ಕಾಂತಾರ ಭಾಗ-1 ಸಿನಿಮಾಗೆ ದೈವದ ಮೊರೆ ಹೋದ ರಿಷಬ್ ಶೆಟ್ಟಿ: ದೈವ ಕೊಟ್ಟ ಸೂಚನೆ ಏನು?

ಕಾಂತಾರ ಸಿನಿಮಾದಿಂದ ಸೂಪರ್ ಹಿಟ್ ಆದ ರಿಷಬ್ ಶೆಟ್ಟಿ ಅವರು ಇದೀಗ “ಕಾಂತಾರ: ಚಾಪ್ಟರ್ 1” ಸಿನಿಮಾ ಮಾಡುತ್ತಿರುವುದು ನಮ್ಮೆಲ್ಲರಿಗೂ ಗೊತ್ತಿರುವ ಸಂಗತಿ. ಸಿನಿ ಕಾರ್ಯಗಳಲ್ಲಿ ತೊಡಗಿಕೊಂಡಿರುವ ರಿಷಬ್ ಮಂಗಳೂರಿಗೆ ಭೇಟಿ ಕೊಟ್ಟಿರುವುದು ಹಲವರಲ್ಲಿ ಗೊಂದಲಗಳು ಮೂಡಿವೆ.

ದೈವದ ವಿಚಾರವನ್ನಿಟ್ಟುಕೊಂಡು ಕಾಂತಾರ ಸಿನಿಮಾ ಹಿಟ್ ಎನಿಸಿಕೊಂಡ ರಿಷಬ್ ಶೆಟ್ಟಿ ಕಾಂತಾರ: ಚಾಪ್ಟರ್ 1 ಸಿನಿಮಾ ಕೂಡ ಯಾವುದೇ ಅಡೆತಡೆಯಿಲ್ಲದೇ ನಿರ್ವಿಘ್ನವಾಗಿ ನಡೆಯಲಿ ಎಂದು ಮತ್ತೆ ದೈವದ ಮೊರೆ ಹೋಗಿದ್ದಾರೆಯೇ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಏನಿದು? ಎಂಬ ಮಾಹಿತಿ ಇಲ್ಲಿದೆ.

ವಜ್ರದೇಹಿ ಮಠದ ದೈವ ಕೋಲ: ರಿಷಭ್ ಭೇಟಿ

ಕಳೆದ ದಿನಗಳಲ್ಲೇ ವಜ್ರದೇಹಿ ಸ್ವಾಮೀಜಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅವರು ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಈ ನಿಟ್ಟಿನಲ್ಲಿ ಕೋಲಕ್ಕೆ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು ರಿಷಬ್ ಶೆಟ್ಟಿ ಅವರನ್ನು ಆಹ್ವಾನಿಸಿದ್ದರಿಂದ ರಿಷಬ್ ಶೆಟ್ಟಿ ಮಂಗಳೂರಿಗೆ ಬಂದಿದ್ದಾರೆ.

ರಿಷಬ್ ಗೆ ದೈವ ಸೂಚನೆ ನೀಡಿದ್ದಾದರು ಏನು?

ರಿಷಭ್ ಶೆಟ್ಟಿ ವಜ್ರದೇಹಿ ಮಠದ ದೈವ ಕೋಲ ವೀಕ್ಷಿಸಿದ್ದು, ಈ ಸಂದರ್ಭದಲ್ಲಿ ‘ಧೈರ್ಯ ಕಳೆದುಕೊಳ್ಳದಂತೆ, ಏನೇ ಸಮಸ್ಯೆ ಎದುರಾದರೂ ಕುಗ್ಗಬೇಡಿ, ಹಿಂದೆ ನಾನಿದ್ದೇನೆ’ ಎಂದು ದೈವ ಸೂಚನೆ ನೀಡಿದೆ ಎನ್ನಲಾಗಿದೆ.

‘ಕಾಂತಾರ’ ಶೂಟಿಂಗ್ ಸಂದರ್ಭದಲ್ಲೂ ದೈವದ ಅಭಯ ಚಿತ್ರಕ್ಕೆ ಸಿಕ್ಕಿತ್ತು. ಈಗ ‘ಕಾಂತಾರ: ಚಾಪ್ಟರ್ 1’ ಸಂದರ್ಭದಲ್ಲೂ ಧನಾತ್ಮಕ ಪ್ರತಿಕ್ರಿಯೆ ಸಿಕ್ಕಿರುವುದರಿಂದ ರಿಷಬ್ ಶೆಟ್ಟಿ ಸಖತ್ ಖುಷಿಯಾಗಿದ್ದಾರೆ.

ರಿಷಬ್ ಶೆಟ್ಟಿ ನಟನೆಯ ‘ಕಾಂತಾರ’ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿ ಬಿಸ್ನೆಸ್ ಮಾಡಿತ್ತು. ಹೀಗಾಗಿ, ಇದಕ್ಕೆ ಪ್ರೀಕ್ವೆಲ್ ಮಾಡಲು ರಿಷಬ್ ಮತ್ತೆ ಆಸಕ್ತಿ ತೋರಿಸಿದ್ದಾರೆ. ‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ರಿಷಬ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಹಾಗೂ ಪಂಜಾಬಿ ಭಾಷೆಯಲ್ಲಿ ಸಿನಿಮಾ ಮೂಡಿಬರುತ್ತಿದೆ. ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

You might also like
Leave A Reply

Your email address will not be published.