Yuvanidhi Scheme : ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು? ಈ ವಿಡಿಯೋ ನೋಡಿ

ರಾಜ್ಯ ಸರ್ಕಾರ ಚುನಾವಣೆಗೆ ಮುಂಚೆ ನೀಡಿದ್ದ ಯುವನಿಧಿ ಯೋಜನೆಯ (Yuvanidhi Scheme) ಭರವಸೆಯನ್ನು ಸರ್ಕಾರ ರಚನೆಯಾಗಿ 6 ತಿಂಗಳುಗಳ ನಂತರವಾದರೂ ಅವಕಾಶ ನೀಡಿದೆ.

ಇದೇ ಡಿಸೆಂಬರ್ 26 ರಿಂದ ಯುವನಿಧಿ ಯೋಜನೆಗೆ (Yuvanidhi Scheme) ನೋಂದಾಯಿಸಲು ಅರ್ಹ ನಿರುದ್ಯೋಗಿ ಯುವಕ/ಯುವತಿಯರಿಗೆ ಅವಕಾಶ ನೀಡಿದೆ. 2023 ನೇ ಸಾಲಿನಲ್ಲಿ ಡಿಪ್ಲೋಮಾ ಹಾಗೂ ಪದವಿ ಪೂರ್ಣಗೊಳಿಸಿ ಕಳೆದ 6 ತಿಂಗಳುಗಳಿಂದ ನಿರುದ್ಯೋಗಿಗಳಾಗಿರುವವರು ಈ ಯೋಜನೆಗೆ ನೋಂದಾಯಿಸಬಹುದು.

ಅರ್ಹತೆಗಳೇನು?
1) ರಾಜ್ಯದ ನಿವಾಸಿಯಾಗಿರಬೇಕು
2) 18 ವರ್ಷದಿಂದ 25 ವರ್ಷದ ಒಳಗಿನ ವಯೋಮಾನದವರಾಗಿರಬೇಕು
3) 2023ನೇ ಸಾಲಿನಲ್ಲಿ ಡಿಪ್ಲೋಮಾ/ಪದವಿ ಉತ್ತೀರ್ಣರಾಗಿ ಕಳೆದ 6 ತಿಂಗಳುಗಳಾಗಿರಬೇಕು
4) ಸರ್ಕಾರಿ/ಖಾಸಗಿ ಅಥವಾ ಸ್ವಯಂ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿರಬಾರದು
5) ಉನ್ನತ ಶಿಕ್ಷಣ ಮುಂದುವರೆಸಿರಬಾರದು
6) ನಿರುದ್ಯೋಗಿ ಪ್ರಮಾಣ ಪತ್ರ ಹೊಂದಿರಬೇಕು

ಅರ್ಹ ಯುವಕ/ಯುವತಿಯರು ಸೇವಾಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರದ ಬಾಪೂಜಿ ಸೇವಾಕೇಂದ್ರ, ಗ್ರಾಮ ಒನ್, ಬೆಂಗಳೂರು ಒನ್, ಅಟಲ್ ಜನಸ್ನೇಹಿ ಸೇವಾಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದು.

ಯುವನಿಧಿ ಯೋಜನೆಗೆ (Yuvanidhi Scheme) ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಹಾಗೂ ದಾಖಲಾತಿಗಳ ಬಗ್ಗೆ ವಿವರವಾಗಿ ತಿಳಿಯಲು ಈ ವಿಡಿಯೋ ನೋಡಿ.

You might also like
Leave A Reply

Your email address will not be published.