ರಾಮ ಮಂದಿರ – ನಕಲಿ ಜಾತ್ಯಾತೀತರೇ ಯಾಕಿಷ್ಟು ದ್ವೇಷ?

ರಾಮ‌ ಮಂದಿರದ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ದೇಶದ ನಾನಾ ಕಡೆಯಿಂದ ಭಕ್ತ ಸಮೂಹವು ಮಂದಿರಕ್ಕಾಗಿ ತಮ್ಮ ರಾಜ್ಯದಿಂದ ವಿಶೇಷವಾದ ಉಡುಗೊರೆಗಳನ್ನು ಕಳುಹಿಸುತ್ತಿದ್ದಾರೆ. ಅಷ್ಟೇ ಯಾಕೆ ಸೀತಾಮಾತೆಯ ತವರೂರು ನೇಪಾಳದಿಂದಲೂ ರಾಮ ಮಂದಿರಕ್ಕೆ ಉಡುಗೊರೆಗಳ ಹೊಳೆಯೇ ಹರಿದು ಬಂದಿದೆ. ಮಂದಿರವನ್ನು ಕಣ್ತುಂಬಿಕೊಳ್ಳಲು ಭಕ್ತ ಜನರು ಕಾತರದಿಂದ ಕಾದಿದ್ದಾರೆ.

Ayodhya Ram Mandir

ಇನ್ನೊಂದು ಕಡೆ, ಮಂದಿರಕ್ಕಾಗಿ ನಡೆದ 400-500 ವರ್ಷಗಳ ಹೋರಾಟವನ್ನು ಲೆಕ್ಕಿಸದೆ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಬಿಜೆಪಿಯ ಕಾರ್ಯಕ್ರಮವೆಂದು ಬಿಂಬಿಸಿ ಕಾರ್ಯಕ್ರಮದಿಂದ ದೂರ ಉಳಿಯಲು ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ನಿರ್ಧರಿಸಿದ್ದರೆ, ಒಂದು ಹೆಜ್ಜೆ ಮುಂದೆ‌ ಎಂಬಂತೆ ‘ಬಿಜೆಪಿಯು ರಾಮನಿಗಾಗಿ ಮನೆ ನಿರ್ಮಿಸುತ್ತಿದ್ದಾರೆ, ಬಿಜೆಪಿಯ ಬಳಿ ತುಂಬಾ ಪವರ್ ಇದೆ. ಎಷ್ಟೆಂದರೆ ರಾಮನಿಗೇ ಮನೆ ನಿರ್ಮಿಸಿ ಕೊಡುವಷ್ಟು ಎಂದು ತೃಣಮೂಲ ಕಾಂಗ್ರೆಸ್‌ನ ಸಂಸದೆ ಸತಾಬ್ದಿ ರೋಯ್ ಹೇಳಿದ್ದಾರೆ.

ಅಷ್ಟೇ ಅಲ್ಲದೇ, ರಾಮ ಬಹುಶಃ ಬಿಪಿಎಲ್ (BPL) ಫಲಾನುಭವಿ ಇರಬಹುದು, ಯಾಕೆಂದರೆ ಬಿಪಿಎಲ್ ಇರುವವರಿಗೆ ಮನೆ ನಿರ್ಮಿಸಿ ಕೊಡುವಂತೆ ರಾಮನಿಗೂ ಕೂಡಾ ಬಿಪಿಎಲ್ ಸ್ಕೀಮ್ ಅಡಿಯಲ್ಲಿ ಮನೆ ನಿರ್ಮಾಣ ಕಾರ್ಯ ಆಗುತ್ತಿದೆ ಎಂದು ಹೇಳುವ ಮೂಲಕ‌ ನಾಲಿಗೆ ಹರಿಯಬಿಟ್ಟಿದ್ದಾರೆ. ಸತಾಬ್ದಿಯವರ ಹೇಳಿಕೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

ತೃಣ ಮೂಲ ಕಾಂಗ್ರೆಸ್‌ನ ರಾಮ ವಿರೋಧಿ ವರ್ತನೆಗಳು ಇದು ಹೊಸದೇನು ಅಲ್ಲ, ಈ ಮೊದಲು (2019) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರ ಎದುರು ಜೈ ಶ್ರೀ ರಾಮ್ ಘೋಷಣೆ ಕೂಗಿದ್ದಕ್ಕೆ ಸಿಟ್ಟಾದ ಅವರು ಹಿಂದೂಗಳ‌ ಪವಿತ್ರ ಸ್ಲೋಗನ್‌ಗಳ ಹೆಸರಲ್ಲಿ ಕೂಗುವ ಕೆಲವು ಘೋಷಣೆಗಳು ಕ್ರಿಮಿನಲ್ ಘೋಷಣೆಗಳಾಗಿವೆ ಹಾಗೆ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದರು.

You might also like
Leave A Reply

Your email address will not be published.