ಈ ಬಾರಿಯಾದ್ರೂ ಗೀತಾ ಶಿವರಾಜ್ ಕುಮಾರ್’ರ ಎಂಪಿ ಆಸೆ ಈಡೇರುತ್ತಾ? – ಪತ್ನಿಯ ಆಸೆ ಬಗ್ಗೆ ಶಿವಣ್ಣ ಹೇಳಿದ್ದೇನು?

ರಾಜ್ ಕುಮಾರ್ ಕುಟುಂಬವನ್ನು ಸ್ಯಾಂಡಲ್ ವುಡ್ ನಲ್ಲಿ ದೊಡ್ಮನೆ ಕುಟುಂಬ ಎಂದೇ ಕರೆಯುವುದು. ಕರ್ನಾಟಕದಾದ್ಯಂತ ರಾಜ್ ಫ್ಯಾಮಿಲಿಗೆ ಬಹುದೊಡ್ಡ ಅಭಿಮಾನಿ ಬಳಗವಿದೆ. ಅಣ್ಣಾವ್ರು ಇದ್ದಾಗಲೂ ರಾಜಕೀಯ ಪ್ರವೇಶಕ್ಕೆ ಒತ್ತಡ ತುಸು ಹೆಚ್ಚಾಗೆ ಇತ್ತು. ಆದ್ರು ರಾಜ್ ಕುಮಾರ್ ಮತ್ತು ಅವರ ಪತ್ನಿ ಪಾರ್ವತಮ್ಮ ಹಾಗೂ ಅವರ ಮಕ್ಕಳು, ಸೊಸೆಯಂದಿರು ರಾಜಕೀಯದಿಂದ ದೂರ ಉಳಿದಿದ್ರು. ಇದೀಗ ಅಣ್ಣಾವ್ರ ಕುಟುಂಬ ರಾಜಕೀಯಕ್ಕೆ ಬರುವ ಕುರಿತು ಎಲ್ಲೆಡೆ ಚರ್ಚೆಯಾಗುತ್ತಿದೆ. ಸುದ್ದಿ ಹಬ್ಬುತ್ತಿದೆ. ಹಾಗಾದ್ರೆ ರಾಜಕೀಯ ಕಣಕ್ಕೆ ಇಳಿಯುತ್ತಿರುವುದಾದರು ಯಾರು? ಎಂಬುದ್ದಕ್ಕೆ ಈ ಸ್ಟೋರಿ ಓದಿ.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಶಿವಮೊಗ್ಗದಲ್ಲಿ ಪಾಲಿಟಿಕ್ಸ್ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಪತ್ನಿ ಗೀತಾ ರಾಜಕೀಯದಲ್ಲಿ ಬೆಳೆಯಬೇಕು. ಪತ್ನಿ ಸಂಸದೆ ಆಗಬೇಕು ಎಂದು ಶಿವಣ್ಣ ಬೆಂಬಲಿಸಿ ಮಾತನಾಡಿದ್ದಾರೆ.

ಸಚಿವ ಮಧು ಬಂಗಾರಪ್ಪ ಹುಟ್ಟುಹಬ್ಬದ ಹಿನ್ನೆಲೆ ಶಿವರಾಜ್ ಕುಮಾರ್ ದಂಪತಿ ಶಿವಮೊಗ್ಗಕ್ಕೆ ಭೇಟಿ ನೀಡಿ ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ರಾಜಕೀಯಕ್ಕೆ ಬರುವುದಿಲ್ಲ. ಆದರೆ ನನ್ನ ಪತ್ನಿ ಎಂಪಿ ಆಗಲಿ, ಎಂಎಲ್ಎ ಆಗಲಿ ಎಂಬ ಆಸೆಯಿದೆ. ಈ ಮೂಲಕ ಮಹಿಳೆಯರಿಗೆ ಪತ್ನಿ ಗೀತಾ ಮಾದರಿಯಾಗಲಿ ಎಂದಿದ್ದಾರೆ ಶಿವಣ್ಣ.

