300 ಕೋಟಿ ಬಾಚಿದ ಹನುಮಾನ್ – ವಿಜಯೋತ್ಸವ

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಹನುಮಾನ್ ಸಿನಿಮಾ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಮುನ್ನೂರು ಕೋಟಿ ರೂಪಾಯಿ ಕ್ಲಬ್ ಸೇರಿರುವುದಕ್ಕೆ ಚಿತ್ರತಂಡ ಸಂಭ್ರಮಿಸಿದೆ. ಕಲೆಕ್ಷನ್ ಬಗ್ಗೆ ಮಾಹಿತಿ ನೀಡುವ ಪೋಸ್ಟರ್ ಅನ್ನು ನಿರ್ದೇಶಕ ಪ್ರಶಾಂತ್ ವರ್ಮಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜನವರಿ 12ರಂದು ರಿಲೀಸ್ ಆದ ‘ಹನುಮಾನ್’ ಸಿನಿಮಾದಲ್ಲಿ ದೇಸಿ ಸೂಪರ್ ಹೀರೋ ಕಾನ್ಸೆಪ್ಟ್ ಇದೆ. ಆಂಜನೇಯನ ಕಾರಣದಿಂದ ಸೂಪರ್ ಪವರ್ ಪಡೆಯುವ ಸಾಮಾನ್ಯ ಹಳ್ಳಿ ಹುಡುಗನ ಕಹಾನಿ ಈ ಚಿತ್ರದಲ್ಲಿ ಮೂಡಿದೆ. ಇದರಲ್ಲಿನ ಗ್ರಾಫಿಕ್ಸ್ ನೋಡಿ ಪ್ರೇಕ್ಷಕರು ಫೀದಾ ಆಗಿದ್ದಾರೆ. ಕನ್ನಡದಲ್ಲೂ ‘ಹನುಮಾನ್’ ಬಿಡುಗಡೆಯಾಗಿ ಯಶಸ್ವಿಯಾಗಿದೆ.

ತೇಜ ಸಜ್ಜಾ ಅವರು ‘ಹನುಮಾನ್’ ಸಿನಿಮಾದಲ್ಲಿ ಸೂಪರ್ ಹೀರೋ ಆಗಿ ನಟಿಸಿದ್ದಾರೆ. ಈ ಸಿನಿಮಾದ ಗೆಲುವಿನ ಬಳಿಕ ಅವರ ಡಿಮ್ಯಾಂಡ್ ಹೆಚ್ಚಾಗಿದೆ. ಕನ್ನಡದ ಹುಡುಗಿ ಅಮೃತಾ ಅಯ್ಯರ್, ರಾಜ್ ದೀಪಕ್ ಶೆಟ್ಟಿ ಅವರು ಸಿನಿಮಾದಲ್ಲಿ ನಟಿಸಿದ್ದಾರೆ. ವಿನಯ್ ರೈ ಅವರು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಖ್ಯಾತ ನಟಿ ವರಲಕ್ಷ್ಮೀ ಶರತ್ ಕುಮಾರ್ ಅವರಿಗೂ ಒಂದು ಮುಖ್ಯವಾದ ಪಾತ್ರವಿದೆ.

ಮಹೇಶ್ ಬಾಬು, ಧನುಷ್, ಅಕ್ಕಿನೇನಿ ನಾಗಾರ್ಜುನ ಅವರಂತಹ ಸ್ಟಾರ್ ನಟರ ಸಿನಿಮಾಗಳ ಎದುರಿನಲ್ಲಿ ‘ಹನುಮಾನ್’ ಚಿತ್ರ ಬಿಡುಗಡೆ ಆಗಿತ್ತು. ಹಾಗಾಗಿ ಈ ಸಿನಿಮಾ ಹೆಚ್ಚು ಕಲೆಕ್ಷನ್ ಮಾಡುವುದಿಲ್ಲ ಎಂದು ಕೆಲವರು ಅಂದುಕೊಂಡಿದ್ದರು. ಆದರೆ ನಂತರ ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ಕಲೆಕ್ಷನ್ ಆಗಿದ್ದು ನಿಜಕ್ಕೂ ಮ್ಯಾಜಿಕ್.

ಸಂಕ್ರಾಂತಿ ಸಂದರ್ಭದಲ್ಲಿ ಬಿಡುಗಡೆಯಾದ ಬೇರೆ ಎಲ್ಲ ನಟರ ಸಿನಿಮಾಗಳಿಗಿಂತಲೂ ‘ಹನುಮಾನ್’ ಹೆಚ್ಚು ಕಲೆಕ್ಷನ್ ಮಾಡಿತು. ಈಗ ಸಿನಿಮಾದ ಗಳಿಕೆ 300 ಕೋಟಿ ರೂಪಾಯಿ ತಲುಪಿದ್ದು ಚಿತ್ರತಂಡಕ್ಕೆ ಖುಷಿ ನೀಡಿದೆ. ಸದ್ಯ ಈ ಸಿನಿಮಾಗೆ ಸೀಕ್ವೆಲ್ ಸಿದ್ಧವಾಗುತ್ತಿದ್ದು, ಅದಕ್ಕೆ ‘ಜೈ ಹನುಮಾನ್’ ಎಂದು ಶೀರ್ಷಿಕೆ ಇಡಲಾಗಿದೆ.

You might also like
Leave A Reply

Your email address will not be published.