ಮೋದಿಜೀ ಮನಗೆದ್ದ ಕನ್ನಡದ ಹಾಡು – ಪೂಜಿಸಲೆಂದೇ ಹೂಗಳ ತಂದೆ

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆಗೆ ಪೂರ್ವಭಾವಿ ಕಾರ್ಯಕ್ರಮದ ಸಿದ್ಧತೆಗಳು ನಡೆಯುತ್ತಿದ್ದಾಗೆ ಪ್ರಧಾನಿ ನರೇಂದ್ರ ಮೋದಿ ಅವರು ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಅವರು ಯೂಟ್ಯೂಬ್ನಲ್ಲಿ ಹಾಡಿರುವ ‘ಪೂಜಿಸಲೆಂದೇ ಹೂಗಳ ತಂದೆ’ ಎಂಬ ಕನ್ನಡ ಹಾಡಿನ ಲಿಂಕ್ ಅನ್ನು ಶೇರ್ ಮಾಡುವ ಮೂಲಕ ಗಮನಸೆಳೆದಿದ್ದಾರೆ.

ಪ್ರಧಾನಿ ಶ್ರೀ ನರೇಂದ್ರ ಮೋದಿಯವರು ಕಳೆದ ಕೆಲವು ದಿನಗಳಿಂದ ಹೆಸರಾಂತ ಗಾಯಕ ಜುಬಿನ್ ನೌಟಿಯಾಲ್, ಹಂಸರಾಜ್ ರಘುವಂಶಿ, ಡಾ. ಎಂ. ಬಾಲಮುರುಳಿ ಕೃಷ್ಣ, ಸೂರ್ಯ ಗಾಯತ್ರಿ, ಸೇರಿದಂತೆ ಹಲವು ಗಾಯಕರ ಪ್ರಭು ಶ್ರೀ ರಾಮನಿಗೆ ಸಂಬಂಧಿಸಿದ ಭಜನೆಗಳನ್ನು ತಮ್ಮ ಎಕ್ಸ್ ಖಾತೆ ಹಾಗೂ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ #ShriRamBhajan ಹ್ಯಾಷ್‌ಟ್ಯಾಗ್ ಬಳಸುವ ಮೂಲಕ ಹಂಚಿಕೊಳ್ಳುತ್ತಿದ್ದು, ಜುಬಿನ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರಧಾನಿಯವರು ಮಾಡಿದ ಟ್ವೀಟ್ ಅನ್ನು ರೀಶೇರ್ ಮಾಡಿ ಸಂತಸ ವ್ಯಕ್ತಪಡಿಸಿದ್ದರು.

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ಹಾಡಿನ ಲಿಂಕ್ ಅನ್ನು ಶೇರ್ ಮಾಡಿದ್ದು, “ಶಿವಶ್ರೀ ಸ್ಕಂದಪ್ರಸಾದ್ ಅವರು ಕನ್ನಡದಲ್ಲಿ ಮಾಡಿರುವ ಈ ನಿರೂಪಣೆಯು ಪ್ರಭು ಶ್ರೀರಾಮನ ಭಕ್ತಿಯ ಮನೋಭಾವವನ್ನು ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಬಹಳ ದೂರ ಸಾಗುತ್ತವೆ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಪೂಜಿಸಲೆಂದೇ ಹೂಗಳ ತಂದೆ; ಎರಡು ಕನಸು ಸಿನಿಮಾದ ಹಾಡು

ಪೂಜಿಸಲೆಂದೇ ಹೂಗಳ ತಂದೆ ಹಾಡು ಕೇಳಿದ ಕೂಡಲೇ ನೆನಪಾಗುವುದು ಕನ್ನಡದ ಮಿನುಗು ತಾರೆ ಕಲ್ಪನಾ ಮತ್ತು ವರ ನಟ ಡಾ.ರಾಜ್ ಕುಮಾರ್ ನಟನೆಯ ಹಾಗೂ ದೊರೈ-ಭಗವಾನ್ ನಿರ್ದೇಶನದ ಎರಡು ಕನಸು ಸಿನಿಮಾ.

1974 ರಲ್ಲಿ ತೆರೆ ಕಂಡ ಸಿನಿಮಾವಾಗಿದ್ದು, ಚಿ. ಉದಯಶಂಕರ್ ಅವರು ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ನೀಡಿದ್ದು, ಖ್ಯಾತ ಗಾಯಕಿ ಎಸ್ ಜಾನಕಿಯವರು ಹಾಡಿದ್ದಾರೆ.

ಇದೀಗ ಯುವ ಗಾಯಕಿ ಶಿವಶ್ರೀ ಸ್ಕಂದ ಪ್ರಸಾದ್ ಇದೇ ಹಾಡನ್ನು ಹಾಡಿ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿದ್ದರ ಬೆನ್ನಲ್ಲೇ ಪ್ರಧಾನಿ ಮೋದಿ ಇದೇ ಲಿಂಕ್ ಅನ್ನು ಶೇರ್ ಮಾಡಿದ್ದಾರೆ.

ಯಾರು ಈ ಶಿವಶ್ರೀ ಸ್ಕಂದ ಪ್ರಸಾದ್?

ಶಿವಶ್ರೀ ಸ್ಕಂದ ಪ್ರಸಾದ್ ಅವರು ಚೆನ್ನೈ ನಿವಾಸಿಯಾಗಿದ್ದು, ಜಾವೂರಿನ ಶಾಸ್ತ್ರ ವಿಶ್ವವಿದ್ಯಾಲಯದಿಂದ ಬಿ.ಟೆಕ್ (ಬಯೋ-ಎಂಜಿನಿಯರಿಂಗ್) ಪದವಿ ಪಡೆದವರು. ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂಎ ಭರತನಾಟ್ಯ ಮತ್ತು ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂಎ ವ್ಯಾಸಂಗ ಮಾಡುತ್ತಿದ್ದಾರೆ.

You might also like
Leave A Reply

Your email address will not be published.