ತಲೆ ಹೊಟ್ಟಿನ ಸಮಸ್ಯೆ: ಶಾಂಪೂ ಮತ್ತು ಬೇವಿನ ರಸದಲ್ಲಿ ಅಡಗಿದೆ ಶೀಘ್ರ ಪರಿಹಾರ!

ತಲೆಯಲ್ಲಿ ಹೊಟ್ಟು ಹೆಚ್ಚಾಗಿ ತುರಿಕೆ ಹೆಚ್ಚಾಗಿದ್ಯಾ? ಆ ಹೊಟ್ಟಿನ ಪುಡಿಗಳು ನಿಮ್ಮ ಡ್ರೆಸ್ ಮೇಲೆ ಬಿದ್ದು ಅನ್ಯರ ಮುಂದೆ ಮುಜುಗರಕ್ಕೆ ಒಳಪಡಿಸುತ್ತಿದ್ಯಾ? ಇದರಿಂದ ಕೂದಲು ಉದುರಿ, ಮೊಡವೆ ಹೆಚ್ಚಾಗುತ್ತಿದ್ಯಾ? ತಲೆ ಹೊಟ್ಟಿಗೆ ಕಾರಣವೇನು? ಪರಿಹಾರವೇನೋ ಸಾಕಷ್ಟಿದೆ, ಆದರೆ ಈ ಸಮಸ್ಯೆಗೆ ಶೀಘ್ರ ಪರಿಹಾರ ಕಂಡುಕೊಳ್ಳಲು ಇಲ್ಲಿದೆ ಟಿಪ್ಸ್.

ತಲೆ ಹೊಟ್ಟಿಗೆ ಪ್ರಮುಖ ಕಾರಣವೇನು?

ಒಂದು ಸಮಸ್ಯೆ ಎದುರಾಗುತ್ತಿದೆ ಎಂದರೆ ಅದು ಯಾಕೆ ಆಗುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಮೂಲ ಸಮಸ್ಯೆಯನ್ನು ತಡೆಗಟ್ಟಿದರೆ ಅರ್ಧ ಸಮಸ್ಯೆ ಮುಕ್ತವಾಗುತ್ತಂತೆ. ತಲೆ ಕೂದಲಲ್ಲಿ ಎಣ್ಣೆ ಹೆಚ್ಚಾದರೆ ಅಥವಾ ಕೂದಲಿನ ಬುಡ ಒಣಗಿದರೆ ಶಿಲೀಂದ್ರಗಳ ಸೋಂಕಿನಿಂದಾಗಿ ತಲೆಹೊಟ್ಟಿನ ಸಮಸ್ಯೆ ಕಂಡು ಬರುತ್ತದೆ. ಹಾಗೆಯೇ ನಾವು ಬಳಸುವ ಹೇರ್ ಕೇರ್ ಪ್ರಾಡಕ್ಟ್ ಗಳು, ಕಲರಿಂಗ್, ಕೂದಲಲ್ಲಿ ಎಣ್ಣೆ ಉಳಿಸಿಕೊಳ್ಳುವುದು ಹೀಗೆ ನಾನಾ ಸಮಸ್ಯೆಗಳು ಕಾರಣವಾಗುತ್ತದೆ.

ತಲೆ ಹೊಟ್ಟು ಆಗದಂತೆ ತಡೆಯಲು ಪ್ರಯತ್ನಿಸಿ!

