ಸಂಕ್ರಾತಿ ಹಬ್ಬಕ್ಕೆ ಸಿನಿಪ್ರೇಕ್ಷಕರಿಗೆ ಭರ್ಜರಿ ಸಿನಿಊಟ!

2023ರಲ್ಲಿ ತೆರೆಕಂಡ ಭಾರತೀಯ ಚಿತ್ರರಂಗದ ಪೈಕಿ ಅನೇಕ ಸಿನಿಮಾಗಳು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಉತ್ತಮ ವಿಮರ್ಶೆಯನ್ನು ಪಡೆದುಕೊಂಡಿದೆ. ಇನ್ನು ಹಿಟ್ ಆಗದ ಕೆಲವು ಸಿನಿಮಾಗಳು ತನ್ನ ಹಾಡುಗಳ ಮೂಲಕ ಸಖತ್ ಹಿಟ್ ಆಗಿದೆ. ಇದೀಗ ನೂತನ ವರ್ಷದಲ್ಲಿ ತೆರೆಗೊಳ್ಳಲು ಸಿದ್ಧವಾಗಿರುವ ಸಿನಿಮಾಗಳು ಯಾವುದು? ಪ್ರೇಕ್ಷಕರ ಮನಗೆಲ್ಲುವ ಆ ಟಾಪ್ ಸಿನಿಮಾಗಳು ಯಾವುದಿರಬಹುದು? ಎಂಬ ನಿರೀಕ್ಷೆಯು ಹೆಚ್ಚಿದೆ.

ನೂತನ ವರ್ಷದ ಪ್ರಾರಂಭದಲ್ಲೇ ಬರುವ ಸಂಕ್ರಾಂತಿ ಹಬ್ಬದ ವಾರದಲ್ಲೇ ಭಾರತೀಯ ಚಿತ್ರರಂಗದ ಹಲವಾರು ಸಿನಿಮಾಗಳು ರಿಲೀಸ್ ಮಾಡಲು ತಮ್ಮ ದಿನಾಂಕಗಳನ್ನು ಈಗಾಗಲೇ ನಿಗಡಿಪಡಿಸಿದ್ದಾವೆ. ಈ ಪೈಕಿ ಹೆಚ್ಚು ಸಿನಿಮಾಗಳು ಒಂದರ ಹಿಂದೆ ಒಂದು ಎಂಬಂತೆ ರಿಲೀಸ್ಗೆ ತುದಿಗಾಲಿನಲ್ಲಿ ನಿಂತಿದ್ದು, ಇದರಲ್ಲಿ ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳೇ ಹೆಚ್ಚಾಗಿವೆ ಎಂಬುದು ತಿಳಿದುಬಂದಿದೆ.

ರಿಲೀಸ್ ಆಗಲಿರುವ ಸಿನಿಮಾಗಳು ಯಾವುವು?

ಹನುಮಾನ್, ದೇವಾರ, ಗುಂಟೂರು ಕಾರಂ, ಕಂಗುವ, ಪುಷ್ಪ 2, ಇಂಡಿಯನ್ 2, ಕ್ಯಾಪ್ಟನ್ ಮಿಲ್ಲರ್, ಕಲ್ಕಿ 2898 ಏಡಿ, ಮೇರಿ ಕ್ರಿಸ್ಮಸ್, ಮೈನ್ ಅಟಲ್ ಹೂನ್, ಸೈಂಧವ್, ಈಗಲ್, ಉತ್ಸಾದ್ ಭಗತ್ ಸಿಂಗ್ ಸೇರಿದಂತೆ ಅನೇಕ ಚಿತ್ರಗಳು ರಿಲೀಸ್ ಮಾಡಲು ದಿನಾಂಕಗಳನ್ನು ನಿಗದಿಪಡಿಸಿದ್ದು, ಆ ದಿನಕ್ಕಾಗಿ ಕಾತೂರದಿಂದ ಕಾಯುತ್ತಿವೆ.

Movies

ಅದಾಗ್ಯೂ ನಟ ಧನುಷ್ ಅಭಿನಯದ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರಕ್ಕೆ ಹೆಚ್ಚಿನ ನಿರೀಕ್ಷೆ ಇದೆ ಎಂಬುದು ಇತ್ತೀಚೆಗೆ ನಡೆಸಿದ ಪೋಲ್ನಲ್ಲಿ ತಿಳಿದುಬಂದಿದೆ.

Captain Miller's movie

You might also like
Leave A Reply

Your email address will not be published.