Will Geeta Shivraj Kumar's MP wish come true this time? - What did Shivanna say about his wife's desire?

ಒಬ್ಬ ಗಂಡನಾಗಿ ಗೀತಾಗೆ ಬೆಂಬಲಿಸುತ್ತೇನೆ. ಶಿವಮೊಗ್ಗದಲ್ಲಿ ಗೀತಾ ಸಾಕಷ್ಟು ಕೆಲಸ ಮಾಡಿದ್ದಾರೆ. ಆದರೆ, ಪ್ರಚಾರದ ಕಡೆ ಗಮನ ನೀಡಿಲ್ಲ. ಉತ್ತಮ ಕೆಲಸಗಳ ಮೂಲಕ ಜನರೊಂದಿಗೆ ಇದ್ದರೆ ಸಾಕು. ಇನ್ನೂ ಪತ್ನಿ ಶಿವಮೊಗ್ಗದಲ್ಲಿ ಸ್ಪರ್ಧೆ ಮಾಡುವ ಪಕ್ಷದ ವರಿಷ್ಠರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಶಿವಣ್ಣ ತಿಳಿಸಿದ್ದಾರೆ.

ರಾಜಕೀಯಕ್ಕೆ ಬರಲ್ಲ ಎಂದಿದ್ರು ಅಶ್ವಿನಿ ಪುನೀತ್ ರಾಜ್ ಕುಮಾರ್:

ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ತಮ್ಮ ಗಂಡನ ಆಸೆಯನ್ನು ಪೂರೈಸಲು ಪಿಆರ್’ಕೆ ಪ್ರೊಡೆಕ್ಷನ್ನ ಸಂಪೂರ್ಣ ಹೊಣೆ ಹೊತ್ತಿದ್ದರು. ಇದೇ ಸಂದರ್ಭದಲ್ಲಿ, ಅಶ್ವಿನಿ ಅವರನ್ನು ರಾಜಕೀಯಕ್ಕೆ ಕರೆತರಲು ಅನೇಕ ರಾಜಕೀಯ ನಾಯಕರು ಮುಂದಾಗಿದ್ದಲ್ಲದೇ, ಅವರ ಮೇಲೆ ರಾಜಕೀಯ ಪ್ರವೇಶಿಸುವಂತೆ ವಿವಿಧ ಪಕ್ಷಗಳು ಒತ್ತಡವೂ ಹೇರಿದ್ದವು.

ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರೋದಿಲ್ಲ ಎಂದು ಗಟ್ಟಿ ನಿರ್ಧಾರ ಮಾಡುವ ಮೂಲಕ, ತಮ್ಮ ಪತಿ ಪುನೀತ್ ಹಾದಿಯಲ್ಲೇ ಸಾಗಿ, ರಾಜಕೀಯ ಸಹವಾಸದಿಂದ ದೂರ ಇರಲು ನಿರ್ಧರಿಸಿದ್ದೇನೆ ಎಂದು ದೊಡ್ಮನೆ ಸೊಸೆ ಅಶ್ವಿನಿ ಅವರು ತಮಗೆ ಬಂದ ಆಫರ್ ಗಳ ಕುರಿತು ಮಾತನಾಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದರು.

Will Geeta Shivraj Kumar's MP wish come true this time? - What did Shivanna say about his wife's desire?