ಬೇಸಿಗೆ, ಮಳೆ, ಚಳಿ ಹೀಗೆ ಎಲ್ಲಾ ಕಾಲದಲ್ಲೂ ತಲೆ ಹೊಟ್ಟು ಕಾಮನ್. ಅದನ್ನು ತಡೆಯಲು ಹೀಗೆ ಮಾಡಿ..
1. ಪ್ರತಿ ಎರಡು ದಿನಕ್ಕೊಮ್ಮೆ ಮೈಲ್ಡ್ ಶಾಂಪೂ ಬಳಸುವ ಮೂಲಕ ತಲೆ ಸ್ನಾನ ಮಾಡಿ.
2. ತಲೆ ಸ್ನಾನಕ್ಕೂ ಮುಂಚೆ ಒಂದು ಚಮಚ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ತಲೆಗೆ ಹಚ್ಚಿ.
3. ತಲೆ ಸ್ನಾನದ ಬಳಿಕ ಕೂದಲನ್ನು ಚೆನ್ನಾಗಿ ಒಣಗಿಸಿ. ಒಣಗಿಸಲು ಡ್ರೈಯರ್ ಬಳಸಬೇಡಿ.
4. ಬಾಹ್ಯ ಆರೈಕೆ ಮಾತ್ರ ಸಾಲದು, ಪೌಷ್ಠಿಕ ಆಹಾರದ ಸೇವನೆಯನ್ನು ಹೆಚ್ಚಿಸಿಕೊಳ್ಳಿ.
5. ಮಾನಸಿಕ ನೆಮ್ಮದಿ ಕಾಯ್ದುಕೊಳ್ಳಿ. ಒತ್ತಡ ಹೆಚ್ಚಾದರೆ ತಲೆ ಹೊಟ್ಟಾಗುವುದಿಲ್ಲ. ಆದರೆ ತ್ವಚೆ ಒಣಗುತ್ತದೆ. ಇದರಿಂದ ತಲೆಹೊಟ್ಟಿನ ಸಮಸ್ಯೆ ಬರುತ್ತದೆ.
6. ಅನ್ಯರ ಮಾತುಗಳಿಗೆ ಮರುಳಾಗಿ ದಿನಕ್ಕೊಂದು ಆಯಿಲ್, ಶಾಂಪೂಗಳನ್ನು ಬದಲಾಯಿಸಬೇಡಿ.

ಶಾಂಪೂ ಮತ್ತು ಬೇವಿನ ರಸ ಬಳಸಿ, ಪರಿಹಾರ ಕಂಡುಕೊಳ್ಳಿ:

ಗುಣದಲ್ಲಿ ಕಹಿಯಿದ್ದರೂ, ಸರ್ವರೋಗಕ್ಕೂ ಕಲ್ಪವೃಕ್ಷವೆಂದರೆ ಬೇವು. ಮನುಷ್ಯನ ದೈಹಿಕ, ಮಾನಸಿಕ ಹಾಗೂ ಪರಮಾರ್ಥಿಕ ಸುಧಾರಣೆಗಳಲ್ಲಿ ಬೇವಿನ ಪಾತ್ರ ಅಧಿಕವಾಗಿದೆ. ತಾಮ್ರ, ಪೊಟ್ಯಾಷಿಯಂ, ಕ್ಯಾಲ್ಸಿಯಂ, ಮೆಗ್ನೀಷಿಯಂ, ಕಬ್ಬಿಣದ ಅಂಶ, ವಿಟಮಿನ್ ಇ ಸೇರಿದಂತೆ ಹಲವು ಪ್ರಮಾಣಗಳು ಹೆಚ್ಚಾಗಿರುತ್ತದೆ.

ಕೂದಲಿನ ಬೆಳವಣಿಗೆಗೆ ವಿಟಮಿನ್ ಸಿ ಮುಖ್ಯವಾಗಿದ್ದು, ಅದು ಬೇವಿನೆಲೆಯಲ್ಲಿ ಹೇರಳವಾಗಿದೆ. ಮಾರುಕಟ್ಟೆಯಲ್ಲಿ ಕೂದಲಿನ ಆರೈಕೆಗೆಂದು ಸಾಕಷ್ಟು ಪ್ರಮಾಣದಲ್ಲಿ ಶಾಂಪೂಗಳು ವಕ್ಕರಿಸಿಕೊಂಡಿದ್ದು, ಯಾವುದನ್ನು ಬಳಸಬೇಕೆಂಬ ಗೊಂದಲ ನಮ್ಮಲ್ಲಿ ಸಹಜವಾಗಿದೆ. ತಲೆ ಸ್ನಾನ ಮಾಡುವಾಗ ನೀವು ಬಳಸುವ ಶಾಂಪೂವಿನೊಂದಿಗೆ ಸ್ವಲ್ಪ ಬೇವಿನ ರಸವನ್ನು ಬೆರೆಸಿ ತಲೆಗೆ ಹಚ್ಚಿದರೆ ತಲೆ ಹೊಟ್ಟಿನ ಸಮಸ್ಯೆ ನಿವಾರಣೆಯಾಗುವುದರೊಂದಿಗೆ, ಕೂದಲಿನ ಬೆಳವಣಿಗೆಯು ಹೆಚ್ಚಾಗುತ್ತದೆ.

You might also like
Leave A Reply

Your email address will not be published.