ಅಯೋಧ್ಯೆ – ಭಕ್ತರನ್ನು ಚಳಿಯಿಂದ ಕಾಪಾಡಲು ಮುನ್ಸಿಪಲ್ ಕಾರ್ಪೋರೇಷನ್ ಕೈಗೊಂಡ ಕ್ರಮ ಇದು, ಓದಿ

ಅಯೋಧ್ಯೆಯ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ಉತ್ತರಪ್ರದೇಶವಲ್ಲದೇ ದೇಶಾದ್ಯಂತ ಚಳಿ ಆವರಿಸಿಕೊಂಡಿದೆ. ತಾಪಮಾನವು ಕುಗ್ಗುತ್ತಿದೆ. ಇದೇ ವೇಳೆ, ದೇಶ-ವಿದೇಶಗಳಿಂದ ಪ್ರಸಿದ್ಧ ವ್ಯಕ್ತಿಗಳು ಶ್ರೀರಾಮನ ದರ್ಶನಕ್ಕಾಗಿ ಬರಲಿದ್ದಾರೆ. ಈ ನಿಟ್ಟಿನಲ್ಲಿ ಅಯೋಧ್ಯೆ ಮುನ್ಸಿಪಲ್ ಕಾರ್ಪೊರೇಷನ್ ಅಯೋಧ್ಯೆಗೆ ಆಗಮಿಸುವ ಗಣ್ಯರಿಗಾಗಿ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ.

ಹೌದು, ಉತರಪ್ರದೇಶ ಸೇರಿದಂತೆ ದೇಶಾದ್ಯಂತ ವಿಪರೀತ ಚಳಿ ಇದ್ದು, ಚಳಿಯಿಂದಾಗಿ ಮಂಜು ಕೂಡ ದಟ್ಟವಾಗುತ್ತಿದೆ. ಈ ಮಂಜು ಮುಸುಕಿರುವುದರಿಂದ ರೈಲುಗಳು ಮತ್ತು ವಿಮಾನ ಸೇವೆಗಳಲ್ಲಿ ವ್ಯತ್ಯಯವಾಗುವ ಲಕ್ಷಣಗಳು ಅಧಿಕವಾಗಿದೆ. ರಸ್ತೆಗಳಲ್ಲಿಯೂ ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಹೀಗಾಗಿ ಈ ಚಳಿಯನ್ನು ಗಮನದಲ್ಲಿಟ್ಟುಕೊಂಡು ಅಯೋಧ್ಯೆಯಲ್ಲಿ ವಿಶೇಷ ವ್ಯವಸ್ಥೆಯೊಂದನ್ನು ಮಾಡಲಾಗಿದೆ. ಏನದು ವ್ಯವಸ್ಥೆ? ಎಂಬ ಮಾಹಿತಿ ಇಲ್ಲಿದೆ.

ಭಕ್ತರನ್ನು ಚಳಿಯಿಂದ ರಕ್ಷಿಸಲು ಮುನ್ಸಿಪಲ್ ಕಾರ್ಪೊರೇಶನ್ ಅಯೋಧ್ಯೆಯಾದ್ಯಂತ ಹಲವಾರು ಸ್ಥಳಗಳಲ್ಲಿ ಸ್ವಲ್ಪ ಕೆಂಪು ಬಣ್ಣದಲ್ಲಿರುವ ಹೊರಾಂಗಣ ಹೀಟರ್ಗಳನ್ನು ಅಳವಡಿಸಲಾಗಿದೆ. ಇದು ತಾಪಮಾನವು ಕುಸಿಯುತ್ತಿರುವ ನಡುವೆ ಜನರನ್ನು ಬೆಚ್ಚಗಾಗಿಸಲು ಸಹಾಯ ಮಾಡುತ್ತದೆ. ಈ ಹೀಟರ್ ಗಳಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿಯೂ ಜನರು ಚಳಿಯ ಅನುಭವ ಪಡೆಯುವುದು ಕಡಿಮೆ. ಈ ನಿಟ್ಟಿನಲ್ಲಿ ಅಯೋಧ್ಯೆಗೆ ಆಗಮಿಸುವ ಸಾರ್ವಜನಿಕರು ವಾತಾವರಣದ ಏರುಪೇರಿನ ಭಯವಿಲ್ಲದೇ ರಾಮಲಲ್ಲಾನ ದರ್ಶನವನ್ನು ಅರಾಮದಾಯಕವಾಗಿ ಪಡೆಯಬಹುದಾಗಿದೆ.

You might also like
Leave A Reply

Your email address will not be published.