ನಮ್ಮನೇ ರಾಜ್ ಕುಮಾರ ಅಪ್ಪು ಕೂಡ ರಾಜಕೀಯಕ್ಕೆ ಬರಲ್ಲ ಎಂದಿದ್ರು:

ಪುನೀತ್ ರಾಜ್ ಕುಮಾರ್ ಅವರಿಗೂ ಸಹ ರಾಜಕೀಯಕ್ಕೆ ಬರಲು ಆಫರ್ ನೀಡಿದ್ದರು ಎನ್ನುವ ಮಾತುಗಳು ಕೇಳಿ ಬಂದಿತ್ತು. ಸ್ವತಃ ಡಿಕೆ ಶಿವಕುಮಾರ್ ಕೂಡ ಪುನೀತ್ ರನ್ನು ರಾಜಕೀಯಕ್ಕೆ ತರಲು ಎಷ್ಟೇ ಪ್ರಯತ್ನಪಟ್ಟರೂ ಆಗಲಿಲ್ಲ ಎಂದು ಪುನೀತ್ ನಿಧನದ ನಂತರ ಅವರೇ ಹೇಳಿದ್ದರು. ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್, ಜಗ್ಗೇಶ್, ನಿರ್ಮಾಪಕ ಎಸ್ ವಿ ಬಾಬು ಅವರು ಪುನೀತ್ ರನ್ನು ಭೇಟಿ ಮಾಡಿ ರಾಜಕೀಯಕ್ಕೆ ಬರಲು ಆಹ್ವಾನ ನೀಡಿದ್ದರಂತೆ. ಆದರೂ ಪುನೀತ್ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂದು ತಿಳಿಸಿದರಂತೆ.

[10:47 am, 04/03/2024] ~Deepu~: Will Geeta Shivraj Kumar's MP wish come true this time? - What did Shivanna say about his wife's desire?
[10:48 am, 04/03/2024] Siddu Unlock: ok

ಯಾಕೆ ರಾಜಕೀಯಕ್ಕೆ ಬರಲಿಲ್ಲ ಡಾ.ರಾಜ್ ಕುಮಾರ್?

ಕನ್ನಡದ ಮೇರುನಟ ವರನಟ ಡಾ.ರಾಜ್ ಕುಮಾರ್ ಅವರನ್ನು ದಿಗ್ಗಜ ರಾಜಕೀಯ ನಾಯಕರೇ ಹುಡುಕಿ ಬಂದರೂ ಅವರು ರಾಜಕೀಯ ಪ್ರವೇಶ ಮಾಡಲಿಲ್ಲ. ಗೋಕಾಕ್ ವರದಿ ಎಂದು ಜನಪ್ರಿಯವಾಗಿರುವ “ಗೋಕಾಕ್ ವರದಿ” ಪ್ರಾಥಮಿಕ ಶಿಕ್ಷಣಕ್ಕೆ ಕನ್ನಡವನ್ನು ಕಡ್ಡಾಯ ಭಾಷೆಯನ್ನಾಗಿ ಮಾಡುವ ಕುರಿತು ಪ್ರಸ್ತಾಪಿಸಿತ್ತು. ಗೋಕಾಕ್ ವರದಿ ಜಾರಿಗಾಗಿ ಡಾ.ರಾಜ್ ಹೋರಾಟ ಅವಿಸ್ಮರಣೀಯವಾಗಿದೆ.

ಇಂದಿರಾ ಗಾಂಧಿ ಅವರ ವಿರುದ್ಧ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಡಾ.ರಾಜ್ ಕುಮಾರ್ ಅವರನ್ನು ಕಣಕ್ಕಿಳಿಸುವ ಆಲೋಚನೆ ಕರ್ನಾಟಕದ ಹಲವು ರಾಜಕೀಯ ಮುಖಂಡರಿಗಿತ್ತು. ಆದರೆ ಡಾ. ರಾಜ್ ಚುನಾವಣೆಗೆ ಸ್ಪರ್ಧಿಸುವ ಕುರಿತು ಆಸಕ್ತಿ ತೋರಿಸಲಿಲ್ಲ. ರಾಜಕೀಯಕ್ಕೆ ಬರದೆ ಜನಸೇವೆ ಮಾಡೋದಾಗಿ ರಾಜ್ ಕುಮಾರ್ ಘೋಷಿಸಿದ್ದರು.

You might also like
Leave A Reply

Your email address will not be published.