ಎಚ್ಚರವಿರಲಿ! ವಿದ್ಯುತ್ ಅವಘಡಗಳಿಂದ ಮರಣ ಸಂಭವಿಸಬಹುದು.

ಎನ್‌ಸಿಆರ್‌ಬಿ ಅಂಕಿ-ಅಂಶಗಳ ಪ್ರಕಾರ, ಕಳೆದ ದಶಕದಲ್ಲಿ (2011-2020), ಸುಮಾರು 1,00,000 ಜನರು ವಿದ್ಯುದಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಸುಮಾರು 11,000 ದಷ್ಟು ವಿದ್ಯುದಾಘಾತದ ಸಾವುಗಳು ಸಂಭವಿಸುತ್ತವೆ. ಸಾರ್ವಜನಿಕರು ಅತ್ಯಂತ ಸುರಕ್ಷಿತವಾಗಿರುವುದು ಅನಿವಾರ್ಯವಾಗಿದೆ. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಸುರಕ್ಷತೆಯನ್ನು ವಹಿಸಬೇಕು. ಚಾ.ವಿ.ಸ.ನಿ.ನಿ ಯು ತನ್ನ ಸಾಮಾಜಿಕ ಜಾಲತಾಣಗಳಲ್ಲಿ ವಿದ್ಯುತ್ ಸುರಕ್ಷತೆಯ ಬಗ್ಗೆ ಹಾಗೂ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದೆ.

ವಿದ್ಯುತ್ ಸಂಬಂಧಿತ ಅಪಘಾತ ಪ್ರಕರಣಗಳು ಹೆಚ್ಚಾಗಿ ಸಂಭವಿಸುತ್ತಿದ್ದು, ಇಂತಹ ಪ್ರಕರಣಗಳನ್ನು ನಿಯಂತ್ರಣಕ್ಕೆ ತರಬೇಕಿದೆ. ವಿದ್ಯುತ್ ಮಾರ್ಗಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತಹ ರೀತಿಯಲ್ಲಿ ವಿದ್ಯುತ್ ಜಾಲಗಳನ್ನು, ವಿದ್ಯುತ್ ಪರಿವರ್ತಕ ಕೇಂದ್ರಗಳನ್ನು ಅಥವಾ ವಿದ್ಯುತ್ ಉಪಕೇಂದ್ರಗಳನ್ನು ನಿರ್ಮಿಸಲಾಗುತ್ತಿದ್ದು, ಸಾರ್ವಜನಿಕರು ಕೆಲವು ಪ್ರಮುಖ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯವಾಗಿದೆ.

ಅಕ್ರಮ ವಿದ್ಯುತ್ ಸಂಪರ್ಕ ಪಡೆಯುವುದು, ವಿದ್ಯುತ್ ಮಾರ್ಗಗಳಿಂದ ಬೇಲಿಗಳ ತಂತಿಗಳಿಗೆ ವಿದ್ಯುತ್ ಹಾಯಿಸುವುದು ಅಥವಾ ದೋಷಪೂರಿತ ವಿದ್ಯುತ್ ಉಪಕರಣಗಳನ್ನು ಬಳಸುವುದರಿಂದ ವಿದ್ಯುತ್ ಅವಘಡಗಳು ಸಂಭವಿಸುತ್ತದೆ. ರೈತರು ಹೊಲ/ಗದ್ದೆಗಳಲ್ಲಿ ಕೆಲಸ ಮಾಡುವಾಗ ಹಾದುಹೋಗಿರುವ ವಿದ್ಯುತ್ ತಂತಿಗಳು ಹಾಗೂ ಯಾವುದೇ ರೀತಿಯ ವಿದ್ಯುತ್ ತಂತಿಗಳ ಬಗ್ಗೆ ಜಾಗ್ರತೆ ವಹಿಸಬೇಕು. ಸಾರ್ವಜನಿಕರು ಮಾತ್ರವಲ್ಲದೇ ಪವರ್’ಮ್ಯಾನ್’ಗಳು ಸಹ ವಿದ್ಯುತ್ ಸುರಕ್ಷತೆಯ ಬಗ್ಗೆ ಸರಿಯಾದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡು ಕಾರ್ಯನಿರ್ವಹಿಸಬೇಕು.

