ್ರದಲ್ಲಿ ಜಾನು ಹೆಸರಿನ ಪಾತ್ರ ಮಾಡಿ ಗಮನ ಸೆಳೆದ ತೆಲುಗು ನಟಿ ದಕ್ಷಾ ನಗರ್ಕರ್ ಸಿನಿಮಾ ಆಯ್ಕೆಯಲ್ಲಿ ದಕ್ಷಾ ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಆದರೆ ಅವರು ಇನ್ಸ್ಟಾಗ್ರಾಮ್ನಲ್ಲಿ ಆ್ಯಕ್ಟೀವ್ ಆಗಿದ್ದು ಹಲವು ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇದೀಗ ಅವರು ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಕೇಳುವ ಅವಕಾಶವನ್ನು ನೀಡಿದ್ದರು.

I'm a big fan of your thighs - what did this actress say to the fan?

ದಕ್ಷಾ ಅವರು ತಮ್ಮ ಅಭಿಮಾನಿಗಳಿಗೆ ನೀಡಿದ ಪ್ರಶ್ನೆ ಕೇಳುವ ಅವಕಾಶದಲ್ಲಿ ಹಲವು ಪ್ರಶ್ನೆಗಳು ಬಂದಿದ್ದು, ಈ ಪೈಕಿ ಅವರಿಗೆ ತೊಡೆಯ ಕುರಿತ ಪ್ರಶ್ನೆ ಕೂಡ ಇತ್ತು. ಇದನ್ನು ಬೇಕಿದ್ದರೆ ಅವರು ನಿರ್ಲಕ್ಷಿಸಬಹುದಿತ್ತು. ಆದರೆ, ದಕ್ಷಾ ಹಾಗೆ ಮಾಡಿಲ್ಲ. ಬದಲಿಗೆ ಅವರು ಈ ಪ್ರಶ್ನೆಗೆ ಫನ್ನಿ ಆಗಿ ಉತ್ತರ ನೀಡಿದ್ದು, ಸಖತ್ ವೈರಲ್ ಆಗುತ್ತಿದೆ.

ಪ್ರಶ್ನೆಯಲ್ಲಿ ಏನಿತ್ತು? ದಕ್ಷ ಕೊಟ್ಟ ಆ ಫನಿ ಉತ್ತರ ಏನು?

‘ನಾನು ನಿಮ್ಮ ತೊಡೆಯ ದೊಡ್ಡ ಅಭಿಮಾನಿ. ಅವುಗಳ ರಹಸ್ಯ ಏನು’ ಎಂದು ಅಭಿಮಾನಿಯೋರ್ವ ಪ್ರಶ್ನೆ ಮಾಡಿದ್ದಾನೆ. ಈ ಪ್ರಶ್ನೆಯನ್ನು ಅವರು ಪೋಸ್ಟ್ ಮಾಡಿದ್ದಾರೆ. ಜೊತೆಗೆ ‘ನಾನು ಮಸಾಲ ವಡೆ ತಿನ್ನುತ್ತೇನೆ’ ಎಂದು ಉತ್ತರ ನೀಡಿದ್ದಾರೆ. ಸದ್ಯ ಈ ಫನ್ನಿ ಉತ್ತರ ವೈರಲ್ ಆಗುತ್ತಿದೆ. ನಟಿಯ ಉತ್ತರವನ್ನು ಅನೇಕರು ಶ್ಲಾಘಿಸಿದ್ದಾರೆ.

You might also like
Leave A Reply

Your email address will not be published.