ಪೊಲೀಸರಿಗೂ ಡೋಂಟ್ ಕೇರ್ ಎಂದ ವ್ಹೀಲಿಂಗ್ ಪುಂಡರು

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮತ್ತೆ ಹೆಚ್ಚಾಗಿದೆ. ಬೈಕ್ ವ್ಹೀಲಿಂಗ್ ಗೆ ಪೊಲೀಸರು ಎಷ್ಟೇ ಕಡಿವಾಣ ಹಾಕಿದರೂ, ಬೈಕ್ ವ್ಹೀಲಿಂಗ್ ಮಾಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ಪ್ರಾಣವನ್ನು ಲೆಕ್ಕಿಸದೆ ವ್ಹೀಲಿಂಗ್ ಮಾಡುವ ಪುಂಡರು ಒಂದೆಡೆಯಾದರೆ ಅವರ ಡೆಡ್ಲಿ ವ್ಹೀಲಿಂಗ್ ಮಾಡುವ ವಿಡಿಯೋಗಳನ್ನು ಸೆರೆ ಹಿಡಿಯುವವರು ಮತ್ತೊಂದೆಡೆ. ಹಾಡು ಹಗಲೇ ವ್ಹೀಲಿಂಗ್ ಮಾಡುವ ಪುಂಡರಿಗಿಲ್ಲವೇ ಭಯ?

ರಾಜಧಾನಿಯ ಯಾವ ಸ್ಥಳಗಳಲ್ಲಿ ವ್ಹೀಲಿಂಗ್ ಮಾಡುವವರು ಹೆಚ್ಚು?
ಬೆಂಗಳೂರಿನ ನಾಗರಭಾವಿ ರಿಂಗ್ ರೋಡ್, ಜಯನಗರ ಮೆಟ್ರೋ ಪಿಲ್ಲರ್ ಕೆಳಗೆ, ಬಸವನಗುಡಿ ಪ್ಲೈ ಓವರ್ಸ್ ಸೇರಿದಂತೆ ಹಲವು ಕಡೆ ವ್ಹೀಲಿಂಗ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

ಸಂಚಾರ ಪೊಲೀಸರಿಗೆ ತಲೆನೋವಾಗಿರುವ ಪುಂಡರು!


ಪೊಲೀಸರು ಅಪಾಯಕಾರಿ ವ್ಹೀಲಿಂಗ್ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ, ಸಂಚಾರ ಪೊಲೀಸರಿಗೂ ಡೋಂಟ್ ಕೇರ್ ಎಂದ ಯುವಕರು ಬೇರೆಯವರಿಗೂ ತಲೆನೋವಾಗಿದ್ದಾರೆ. ಇತರ ಸವಾರರು ತಮ್ಮ ಜೀವವನ್ನು ಕೈಯಲ್ಲಿಡಿದು ಭಯದಲ್ಲೇ ಗಾಡಿ ಓಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಅಪಾಯಕಾರಿ ವ್ಹೀಲಿಂಗ್ ಮೂಲಕ ಸುರಕ್ಷಿತ ಸವಾರರಿಗೂ ಆತಂಕ:
ಹಲವು ವಾಹನಗಳ ಮಧ್ಯೆಯೇ ಗಂಟೆಗಟ್ಟಲೇ ವ್ಹೀಲಿಂಗ್ ಮಾಡುವ ಪುಂಡರ ಗ್ಯಾಂಗ್ ನಿಂದ ಸುರಕ್ಷಿತವಾಗಿ ವಾಹನ ಚಲಾಯಿಸುವ ಸವಾರರು ಭಯದಲ್ಲೇ ವಾಹನ ಚಲಾಯಿಸುವಂತಾಗಿದೆ. ವ್ಲೀಲಿಂಗ್ ಮಾಡುವ ವೇಳೆ ಅಕ್ಕಪಕ್ಕದ ಗಾಡಿಗಳಿಗೆ ಸ್ವಲ್ಪ ಟಚ್ಚಾದರೂ ಡೆಡ್ಲಿ ಆಕ್ಸಿಡೆಂಟ್ ಆಗುವುದು ಮಾತ್ರ ಗ್ಯಾರೆಂಟಿ.

ಅರೆಸ್ಟ್ ಮಾಡಿದ್ರು ಮತ್ತೆ ಅದೇ ಚಾಳಿ!
ಇತ್ತೀಚೆಗಷ್ಟೆ ಆರ್.ಟಿ.ನಗರ ಪೊಲೀಸರು ವ್ಹೀಲಿಂಗ್ ಮಾಡುವ ಯುವಕನನ್ನು ಅರೆಸ್ಟ್ ಮಾಡಿದ್ದರು. ಜಾಮೀನಿನಿಂದ ಹೊರಬಂದ ಮೇಲೆ ಮತ್ತೆ ಅದೇ ಚಾಳಿ ಮುಂದುವರಿಸಿದ್ದಾನೆ. ನಂಬರ್ ಪ್ಲೇಟ್ ಇದ್ರೆ ಬೈಕ್ ಮಾಲೀಕರ ಪತ್ತೆ ಹಚ್ಚುತ್ತಾರೆಂದು ನಂಬರ್ ಪ್ಲೇಟ್ ಇಲ್ಲದೆ ಬೈಕ್ ವ್ಹೀಲಿಂಗ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ದಾನೆ. ಸದ್ಯ ಈ ಯುವಕನ ವ್ಹೀಲಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ನಿಮ್ಮ ಸುತ್ತಮುತ್ತ ಡೆಡ್ಲಿ ವ್ಹೀಲಿಂಗ್ ಮಾಡುತ್ತಿರುವ ದೃಶ್ಯ ಕಂಡುಬಂದಲ್ಲಿ, ಬೆಂಗಳೂರು ಸಂಚಾರ ಪೊಲೀಸ್ ನ ಎಕ್ಸ್ ಅಥವಾ ಟ್ವಿಟರ್ ಖಾತೆ @blrcitytraffic ಗೆ ಟ್ಯಾಗ್ ಮಾಡಿ ಹಂಚಿಕೊಳ್ಳಿ. ಹಾಗೂ ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಸಹಕರಿಸಿ.

You might also like
Leave A Reply

Your email address will not be published.