ಸಾರ್ವಜನಿಕರು ಎಚ್ಚೆತ್ತುಕೊಂಡು ವಿದ್ಯುತ್ ನಿಂದ ಆಗುವ ಅವಘಡಗಳ ಬಗ್ಗೆ ಇತರರಿಗೂ ಅರಿವು ಮೂಡಿಸಬೇಕು.

ವಿದ್ಯುತ್ ಅವಘಡಗಳು ಸಂಭವಿಸದಂತೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು:

 • ಐ.ಎಸ್.ಐ ಅಂಗೀಕೃತ ವಿದ್ಯುತ್ ಉಪಕರಣಗಳನ್ನು ಬಳಸಿ.
 • 3-ಪಿನ್ ಸಾಕೆಟ್’ಗಳನ್ನು ಬಳಸಿ.
 • ಮಕ್ಕಳು ವಿದ್ಯುತ್ ಉಪಕರಣಗಳನ್ನು ಮುಟ್ಟದಂತೆ ಎಚ್ಚರವಹಿಸಿ.
 • ದೋಷಪೂರಿತ ವಿದ್ಯುತ್ ಉಪಕರಣಗಳನ್ನು ನುರಿತ ಇಲೆಕ್ಷ್ರಿಷಿಯನ್ ಸಹಾಯದಿಂದ ದುರಸ್ತಿಪಡಿಸಿ.
 • ವಿದ್ಯುತ್ ಪರಿಕರಗಳನ್ನು ಒದ್ದೆ ಕೈಯಿಂದ ಸ್ಪರ್ಶಿಸದಿರಿ.
 • ವಿದ್ಯುತ್ ಟ್ರಾನ್ಸ್’ಫಾರ್ಮರ್ ಬಳಿ ಹೋಗದಿರಿ.
 • ಬಳಕೆಯಿಲ್ಲದೇ ಇದ್ದಾಗ ವಿದ್ಯುತ್ ಉಪಕರಣಗಳನ್ನು ಅನ್ ಪ್ಲಗ್ ಮಾಡಿ.
 • ವಿದ್ಯುತ್ ಮಾರ್ಗಗಳ ಸಮೀಪ ವಾಹನ ಚಲಾಯಿಸುವಾಗ ಎಚ್ಚರಿಕೆಯಿರಲಿ.
 • ವಿದ್ಯುತ್ ಉಪಕೇಂದ್ರಗಳ ಸಮೀಪ ಅಪ್ಪಣೆಯಿಲ್ಲದೆ ವ್ಯವಹರಿಸದಿರಿ.
 • ಮಕ್ಕಳು ವಿದ್ಯುತ್ ತಂತಿಗಳ ಸಮೀಪ ಗಾಳಿಪಟಗಳನ್ನು ಹಾರಿಸದಂತೆ ಎಚ್ಚರವಹಿಸಿ.
 • ತುಂಡಾಗಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಸ್ಪರ್ಶಿಸದಿರಿ.
 • ಮೊಬೈಲ್ ಚಾರ್ಜ್ ಆಗುವ ಸಂದರ್ಭದಲ್ಲಿ ಮೊಬೈಲ್ ಅನ್ನು ಬಳಸದಿರಿ.

ವಿದ್ಯುತ್ ಅವಘಡಗಳು ಸಂಭವಿಸಿದಲ್ಲಿ ಚಾ.ವಿ.ಸ.ನಿ.ನಿ ಯ 24×7 ಸಹಾಯವಾಣಿ 1912 ಕ್ಕೆ ಕರೆಮಾಡಿ ತಿಳಿಸಿ.

You might also like
Leave A Reply

Your email address will not be published.