ಗೂಂಡಾ ರಾಜ್ಯವಾಗಿದೆಯಾ ಪಶ್ಚಿಮ ಬಂಗಾಳ?

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ‌ಮುಖಂಡನ ಮನೆಗೆ ಬಂದ ಇ.ಡಿ.‌ ಅಧಿಕಾರಿಯ ಮೇಲೆ ಅದೇ ಮುಖಂಡನ ಬೆಂಬಲಿಗರು ದಾಳಿ ನಡೆಸಿ ಮಾರಣಾಂತಿಕ ಹಲ್ಲೆ ನಡೆಸಿ ಕೆಲವೇ ದಿನಗಳು ಕಳೆದದ್ದಷ್ಟೇ ಅಷ್ಟರಲ್ಲೇ ಇನ್ನೊಂದು ದಾಳಿಯಾಗಿದೆ. ಆದರೆ ಈ ಬಾರಿ ದಾಳಿ ನಡೆದದ್ದು ಸಾಧುಗಳ ಮೇಲೆ!!

ಮಕರ ಸಂಕ್ರಾಂತಿಯ ಪ್ರಯುಕ್ತ ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ನಡೆಯಲಿರುವ ಗಂಗಾಸಾಗರ ಮೇಳಕ್ಕೆ ತೆರಳುತ್ತಿದ್ದ ಮೂವರು ಸಾಧುಗಳ ಮೇಲೆ ದಾಳಿ ಮಾಡಿದ ಕಿಡಿಗೇಡಿಗಳ ಗುಂಪೊಂದು ಸಾಧುಗಳ ತಲೆಕೂದಲು, ಬಟ್ಟೆಗಳನ್ನು ಎಳೆದು ಕೋಲುಗಳಿಂದ ಹೊಡೆಯುವ ಮೂಲಕ ತೀರಾ ಅಮಾನವೀಯವಾಗಿ ವರ್ತಿಸಿದ ಬಗ್ಗೆ ವರದಿಯಾಗಿದೆ. 10-12 ಜನ ಕಿಡಿಗೇಡಿಗಳು ಇದ್ದ ಜಾಗದಲ್ಲಿ ಕೆಲವೇ ಜನ ಪೋಲಿಸ್ ಇದ್ದು ಸಾಧುಗಳಿಗೆ ಅವರು ರಕ್ಷಣೆ ನೀಡಲು ಆಗದ ಸಂಧರ್ಭದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ತಮ್ಮ ಜೊತೆ ಅಮಾನವೀಯವಾಗಿ ವರ್ತಿಸುತ್ತಿದ್ದ ದುರುಳರ ಜೊತೆ ಸಾಧುಗಳು ಕೈ ಜೋಡಿಸಿಕೊಂಡು ಮನವಿ ಮಾಡಿಕೊಂಡ ರೀತಿ ಮಾತ್ರ ಪಾಲ್ಗಾರ್ ಸಾಧುಗಳ ಮೇಲೆ ನಡೆದ ದೌರ್ಜನ್ಯಕ್ಕೆ ಸಮನಾದದ್ದು ಎಂಬುದು ಹಲವರ ಅಭಿಪ್ರಾಯವಾಗಿದೆ.

ಇನ್ನು ಈ ವರದಿಯ ಬಗ್ಗೆ ಪಶ್ಚಿಮ ಬಂಗಾಳದ ಕಾಸಿಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಘಟನೆಗೆ ಸಂಭಂಧಿಸಿದಂತೆ 12 ಜನ ಆರೋಪಿಗಳನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಹಾಗೂ ಗಂಗಾಸಾಗರ್‌ಗೆ ತೆರಳಬೇಕಾಗಿದ್ದ ಸಾಧುಗಳಿಗೆ ಅಲ್ಲಿಂದ ವಾಹನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ‌ ಎಂದು ವರದಿಯಾಗಿದೆ‌.

You might also like
Leave A Reply

Your email address will not be published.